
ಮುಂಬಯಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ಮೀರಾ ರೋಡ್ ಪೂರ್ವದ ನಿವಾಸಿ, ಪ್ರತೀಕ್ಷಾ ಪ್ರಕಾಶ್ ಆಚಾರ್ಯ ಇವರು ಉತ್ತೀರ್ಣರಾಗಿದ್ದಾರೆ.
ಚರ್ಚ್ ಗೇಟ್ ನ ಸಿಡನ್ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಎಂಡ್ ಇಕಾನಾಮಿಕ್ಸ್ ನಿಂದ ಬಿ. ಕಾಮ್. ಪದವಿ ಪಡೆದಿರುವ ಇವರು ಮೂಲತಃ ಉಡುಪಿ ಪಡುಕುತ್ಯಾರು ಪ್ರಕಾಶ್ ಎಸ್ ಆಚಾರ್ಯ ಮತ್ತು ಜ್ಯೋತಿ ಆಚಾರ್ಯ ದಂಪತಿಗಳ ಪುತ್ರಿ.