
ಡೊಂಬಿವಲಿಯ ಕಲಾ ಪೋಷಕರೂ, ಕಲಾ ಪ್ರೇಮಿಗಳು ಆದ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ ಸಾಲ್ಯಾನ್ ಮತ್ತು ಭರತ್ ಶೆಟ್ಟಿ ಅವರು ಹುಟ್ಟುಹಾಕಿದ ನೂತನ ಕಲಾ ಸಂಸ್ಥೆ ಕಲಾತಂತ್ರ ಪ್ರೊಡಕ್ಷನ್, ಇದರ ಉದ್ಘಾಟನಾ ಸಮಾರಂಭ ಜುಲೈ 12ಕ್ಕೆ ಡೊಂಬಿವಲಿ ಪಶ್ಚಿಮ ಶ್ರೀ ಜಗದಂಬಾ ಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಜರಗಿತು.
ಶ್ರೀ ಜಗದಂಬಾ ಮಂದಿರದ ಅಧ್ಯಕ್ಷರಾದ ದಿವಾಕರ್ ರೈ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಯನ್ನು ಲೋಕಾರ್ಪಣಿಗೊಳಿಸಿದರು.



ಶ್ರೀ ಜಗಧಂಬಾ ಮಂದಿರದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಸಜೀಪಗುತ್ತು, ಕಲಾ ಪೋಷಕ ದಿನೇಶ್ ಪೂಜಾರಿ, ಬಿಜೆಪಿ ದಕ್ಷಿಣ ಘಟಕದ ಅಧ್ಯಕ್ಷ ರತನ್ ಪೂಜಾರಿ, ಶ್ರೀ ಜಗದಂಬಾ ಮಂದಿರದ ಪ್ರಧಾನ ಅರ್ಚಕರಾದ ರವೀಂದ್ರ ಭಟ್, ಶ್ರೀ ಜಗದಂಬಾ ಮಂದಿರದ ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಶಿಲ್ಪ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ನಿರ್ದೇಶಕ ತೇಜಸ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ್ ಸಾಲ್ಯಾನ್, ಮತ್ತು ಭರತ್ ಶೆಟ್ಟಿ, ಸೇರಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಸಂಯೋಜನೆಯಲ್ಲಿ ಜುಲೈ 28ರಂದು ಬೆಳ್ಳಿಗೆ 8.30 ಗಂಟೆಗೆ, ಡೊಂಬಿವಲಿಯ ಮಧುಬನ್ ಟಾಕೀಸ್ ನಲ್ಲಿ ನೂತನ ತುಳು ಚಿತ್ರ ‘ತುಡರ್’ ಬಿಡುಗಡೆಯಾಗಲಿದ್ದು, ತುಳು ಚಿತ್ರ ಪ್ರೇಮಿಗಳು, ತುಳುವರು ಹೆಚ್ಚಿನ ಸಂಖ್ಯೆಯಲ್ಲಿ, ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹ ನೀಡುವಂತ್ತೆ, ಕಲಾತಂತ್ರ ಪ್ರೊಡಕ್ಷನ್ ನ ಸಂತೋಷ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಚಿನ್ಮಯ್ ಸಾಲ್ಯಾನ್, ಭರತ್ ಶೆಟ್ಟಿ ವಿನಂತಿಸಿಕೊಂಡಿದ್ದಾರೆ.