September 6, 2026
Mumbai News Kannada
ಮುಂಬಯಿ

ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ , ವರ್ಲಿ : ಮಹಿಳಾ ವಿಭಾಗದ ವತಿಯಿಂದ ಆಟಿದ ಕೂಟ.ಆಟಿದ ಕೂಟದ  ಮೂಲಕ ಸಂಬಂಧಗಳು ಗಟ್ಟಿಯಾಗುತ್ತದೆ – ರಮೇಶ್ ಗುರುಸ್ವಾಮಿ





ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಅಪ್ಪಾಜಿ ಬೀಡು, ವರ್ಲಿಯ, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ವತಿಯಿಂದ
ತುಳುನಾಡ ಸಂಸ್ಕೃತಿದ ಆಟಿದ ಕೂಟ ಕಾರ್ಯಕ್ರಮ ಜು28 ರಂದು ನಡೆಯಿತು.
   ಸಮಿತಿಯ  ಸದಸ್ಯರಿಂದ ಸಂಜೆ  ಭಜನೆ, ಬಳಿಕ ಆರತಿ ನಡೆಯಿತು.  ಪೂಜಾ ವಿಧಿಗಳು ನಡೆದ ಬಳಿಕಆಟಿದ ಕೂಟ  ಬಗ್ಗೆ ಫೌಂಡೇಶನ್ ನ  ಟ್ರಸ್ಟಿ ರಘುನಾಥ್ ಎನ್ ಶೆಟ್ಟಿ ಮಾತನಾಡಿ ಹಿಂದೆ  ತುಳುನಾಡಿನಲ್ಲಿ ನಮ್ಮವರು ಆಚರಿಸಿಕೊಂಡು ಬರುತ್ತಿದ್ದ ಆಚರಣೆಗಳು, ವಿಚಾರಗಳು, ಅಂದಿನ ತಿಂಡಿ ತಿನಿಸುಗಳು ತಿಳಿಸುತ್ತಾ ಯುವ ಸಮುದಾಯ ಇದನ್ನೆಲ್ಲ ತಿಳಿಸುವುದಕ್ಕೆ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ರಮಗಳನ್ನು ಆಚರಿಸ್ಕೊಂಡು ಬರುತ್ತಿದೆ ಎಂದು ತಿಳಿಸಿದರು, 

ಫೌಂಡೇಶನ್ ನ ಸಂಸ್ಥಾಪಕ ರಮೇಶ್ ಗುರುಸ್ವಾಮಿ ಪಡುಬಿದ್ರಿ  ಮಾತನಾಡುತ್ತಾ ಮಹಿಳೆಯರು ಧಾರ್ಮಿಕತೆಯೊಂದಿಗೆ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ವರ್ಷಕ್ಕೆ ಒಂದು ಸರಿಯಾದರೂ ತಮ್ಮ ಮನೆಯಲ್ಲಿ ಮಾಡಿದ ಸವಿಯಾದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಎಲ್ಲರಿಗೂ ನೀಡುವ ಉದ್ದೇಶದಿಂದ ಈ ಕೂಟ ಆಯೋಜಿಸಿದರೆ, ಬಹಳ ಅರ್ಥಪೂರ್ಣವಾಗಿದೆ. ಮುಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ  ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಸ್ವಾಗತಿಸಿದರು. ಉಪಕಾರ್ಯಧ್ಯಕ್ಷೆ ದಿವ್ಯ  ಪಿ. ಶೆಟ್ಟಿ ತಿಂಡಿ ತಿನಿಸುಗಳನ್ನು ಮಾಡಿ ತಂದಿರುವ ಮಹಿಳಾ ಸದಸ್ಯರ ಹೆಸರನ್ನು ವಾಚಿಸಿದರು. ಮಹಿಳಾ ಸದಸ್ಯರು ಮತ್ತು ರಮೇಶ್ ಗುರುಸ್ವಾಮಿ ಎಲ್ಲರಿಗೂ ಉಡುಗೊರೆಯನ್ನು ನೀಡಿ ಗೌರವಿಸಿದರು.



Related posts

ಬಿಲ್ಲವರ ಅಸೋಸಿಯೇಶನ್ ಕಲ್ಯಾಣ್ ಸ್ಥಳೀಯ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಭಕ್ತಿ ವಿಜೃಂಭಣೆಯಿಂದ ಆಚರಣೆ

Mumbai News Desk

ಕುಲಾಲ ಸಂಘ ಮುಂಬಯಿ: ಮಂಗಳೂರು ಕುಲಾಲ ಭವನ ಉದ್ಘಾಟನೆ: ಸಿಎಸ್‌ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಆಮಂತ್ರಣ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ವಿಶಿಷ್ಟ ಮಾನವ ಸರಪಳಿಯೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಭಾರತಮಾತೆಗೆ ಆರತಿಯ ಗೌರವ

Mumbai News Desk

ನೆರೂಲ್ ಬಾಲಾಜಿ ಮಂದಿರ  ಬ್ರಹ್ಮರಥೋತ್ಸವ  ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಶ್ರೀ ದುರ್ಗಾಪರಮೇಶ್ವರಿ-ಶನೀಶ್ವರ ದೇವಸ್ಥಾನ, ದಹಿಸರ್ (ರಾವಲ್‌ಪಾಡ)ದಲ್ಲಿ ನವರಾತ್ರಿ ಮಹೋತ್ಸವ ಸಂಪನ್ನ

Mumbai News Desk