ಮಂಗಳೂರು ಜು 31.ಕತಾರ್ ಬಂಟ್ಸ್ ಸಂಘದ ಅಧ್ಯಕ್ಷರಾದ ನವೀನ್ ಶೆಟ್ಟಿ ಹಾಗೂ ನವೀನ್ ಶೆಟ್ಟಿ ಮಡಂತ್ಯಾರ್ ಇವರು ಜು 31 ರಂದು ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಗೆ ಆಗಮಿಸಿದ್ದು ಅವರನ್ನು ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
*ಈ ಸಂದರ್ಭದಲ್ಲಿ ಪುತ್ತೂರು ಬಂಟರ ಸಂಘದ ಹೇಮನಾಥ್ ಶೆಟ್ಟಿ ಕಾವು, ದುರ್ಗಾಪ್ರಸಾದ್ ರೈ ಕುಂಬ್ರ, ರವಿ ಪ್ರಸಾದ್ ಶೆಟ್ಟಿ,ಗುರುಪುರ ಬಂಟರ ಸಂಘದ ಸುದರ್ಶನ್ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಹರೀಶ್ ಶೆಟ್ಟಿ, ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಸತ್ಯಪ್ರಸಾದ್ ಶೆಟ್ಟಿ, ಬಂಟರ ಸಂಘ ನೀರುಮಾರ್ಗ ವಲಯದ ಗೋಕುಲ್ ದಾಸ್ ಶೆಟ್ಟಿ, ಬಂಟರ ಸಂಘ ಕೊಟ್ಟಾರ ಕೋಡಿಕಲ್ ನ ಲಕ್ಷಣ್ ಶೆಟ್ಟಿ, ಉಮೇಶ್ ಶೆಟ್ಟಿ, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಮತ್ತು ಆಹ್ವಾನಿತ ಸದಸ್ಯರಾದ ಯಶು ಪಕ್ಕಳ ಇವರುಗಳು ಉಪಸ್ಥಿತರಿದ್ದರು.*