



ಉಡುಪಿ,ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 21ರಂದು, ಗುರು ಭಕ್ತರ, ಉಪಸ್ಥಿತಿಯಲ್ಲಿ ಭಕ್ತಿ, ಶ್ರದ್ದೆಯಿಂದ,ವಿಜೃಂಭಣೆಯಿಂದ ಜರಗಿತು.
ಅಂದು ಬೆಳ್ಳಿಗೆ 5 ಗಂಟೆಗೆ ಕಾಕಡ ಆರತಿ ಬೆಳಗಳಾಯಿತು.
ನಂತರ ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ನಿತ್ಯಾನಂದ ಸ್ವಾಮಿಗೆ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಬಾಲಾಭೋಜನ ಮತ್ತು ಅನ್ನಸಂತರ್ಪಣೆ ಆರಂಭವಾಯಿತು.




ತಡ ಸಂಜೆ ಪಲ್ಲಕ್ಕಿ ಉತ್ಸವ, ಮಹಾಪೂಜೆಯಾಗಿ ಸೇರಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಂದಿರದ ಆಡಳಿತ ಟ್ರಸ್ಟಿ, ಮುಂಬಯಿಯ ಉದ್ಯಮಿ ಕೆ. ಕೆ ಆವರ್ಸೆಕರ್, ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ದಿವಾಕರ ಶೆಟ್ಟಿ ತೋಟದಮನೆ, ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ, ಜಾಯಿಂಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ಮೋಹನ ಚಂದ್ರ ನಂಬಿಯಾರ್, ಕಾಂಞಂಗಾಡ್ ನ ಟ್ರಸ್ಟಿ ಕುಮಾರ್ ಎನ್ ಬಂಗೇರ, ಕೋಶಾಧಿಕಾರಿ ನರಸಿಂಹ ಶೆಣೈ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ರಮೇಶ್ ಶೆಟ್ಟಿ ಪಾಲ್ಗರ್, ಸಿ ಕೆ ಪಾಟೀಲ್ ಸಿ ಏ ಮುಂಬಯಿ, ಗಣೇಶ್ ಶೆಟ್ಟಿ ಸಿ ಎಸ್, ನ್ಯಾಯವಾದಿ ರವಿ ಕೋಟ್ಯಾನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಹಾಗೂ ಸೇವಾ ಸಮಿತಿಯ ಸದಸ್ಯರು ಗುರು ಪೂರ್ಣಿಮಾ ಮಹೋತ್ಸವ ಸಾಂಗವಾಗಿ ನಡೆಯುವಲ್ಲಿ ಶ್ರಮಿಸಿದರು.