ಮುಂಬಯಿ ಅ6. ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ 18 ನೇ ವರ್ಷದ ಸತ್ಸಂಗ, ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಆಗಸ್ಟ್ 9,10,11 ರಂದು ಸಂಜೆ ಮೂರು ದಿನಗಳಲ್ಲಿ ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ ಕಂಠಸಿರಿಯಲ್ಲಿ “ತ್ರಿದಿನ ಹರಿಕಥಾ ಸಂಕೀರ್ತನೆ”……
“ಶ್ರವಣಮ್ ಕೀರ್ತನಂ ವಿಷ್ಣೋ ಸ್ಮರಣಂ ಪಾದಸೇವನಮ್| ಅರ್ಚನಂ ವಂದನಮ್ ದಾಸ್ಯಂ ಸಖ್ಯಂ ಆತ್ಮ ನಿವೇದನಮ್|| ಶ್ರೀಮದ್ಭಾಗವತ ದಲ್ಲಿ ನಮ್ಮಮಾನವ ಜನ್ಮದ ಸಾಧನೆ ಯೊಂದಿಗೆ ಶ್ರೀ ಹರಿ ಕೃಪೆ,ಮೋಕ್ಷ ಪ್ರಾಪ್ತಿಗೂ ಶ್ರವಣ ವೆ ಮೊದಲಾದ ಒಂಭತ್ತು ವಿಧದ ಭಕ್ತಿಯನ್ನು ತಿಳಿಸಲಾಗಿದೆ, ಶ್ರವಣ, ಕೀರ್ತನ,ಸ್ಮರಣ, ಪಾದ ಸೇವನ, ಅರ್ಚನ, ವಂದನ, ದಾಸ್ಯ,ಸಖ್ಯ,ಆತ್ಮ ನಿವೇದನೆ ,ಈ ಒಂಭತ್ತು ವಿಧದ ಭಕ್ತಿಪ್ರಕಾರ ಗಳಲ್ಲಿ ಮೊದಲ ಹಾಗೂ ಶ್ರೇಷ್ಟ ಭಕ್ತಿಯೇ ಶ್ರವಣ ಆಗಿದೆ.. ಭಗವಂತನ,ಭಗವದ್ ಭಕ್ತರ ಕಥೆ ಮಹಿಮೆ ಗಳನ್ನು ಹೆಚ್ಚು ಹೆಚ್ಚು ಕೇಳುವುದು, ನಮ್ಮಲ್ಲಿ ಒಂದು ಆಡು ಮಾತಿದೆ..ನೂರು ಕಡೆಯಿಂದ ಕೇಳು,ಒಂದು ಸಲ ಹೇಳು” ಎಂಬುದಾಗಿ…ಜ್ಞಾನಿ ಗಳು ಅನೇಕ ಸಲ, ಅನೇಕರಲ್ಲಿ ತಿಳಿದು ತಮ್ಮ ಜ್ಞಾನ ಅನುಭವ ವನ್ನು ಹಂಚುತ್ತಾರೆ,, ಈ ರೀತಿಯ ಹರಿಕಥಾ,ಹರಿ ಭಕ್ತ ಕಥಾ ಮಹಿಮೆ ಗಳನ್ನು ಕೇಳುವುದೇ ಶ್ರೀ ಹರಿಗೆ ಅತ್ಯಂತ ಪ್ರಿಯವಾದ ಕಾರ್ಯ ಆಗಿದೆ..ಪ್ರತಿ ದಿನ,ಪ್ರತಿ ಕ್ಷಣ ಶ್ರೀ ಹರಿ ಸ್ಮರಣೆ,ಹರಿಕಥಾ ಶ್ರವಣ ಮಾಡಬೇಕು,ಈಗಿನ ಕಾಲದಲ್ಲಿ ಅದು ಅಸಾಧ್ಯ ವಾದ ಮಾತು..ವರ್ಷದಲ್ಲಿಯೇ ಕೇಳುವುದಕ್ಕಾಗಿಯೇ ಮೀಸಲಾದ ದೇವರಿಗೆ ಪ್ರಿಯವಾದ ಮಾಸ ಶ್ರಾವಣ ಮಾಡದಲ್ಲಿಯಂತೂ ನಡೆಸಲೇ ಬೇಕು..