
ಮುಂಬೈ : ಬಿಲ್ಲವರ ಅಸೋಸಿಯೇಶನ್ ಪ್ರಾಯೋಜಕತ್ವದಡಿಯಲ್ಲಿ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು 31ಜೂಲೈ 2024 ರಂದು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್ ಇದರ ಪ್ರತಿನಿಧಿ,ಶಾಲಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ಸಲಹೆಗಾರ ಬನ್ನಂಜೆ ರವೀಂದ್ರ.ಅಮೀನ್ ಅವರು ಮಾತನಾಡುತ್ತಾ ಬಿಲ್ಲವರ ಅಸೋಸಿಯೇಶನ್ ಹಿರಿಯರ ಮಾರ್ಗದರ್ಶನದಿಂದಲೇ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದಿಂದಲೇ ರಾತ್ರಿ ಶಾಲೆ ನಡೆಸುತ್ತಾ ಬಂದಿರುತ್ತದೆ.ನಮ್ಮ ಮಾತೃಸಂಸ್ಥೆಯ ಈಗಿನ ಅಧ್ಯಕ್ಷ ಶ್ರೀ ಹರೀಶ ಜಿ ಅಮೀನ್ ಅವರು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವು ನೀಡುತ್ತಾ ಬಂದಿರುತ್ತಾರೆ.ಅದರ ಸದುಪಯೋಗ ಪಡೆದುಕೊಳ್ಳಬೇಕು.ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ವಿದ್ಯೆ ಪಡೆಯುವುದು ಮುಖ್ಯ. ವಿದ್ಯೆ ಪಡೆದ ಮಕ್ಕಳು ಉತ್ತಮ ನಾಗರೀಕರಾಗಲು ಸಾಧ್ಯ.ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.




ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಮಾತನಾಡುತ್ತಾ ನಮ್ಮ ಮಾತೃ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಇದರ ಸಂಚಾಲಕತ್ವದಲ್ಲಿ ಶಾಲೆ ನಡೆಯುತ್ತಿದೆ.ನಮ್ಮ ಮಾತೃಸಂಸ್ಥೆಯು ಶೈಕ್ಷಣಿಕವಾಗಿ ನಮ್ಮ ಶಾಲೆಯ ಮಕ್ಕಳಿಗೆ ಹತ್ತು ಹಲವಾರು ಮಾರ್ಗದರ್ಶನ ಸಹಕಾರ ನೀಡುತ್ತಿರುವುದರಿಂದಲೇ ನಮ್ಮ ರಾತ್ರಿ ಶಾಲೆ ಯಶಸ್ವಿಯಾಗಿ ನಡೆದು ಬರುತ್ತಿದೆ.ನಮ್ಮ ಶಾಲೆಯ ವಿದ್ಯಾರ್ಥಿಗಳು ಹಲವು ಬಾರಿ ಹತ್ತನೇ ಬೋರ್ಡ್ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಮಾತೃ ಸಂಸ್ಥೆಯ ಸಹಕಾರ ಮತ್ತು ಶಿಕ್ಷಕರ ಪರಿಶ್ರಮದಿಂದ 2024ರಲ್ಲಿ ನಡೆದ ಹತ್ತನೇ ಬೋರ್ಡ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿ ಶೇ 100 ಫಲಿತಾಂಶ ಬಂದಿರುವುದಲ್ಲದೇ ಮುಂಬೈ ಕನ್ನಡ ಮಾಧ್ಯಮ ರಾತ್ರಿ ಪ್ರೌಢ ಶಾಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿರುವುದು ಸಂಸ್ಥೆಗೂ ಮತ್ತು ಶಾಲೆಗೆ ಕೀರ್ತಿ ಬಂದಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡಿ ಓದಿಗೆ ಸಹಕಾರ ನೀಡುತ್ತಿರುವುದು ನಮ್ಮ ಮಾತೃ ಸಂಸ್ಥೆಯ ಕಾರ್ಯ ಶ್ಲಾಘನೀಯ.ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷರಿಗೂ ಪದಾಧಿಕಾರಿಗಳಿಗೂ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯ ಮೇಲೆ ಬಿಲ್ಲವರ ಅಸೋಸಿಯೇಶನ್ ಇದರ ಪ್ರತಿನಿಧಿ ಶಾಲಾ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರಅಮೀನ್ ಮಲ್ಲಿಕಾರ್ಜುನ ಬಡಿಗೇರ ಶಿಕ್ಷಕ -, ಶಿಕ್ಷಕೇತರರು ಉಪಸ್ಥಿತಿದ್ದು ಕಾರ್ಯಕ್ರಮವು ಚೆನ್ನಾಗಿ ಮೂಡಿ ಬಂದಿತು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು.
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಸಿದ್ಧರಾಮ ದಸಮಾನೆ,ಶಿಕ್ಷಕಿಯರಾದ ಮೋಹಿನಿ ಪೂಜಾರಿ, ಹೇಮಾ ಗೌಡ,ವಿಮಲಾ ಪೂಜಾರಿ ಮತ್ತು ಶಿಕ್ಷಕೇತರ ನಮಿತಾ ಸುವರ್ಣ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಕಾರ್ಯಕ್ರಮದಲ್ಲಿ ಸಿದ್ಧರಾಮ ದಸಮಾನೆ ಅವರು ಸ್ವಾಗತ ಮತ್ತು ನಿರೂಪಣೆ ಮಾಡಿದರೆ,ಹೇಮಾ ಗೌಡ ಅವರು ವಂದನಾರ್ಪಣೆ ಮಾಡಿದರು.ಕೊನೆಗೆ ಫಲಾಹಾರ ಹಂಚಿ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.