
ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ *ಆಟಿದ ಸೊಗಸ್* ಕಾರ್ಯಕ್ರಮವು ರವಿವಾರ ಜೂನ್ 11ರಂದು ಸಂಜೆ 4 ಗಂಟೆಗೆ ಸರಿಯಾಗಿ ಡೊಂಬಿವಲಿ ಪೂರ್ವದ ಎಮ್ ಐ ಡಿ ಸಿ ಯಲ್ಲಿರುವ ಹೋಟೆಲ್ ಶಿವಂ ನ ಸಭಾಗೃಹದಲ್ಲಿ ಜರಗಲಿದೆ. ಇದೇ ಸಂದರ್ಭದಲ್ಲಿ ಮುಲುಂಡು ಪರಿಸರದ ಶಿವಾನಿ ಮದರ್ & ಚೈಲ್ಡ್ ಕೇರ್ ಹಾಸ್ಪಿಟಲಿನ ಹೆಸರಾಂತ ಸ್ತ್ರೀರೋಗ ತಜ್ಞೆ ಡಾ ಸಂಗೀತ ಸತ್ಯ ಪ್ರಕಾಶ್ ಶೆಟ್ಟಿ ಇವರು ಸ್ತ್ರೀಯರ ಆರೋಗ್ಯ ಹಾಗೂ ಬೆಳವಣಿಗೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಿರುವರು.
ಈ ಕಾರ್ಯಕ್ರಮದಲ್ಲಿ ಮದ್ಯಾಹ್ನ ಗಂಟೆ 3.30 ಕ್ಕೆ ಪುರುಷರಿಗಾಗಿ ತೆಂಗಿನ ಕಾಯಿ ಕಟ್ಟುವ ಸ್ಪರ್ಧೆಯನ್ನು ಪ್ರಾದೇಶಿಕ ಸಮಿತಿಯ ಯುವ ವಿಭಾಗವು ಆಯೋಜಿಸಿದೆ.
ಮನೋರಂಜನೆಯ ಅಂಗವಾಗಿ ಮಹಿಳಾ ವಿಭಾಗದ ವತಿಯಿಂದ ಕಿರುನಾಟಕ, ವಿವಿಧ ನೃತ್ಯ ಕಾರ್ಯಕ್ರಮಗಳು ಹಾಗೂ ಆಟಿ ಕಳಂಜ ನೃತ್ಯ ಸಾದರಗೊಳ್ಳಲಿದೆ
ಇದೇ ಸಂದರ್ಭದಲ್ಲಿ ಡಾ. ಆರ್ ಕೆ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಎಲ್ಲರಿಗೂ ವಿದ್ಯೆ ಮತ್ತು ವೈದ್ಯಕೀಯ ನೆರವು ಸಿಗುವಂತಹ ಸೇವೆಯ ಹೊಸ ಯೋಚನೆ ಮತ್ತು ಯೋಜನೆಯಾದ *ಸಂಜೀವಿನಿ* ಉದ್ಘಾಟನೆ ಗೊಳ್ಳಲಿದೆ. ಸಂಘದ ಎಲ್ಲಾ ಒಂಭತ್ತು ಪ್ರಾದೇಶಿಕ ಸಮಿತಿಯ ಸದಸ್ಯರಿಗಾಗಿ ಈ ಯೋಜನೆಯನ್ನು ಬೆಳಕಿಗೆ ತರಲಾಗುತ್ತಿದೆ.
ಇತ್ತೀಚೆಗೆ ನಡೆದ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ಉತ್ತೀರ್ಣರಾದ ಮನೀಶ್ ಬಾಲಕೃಷ್ಣ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು, ಅಲ್ಲದೆ ಈ ವರ್ಷ ಎಸ್ ಎಸ್ ಸಿ .ಮತ್ತು ಎಚ್ ಎಸ್ ಸಿ ಪರೀಕ್ಷೆಯಲ್ಲಿ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಆಟಿದ ಸೊಗಸು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ವಹಿಸಲಿದ್ದು, ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ ಆರ್ ಕೆ ಶೆಟ್ಟಿ, ಗೌ. ಕೋಶಾಧಿಕಾರಿ ರಮೇಶ್ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶಶಿಧರ್ ಕೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವೀನ್ ಜೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ಪೂರ್ವ ವಲಯದ ಸಮನ್ವಯಕ ಸುಕುಮಾರ್ ಎನ್ ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿರುವರು.
ಪ್ರತೀ ವರ್ಷ -ಆಟಿದ ಸೊಗಸು ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುತ್ತಿರುವ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರು ಈ ವರ್ಷವೂ ವಿವಿಧ ಖಾದ್ಯ ಪದಾರ್ಥಗಳ ಪ್ರದರ್ಶನ ನೀಡಲಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ, ಡೊಂಬಿವಲಿ ಠಾಕುರ್ಲಿ ಪರಿಸರದ ಸಮಸ್ತ ಬಂಟ ಬಾಂಧವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ್ ಶೆಟ್ಟಿ ಎಕ್ಕಾರು, ಸಂಚಾಲಕರಾದ ಕರುಣಾಕರ್ ವಿ ಶೆಟ್ಟಿ ಕಲ್ಲಡ್ಕ, ಉಪಕಾರ್ಯಾಧ್ಯಕ್ಷರಾದ ಪ್ರಭಾಕರ್ ಅರ್ ಶೆಟ್ಟಿ, ಕಾರ್ಯದರ್ಶಿ ಹೇಮಂತ್ ಎಸ್ ಶೆಟ್ಟಿ, ಕೋಶಾಧಿಕಾರಿ ಸಚಿನ್ ಕೆ ಶೆಟ್ಟಿ ಜೊತೆ ಕಾರ್ಯದರ್ಶಿ ಜಯಂತ್ ಜೆ ಶೆಟ್ಟಿ ಜೊತೆ ಕೋಶಾಧಿಕಾರಿ ಪ್ರಭಾಕರ್ ವಿ ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಜ್ವಲ್ ಬಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ,ಉಪ ಕಾರ್ಯಾಧ್ಯಕ್ಷೆ ಲತಾ ಎ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎಸ್ ಶೆಟ್ಟಿ, ಕೋಶಾಧಿಕಾರಿ ಸುಧಾ. ಎಚ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶಿಲ್ಪಾ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ವೈ ಶೆಟ್ಟಿ ಹಾಗೂ ಪ್ರಾದೇಶಿಕ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