
ಇಂದು (ಜು. 30) ಬೆಳಿಗ್ಗೆ ಅಬ್ಬರದ ಗಾಳಿ – ಮಳೆಗೆ ಉಡುಪಿ ತಾಲೂಕು ಕಾಪು ಪೊಲಿಪು ಗ್ರಾಮದ ಹೀರಾ ಮೆಂಡನ್ ಅವರ ಮನೆಗೆ ತೆಂಗಿನ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.




ಸುದ್ದಿ ತಿಳಿದ ಕೂಡಲೇ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಪು ತಹಸೀಲ್ದಾರ್ ಡಾ.ಪ್ರತಿಭಾ ಅರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯೊಡತಿಗೆ ಪರಿಹಾರ ನೀಡುವ ಭರವಸೆ ನೀಡಿದರು.
ಈ ವೇಳೆ ಕಂದಾಯ ಇಲಾಖೆಯ ವಿ. ಎ. ವೆಂಕಟೇಶ್, ಸಹಾಯಕ ದಿಲೀಪ್, ಕಾಪು ಪುರಸಭೆಯ ಮಾಜಿ ಸದಸ್ಯ ವಿಜಯ ಕರ್ಕೇರ, ಪೊಲಿಪು ಮೊಗವೀರ ಮಹಾಸಭೆಯ ಅಧ್ಯಕ್ಷ ಶ್ರೀಧರ್ ಕಾಂಚನ್, ಸಮಾಜ ಸೇವಕ ಲವ ಕರ್ಕೇರ, ಸ್ಥಳೀಯರಾದ ರಾಧಿಕಾ ಪೊಲಿಪು, ಅಜಿತ್ ಮೆಂಡನ್, ಸುಂದರ ಸುವರ್ಣ, ಸುಕೇಶ್ ಮೆಂಡನ್ ಉಪಸ್ಥಿತರಿದ್ದರು.