ಮುಂಬಯಿಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗoವ್-ವಿರಾರ್ ಶಾಖೆಯ ಆಶ್ರಯದಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಬಗ್ಗೆ ವಿಚಾರ ಸಂಕಿರಣವನ್ನು ಜುಲೈ. 28ರಂದು ಆಯೋಜಿಸಿದೆ.
ವಸಯಿ ಪಶ್ಚಿಮ ಸಾಯಿನಗರದ ಪ್ರಥ್ವಿ ಥೀಯೇಟರ್ ನ ಹಿಂಭಾಗದ ಸ್ವಾಮಿ ನಾರಾಯಣ ಸಂಸ್ಕಾರ ಕೇಂದ್ರದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.
ಮುಖ್ಯ ಅತಿಥಿಯಾಗಿ ಪ್ರತಾಪ್ ಸಾಲ್ಯಾನ್ (MCOM LLB. ACS), ಗೌರವ ಅತಿಥಿಯಾಗಿ ನ್ಯಾಯವಾದಿ sh ಅಕ್ಷಯ ಪುತ್ರನ್ (BBA, LLB. DIP. CYBER LAW. PG. IPR) ಉಪನ್ಯಾಸ ನೀಡಲಿರುವರು.
ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ವಿದ್ಯಾರ್ಥಿಗಳು, ಪಾಲಕರು ವಿಚಾರ ಸಂಕಿರರ್ಣದಲ್ಲಿ ಉಪಸ್ಥಿತರಿರುವಂತೆ, ಮೊಗವೀರ ವ್ಯವಸ್ಥಾಪಕ ಮಂಡಳಿಯ ನಾಯ್ಗಾಂವ್ – ವಿರಾರ್ ಶಾಖೆಯ ಕಾರ್ಯಧ್ಯಕ್ಷ ಚಂದ್ರಹಾಸ ಶ್ರೀಯಾನ್, ಗೌರವ ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಕೋಶಧಿಕಾರಿ ಹರಿಶ್ಚಂದ್ರ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೇದವತಿ ಸಾಲ್ಯಾನ್, ಗೌರವ ಕಾರ್ಯದರ್ಶಿ ಜಯಲಕ್ಷ್ಮಿ ಶ್ರೀಯಾನ್, ಗೌರವ ಕೋಶಧಿಕಾರಿ ಶೋಭಾ ಕೋಟ್ಯಾನ್, ಯುವ ವಿಭಾಗದ ಕಾರ್ಯಾಧ್ಯಕ್ಷ ಸತ್ಯಜಿತ್ ಸಾಲ್ಯಾನ್, ಗೌರವ ಕಾರ್ಯದರ್ಶಿ ದೀಕ್ಷಿತ ಸಾಲ್ಯಾನ್ ,ಗೌರವ ಕೋಶಧಿಕಾರಿ ನಿಶ್ಚಲ್ ಕೋಟ್ಯಾನ್ ವಿನಂತಿಸಿದ್ದಾರೆ.

previous post