ಹರಿದಾಸ ವರ್ಯ ಜಗನ್ನಾಥ ದಾಸರು ಹರಿಕಥಾಮೃತಸಾರ ಎಂಬ ತಮ್ಮ ಗ್ರಂಥ ದಲ್ಲಿ ” ಶ್ರವಣ ಮನಕಾನಂದವೀ ವುದು ಭವ ಜನಿತ ದುಃಖಗಳ ಕಳೆವುದು” ಎಂದು ಹರಿಕಥಾ ಶ್ರವಣ ದ ಮಹಿಮೆ ಯನ್ನ ಅರುಹುತ್ತಾರೆ, ಕಲಿಯುಗದಲ್ಲಿ ಹರಿಕಥೆಯ ಕಿವಿಗೆ ಮಾತ್ರ ಅನಂದ ವ ನ್ನು ಕೊಡುವುದಲ್ಲ,ಮನಸ್ಸಿಗೂ ಆತ್ಮಕ್ಕೂ ಅನಂದ ದಾಯಕ ವಾಗಿದೆ ಎನ್ನುತ್ತಾರೆ.. ಮುಂಬೈ ಯ ಹರಿಕಥಾ ಅಭಿಮಾನಿ ಗಳಿಗೆ ಭಕ್ತಾದಿಗಳಿಗೆ ಹರಿಕಥೆ, ಹರಿಭಕ್ತರ ಕಥೆಗಳನ್ನು ಕೇಳುವ ಭಾಗ್ಯವನ್ನು ಕಳೆದ 18 ವರ್ಷ ಗಳಿಂದ ಈ ಉತ್ತಮ ಕಾರ್ಯ ವನ್ನು ಶ್ರೀಕೃಷ್ಣ ವಿಠ್ಠಲ ಪ್ರತಿಷ್ಠಾನ ಸಂಸ್ಥೆಯು ಹರಿಕಥಾ ವಿದ್ವಾನ್ ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಅವರ ಸಿರಕಂಠ ದ ಲ್ಲಿ ನಡೆಸುತ್ತಾ ಬಂದಿದೆ… ಪೂಜ್ಯ ಪೇಜಾವರ ಶ್ರೀಗಳ ಆಶೀರ್ವಾದ ಹಾಗೂ ಮುಂಬೈ ಪೇಜಾವರ ಮಠದ ಸಹಯೋಗದೊಂದಿಗೆ ಈ “ತ್ರಿದಿನ ಹರಿಕಥಾ ಸಂಕೀರ್ತನೆ”ಯು ಆಗಸ್ಟ್ 9,10,11 ಶುಕ್ರವಾರ,ಶನಿವಾರ, ಆದಿತ್ಯವಾರ,ಪ್ರತಿದಿನ ಸಂಜೆ 5*30 ಯಿಂದ ರಾತ್ರಿ 8 ರ ವರೆಗೆ ಪೇಜಾವರ ಮಠದಲ್ಲಿ ನಡೆಯಲಿದೆ… ಶ್ರಾವಣ ಮಾಸದ ಪಾವನ ಸಂದರ್ಭದಲ್ಲಿ ನಡೆಯಲಿರುವ ಭಕ್ತಿ,ಸಾಹಿತ್ಯ,ಸಂಗೀತ,ಜೀವನ ರಹಸ್ಯ, ಅತ್ಮ, ಪರಮಾತ್ಮ ಜ್ಞಾನ ಸಂಗಮ ರೂಪದ ಸಂತಾಕ್ರುಜ್ ಪೂರ್ವದ ಪೇಜಾವರ ಮಠದಲ್ಲಿ ಜರುಗಲಿರುವ ಈ ಸತ್ಸಂಗ ದಲ್ಲಿ ಎಲ್ಲ ಭಕ್ತರು ಹರಿಕಥಾ ಅಭಿಮಾನಿ ಗಳು ಸಕುಟುಂಬರಾಗಿ ಬಂದು ಭಾಗವಹಿಸಿ ಶ್ರೀ ಕೃಷ್ಣ ವಿಠ್ಠಲ ಕೃಪೆಗೆ ಪಾತ್ರರಾಗಿ ಎಂದು ಸಂಸ್ಥೆಯ ವತಿಯಿಂದ ವಿನಂತಿಸಲಾಗಿದೆ… ಶ್ರಾವಣ ಮಾಸದಲ್ಲಿ ನಡೆಸುವ ಹರಿಕಥಾ ಸೇವೆಯು ಭಕ್ತರ ಎಲ್ಲ ತಾಪತ್ರಯ ಗಳು ನಿವಾರಣೆ ಯಾಗುತ್ತಿದ್ದು ಹರಿಕಥಾ ಸೇವೆಯನ್ನು ನಡೆಸಲು ಇಚ್ಛಿಸುವ ಪ್ರಾಯೋಜಕರು 9820118612,8369463979 ಗೆ ಕರೆ ಮಾಡಬಹುದಾಗಿದೆ.. ತಮ್ಮೆಲ್ಲರ ತನು ಮನ ಧನದ ಸೇವೆಯನ್ನು ಸ್ವೀಕರಿಸುತ್ತೇವೆ…