
ಮುಂಬಯಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ಮಲಾಡ್ ಪಶ್ಚಿಮ, ಮಾಲ್ವಾಣಿ ನಿವಾಸಿ, ದಿವ್ಯಾ ವಿಶ್ವನಾಥ್ ಪೂಜಾರಿ ಇವರು ಉತ್ತೀರ್ಣರಾಗಿದ್ದಾರೆ.
ಈಕೆ ಮಲಾಡ್ ಪಶ್ಚಿಮದ ಮಲ್ವಾಣಿ ನಿವಾಸಿಗಳಾದ ಉದ್ಯಾವರ ಕುತ್ಪಾಡಿ ವಿಶ್ವನಾಥ್ ಪೂಜಾರಿ ಮತ್ತು ಕಾರ್ಕಳ ಕುಂಟಾಡಿ ವಿನಯಾ ಪೂಜಾರಿ ದಂಪತಿಯ ಪುತ್ರಿ.