
ಸಮಿತಿಯು ಹಿರಿ ಕಿರಿಯರ ಪ್ರತಿಭಾ ವಿಕಸನಕ್ಕೆ, ಉತ್ತಮ ವೇದಿಕೆಯಾಗಿದೆ : ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರು.
ಮುಂಬಯಿ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಹಿರಿಯರು, ಯುವಜನಾಂಗ ಹಾಗೂ ಮಕ್ಕಳು ಬಾಗವಹಿಸುತ್ತಾ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸುದರೊಂದಿಗೆ ತಮ್ಮ ಪ್ರತಿಭಾ ವಿಕಸನಕ್ಕೂ ಇಲ್ಲಿ ಅವಕಾಶ ನೀಡಲಾಗುತ್ತಿದ್ದು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸುವ ಮತ್ತೆ ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ಯವರು ತಿಳಿಸಿದರು.

ಜು. 28 ರಂದು ಉತ್ಕರ್ಷ ವಿದ್ಯಾ ಮಂದಿರ, ಪುಷ್ಪ ಪಾರ್ಕ್ ದಪ್ತರೆ ರೋಡ್, ಮಲಾಡ್ ಪೂರ್ವ ಇಲ್ಲಿ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಮತ್ತವರ ತಂಡದ ನೇತೃತ್ವದಲ್ಲಿ ನಡೆದ ಆಷಾಢ ಹಬ್ಬದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಯವರು ಸ್ಥಳೀಯ ತುಳು ಕನ್ನಡಿಗರೆಲ್ಲರ ಸಹಾಯದಿಂದ ನಾವು ಕೈಗೊಂಡ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು ಇಂದು ಆಟಿ ತಿಂಗಳ ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳ ಸವಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ನಮ್ಮ ಯುವ ಜನಾಂಗಕ್ಕೆ ನಾಡಿನ ಶುಚಿ ರುಚಿಕರವಾದ ಅಡುಗೆಯನ್ನು ತಯಾರಿಸಲು ಪಾಕ ತರಗತಿಯನ್ನು ಪ್ರಾರಂಭಸಬೇಕೆಂದರು. ನಾವೆಲ್ಲರೂ ಸೇರಿ ಅ. 18 ರಂದು ದಿನಪೂರ್ತಿ ನಡೆಯಲಿರುವ 15 ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಮಹೋತ್ಸವವನ್ನು ಯಶಸ್ಸೀಗೊಳಿಸೋಣ ಎಂದರು.
ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ. ಮೆಂಡನ್ ಮಾತನಾಡುತ್ತಾ ಎಲ್ಲರನ್ನು ಒಂದೆಡೆ ಸೇರಿಸಿ ಮಾಡುತ್ತಿರುವ ಕಾರ್ಯಕ್ರಮವೇ ಹಬ್ಬವಾಗಿದ್ದು, ಹಿರಿಯರೊಂದಿಗೆ ಯುವ ವಿಭಾಗದ ಎಲ್ಲರೂ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು ನಾವೆಲ್ಲರೂ ಸೇರಿ ನಮ್ಮ ಸಮಿತಿಯ 15ನೇ ವಾರ್ಷಿಕೋತ್ಸವವನ್ನು ಯಶಸ್ಸಿಗೊಳಿಸೋಣ ಎಂದರು. ಪ್ರಥಮ್ ಪೂಜಾರಿಯವರು ಆಟಿಯ ಬಗ್ಗೆ ಮಾಹಿತಿಯಿತ್ತರು.
ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಮಾತನಾಡುತ್ತಾ ಸಮಿತಿಯ ವತಿಯಿಂದ ಹದಿನೈದನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯು ದಿನಪೂರ್ತಿ ಅದ್ದೂರಿಯಿಂದ ನಡೆಯಲಿದ್ದು ಎಲ್ಲರು ಸಹಕರಿಸಬೇಕಾಗಿ ವಿನಂತಿಸಿದರು.
ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ದಿನೇಶ್ ಪೂಜಾರಿ ನಿಂಜೂರು .ಮಹಿಳಾ ವಿಭಾಗದ ಕಾರ್ಯದರ್ಶಿ ಉಪಕಾರ್ಯಾಧ್ಯಕ್ಷೆರುಗಳಾದ ಲಲಿತ ಎಸ್ ಗೌಡ, ಗೀತಾ ಜೆ ಮೆಂಡನ್, ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್, ಜೊತೆ ಕೋಶಾಧಿಕಾರಿಗಳಾದ ನಳಿನಿ ಪಿ ಕರ್ಕೆರ, ಜಯಲಕ್ಷ್ಮಿ ಪಿ ನಾಯಕ್, ಸಲಹೆಗಾರರಾದ ಮೋಹಿನಿ ಜೆ ಶೆಟ್ಟಿ ಮತ್ತು ಭಾರತಿ ಎಸ್ ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ. ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಸಂಚಾಲಕರಾದ ಡಾ. ಶಶಿನ್ ಆಚಾರ್ಯ. ಉಪಸ್ಥರಿದ್ದರು.
