ಮುಂಬಯಿ ಜು19. ಕುಲಾಲ ಸಂಘ ಮುಂಬಯಿಯ ಗುರುವಂದನಾ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಗುರುಪೂರ್ಣಿಮೆ ಆಚರಣೆಯು ಜುಲೈ 21 ರಂದು ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಗುರುಪೂರ್ಣಿ ಆಚರಣೆ ನಡೆಯಲಿದೆ,
ಜು21 ಭಾನುವಾರ ಬೆಳಿಗ್ಗೆ 9.30 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ಗುರು ಪೂರ್ಣಿಮೆಯ ಆಚರಣೆಯು ಕುಲಾಲ ಸಂಘದ ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಸಿಬ್ಬಂದಿಗಳು ಮತ್ತು ಪಿಗ್ಮಿ ಕಲೆಕ್ಷನ್ ಏಜೆಂಟ್‌ಗಳು ಸಯೋಗದಲ್ಲಿ ನಡೆಯಲಿದೆ,
ಸಮಾಜ ಬಾಂಧವರು,ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಬೇಕಾಗಿ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಉಪಾಧ್ಯಕ್ಷ ಡಿ ಐ ಮುಲ್ಯ , ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ಕೋಶಾಧಿಕಾರಿ ಜಯ ಅಂಚನ್ ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಿತಿ ಕಾರ್ಯಾಧ್ಯಕ್ಷ ಸುಂದರ್ ಎನ್ ಮೂಲ್ಯ ವಿನಂತಿಸಿಕೊಂಡಿದ್ದಾರೆ.