ಮಹಿಳಾ ವಿಭಾಗದ ಕೋಶಧಿಕಾರಿ ಶೀಲಾ ಎಂ ಪೂಜಾರಿ ಮತ್ತು ಉಪ ಕಾರ್ಯ ಧ್ಯಕ್ಷೆ ಸಂಧ್ಯಾ ಪ್ರಭು, ಅವರು ಮನೆಯಲ್ಲಿ ವಿವಿಧ ರೀತಿಯ ಖ್ಯಾದ್ಯಗಳನ್ನು ತಯಾರಿಸಿ ತಂದವರ ಹೆಸರನ್ನು ವಾಚಿಸಿದ್ದು ಎಲ್ಲರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸದಸ್ಯರಿಂದ ಹಾಗೂ ಮಕ್ಕಳಿಂದ ನೃತ್ಯ, ಸಂಗೀತ, ಭಾವಗೀತೆ ಕಾರ್ಯಕ್ರಮ ನಡೆಯಿತು. ಆಟಿ ಕಳಂಜೆಯ ಆಗಮನವನ್ನು ಎಲ್ಲರೂ ಭಕ್ತಿಯಿಂದ ಸ್ವಾಗತಿಸಿದರು. ಕಳಿಂಜೆಯಾಗಿ ಸುದೀಪ್ ಡಿ. ಪೂಜಾರಿ ಮತ್ತು ಸಹಾಯಕರಾಗಿ ನವೀನ್ ಯು ಸಾಲ್ಯಾನ್ ಸಹಕರಿಸಿದರು. ಸನತ್ ಪೂಜಾರಿ ಯವರು ತುಳುನಾಡ ಪ್ರಾರ್ಥನಾ ಹಾಡಿದರು.
ಉಪಕಾರ್ಯ ಧ್ಯಕ್ಷೆ ಗೀತಾ ಜೆ. ಮೆಂಡನ್ ಕೊನೆಗೆ ಧನ್ಯವಾದ ಸಮರ್ಪಿಸಿದರು. ಶೋಭಾ ಎಲ್ ರಾವ್ ಮತ್ತು ನಳಿನಿ ಪಿ ಕರ್ಕೀರ
ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದ್ದು ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸದಸ್ಯರು ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳ ಸವಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಜೊತೆ ಕಾರ್ಯದರ್ಶಿ, ಸನತ್ ಪೂಜಾರಿ, ಲಕ್ಷ್ಮಣ್ ರಾವ್. ಸುರೇಂದ್ರ ಆಚಾರ್ಯ. ಹರೀಶ್ ಶೆಟ್ಟಿ ಪೆರಾರ. ರಘುನಾಥ್ ನಾಯಕ್. ಸೂರಪ್ಪ ಕುಂದರ್. ಮಹಾಬಲ ಪೂಜಾರಿ ಜಯ ಪೂಜಾರಿ. ರಾಮ ಪೂಜಾರಿ. ಗಣೇಶ್ ನಾಯ್ಕ್. ಬೋಜ ಮೂಲ್ಯ. ಆನಂದ ಕೋಟ್ಯಾನ್. ಪ್ರತೀಕ್ ಜೆ ಶೆಟ್ಟಿ ಶೈಲೇಶ್ ಪೂಜಾರಿ. ಗೋಪಾಲ್ ಪೂಜಾರಿ. ಸಿದ್ದರಾಮಯ್ಯ ಗೌಡ. ಸದಾನಂದ ರಾವ್. ಪಾಂಡುರಂಗ ನಾಯಕ್.ಯುವ ವಿಭಾಗದ ಉಪಕಾರ್ಯಾಧ್ಯಕ್ಷರು ನವೀನ್ ಯು ಸಾಲ್ಯಾನ್, ಸಲಹೆಗಾರರಾದ ರಷ್ಮಿ ಪೂಜಾರಿ, ಪ್ರಣಿತ ವಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಪವನ್ ರಾವ್, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಸೋಶಿಯಲ್ ಮೀಡಿಯಾ ಇನ್ ಚಾರ್ಜ್ ಹರೀಶ್ ಕುಂದರ್ ಮತ್ತು ನಿಧಿ ನಾಯಕ್. ಲಾಸ್ಯ ಕುಲಾಲ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
———-
ಮಹಿಳೆಯರು ಪ್ರತಿಭಾವಂತರು – ರತ್ನಾ ಡಿ. ಕುಲಾಲ್
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಆಷಾಢ ಹಬ್ಬ ಆಚರಣೆ ಈ ಸಂದರ್ಭದಲ್ಲಿ 60 ಕ್ಕೂ ಅಧಿಕ ಮಹಿಳೆಯರು ವಿವಿಧ ತರದ ಖಾದ್ಯಗಳನ್ನು ತಯಾರಿಸಿ ತಂದಿದ್ದು ಎಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸುತ್ತಿರುವೆನು. ಅದೇ ರೀತಿ ಕಾರ್ಯಕ್ರಮದ ಯಸಸ್ಸಿಗೆ ಸಹಕರಿಸಿದ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಸದಸ್ಯರುಗಳನ್ನು ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಎಲ್ಲರಿಗೂ ಅಭಿನಂದನೆಗಳು. ಮಲಾಡ್ ಪ್ರದೇಶವು ಮಿನಿ ಕರ್ನಾಟಕದಂತಿದ್ದು ಮಹಿಳೆಯರು ಕೇವಲ ಮನೆಯೊಳಗೇ ಸೀಮಿತವಾಗಿರದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿ ಯಶಸ್ಸಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಅಮೇರಿಕಾದಂತಹ ರಾಷ್ಟ್ರದಲ್ಲಿ ಬಾರತೀಯ ಮೂಲದ ಮಹಿಳೆಯು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯಿದ್ದು ಮಹಿಳೆಯರು ಯಾವುದರಲ್ಲೂ ಹಿಂದಿಲ್ಲ ಎಂದು ತೋರಿಸಿದ್ದಾರೆ ಎಂದು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ನುಡಿದರು.