
ತುಳುನಾಡಿನ ಆಚರಣೆಗಳು ಅಗತ್ಯ.ಮೂಲನಂಬಿಕೆಗೆ ದಕ್ಕೆ ಆಗದಿರಲಿ: ರಘುಮೂಲ್ಯ ಪಾದಬೆಟ್ಟು
ಮುಂಬಯಿ ಆ 9.. ಕುಲಾಲ ಸಂಘ ಮುಂಬಯಿ ಇದರ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅ. 4 ರಂದು ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮವನ್ನು ಗೋರೆಗಾಂವ್ ಪೂರ್ವದ ಜೆ. ಪಿ. ನಗರ ರೋಡ್ ನಂಬರ್ ೨ ಫ್ರಾಗ್ನ್ಯ ಬೋಧಿನಿ ಹೈಸ್ಕೂಲ್ ಇಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಎ. ಮೂಲ್ಯ, ಪಾದೆ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಘು ಮೂಲ್ಯ ಪಾದಬೆಟ್ಟು ಅವರು ಸ್ಥಳಿಯ ಸಮಿತಿಯ ಕಾರ್ಯಕ್ರಮದ ಮೂಲಕ ಪರಿಸರದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಾಗುತ್ತಾರೆ. ನಮ್ಮ ನಾಡಿನ ಸಂಸ್ಕೃತ ಸಂಸ್ಕಾರವನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮಾಡುವ ಕಾರ್ಯಕ್ರಮಗಳಿಂದಾಗಿ ನಮ್ಮ ಮೂಲನಂಬಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸದಸ್ಯರು ಕರ್ತವ್ಯವನ್ನು. ಭೂತಾರಾದನೆಯಂತ ಯಾವುದೇ ಸಂದರ್ಭದಲ್ಲಿ ಕೂಡ ವೇದಿಕೆಗೆ ಪ್ರದರ್ಶನಗೊಳ್ಳದಂತೆ ನೋಡಬೇಕು. ಆಟಿದ ಕೂಟ ಕಾರ್ಯಕ್ರಮ ನಮ್ಮ ಇಂದಿನ ಕಾಲದ ದಿನಗಳನ್ನು ನೆನಪಿಸುವಂಥಾಗಿದೆ. ವರ್ಷಕ್ಕೆ ಒಮ್ಮೆಯಾದರೂ ಎಲ್ಲರ ಮನೆಯ ಅಡುಗೆಯ ರುಚಿಯನ್ನು ನೋಡುವ ಅವಕಾಶ ಈ ಕಾರ್ಯಕ್ರಮದ ಮೂಲಕ ಲಭಿಸುತ್ತದೆ. ಸಂಘದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಸೇರುವಂತಾಗಬೇಕು ಎಂದು ನುಡಿದರು.






ಸಂಘದ ಗೌರವ ಅಧ್ಯಕ್ಷರಾದ ದೇವದಾಸ ಎಲ್ ಕುಲಾಲ್ ಮಾತನಾಡುತ್ತಾ ಆಟಿ ತಿಂಗಳ ಕಷ್ಟಗಳ ದಿನಗಳನ್ನು ಅಂದಿನ ತಿಂಡಿ ತಿನಿಸುಗಳನ್ನು ಮತ್ತೆ ನೆನಪಿಸುವುದು ಅಗತ್ಯವಿದೆ ಆ ಮೂಲಕ ನಮ್ಮ ಹೊಸ ಪೀಳಿಗೆ ತಿಳಿಯುವಂತಾಗುತ್ತದೆ ಈ ಪರಿಸರದ ಎಲ್ಲಾ ಮಹಿಳೆಯರು ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಯಶಸ್ವಿ ಯಾವುದಕ್ಕೆ ಶ್ರಮಿಸಿದ್ದೀರಿ ತಮಗೆಲ್ಲ ಅಭಿನಂದನೆಗಳು ಎಂದು ನುಡಿದರು.
ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲಿಯನ್ ಮಾತನಾಡಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳಾಗಿತ್ತು ಅದನ್ನೀಗ ಮಹಿಳೆಯರು ಯುವ ಜನಾಂಗ ಒಟ್ಟು ಸೇರಿ ಬಹಳ ಖುಷಿಯಿಂದ ಅಂದಿನ ದಿನಗಳನ್ನು ನೆನಪಿಸಿರುವುದು ಅಭಿನಂದನೆಯ. ನಮ್ಮ ಸಂಘದ ಬಹಳಷ್ಟು ಸದಸ್ಯರು ಈ ಪರಿಸರದಲ್ಲಿ ಬಹಳಷ್ಟು ಇದ್ದಾರೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಮತ್ತು ಸ್ಥಳೀಯ ಸಮಿತಿಯಲ್ಲಿ ಸಕ್ರಿಯರಾಗಬೇಕು. ಜ್ಯೋತಿ ಸೊಸೈಟಿಯಲ್ಲಿ ವಿಶೇಷವಾದ ಯೋಜನೆಗಳಿದೆ ಅದೆಲ್ಲವನ್ನು ಬಾಂಧವರು ಉಪಯೋಗ ಪಡೆಯಬೇಕುಎಂದು ನುಡಿದರು
ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್ ಮಾತನಾಡುತ್ತಾ ಈ ಪರಿಸರದ ಮಹಿಳಾ ಸದಸ್ಯರು ಉತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳೋಣ ಎಂದು ನುಡಿದರು.
ಸ್ಥಳೀಯಸಮಿತಿಯ ಕಾರ್ಯಾಧ್ಯಕ್ಷ ಆನಂದ ಕುಲಾಲ್ ಮಾತನಾಡುತ್ತಾ ಬಾಳ ಸಮಯಗಳ ನಂತರ ಆಟಿದ ಕೂಟ ಕಾರ್ಯಕ್ರಮ ಆಯೋಜಿಸಿಕೊಂಡಿದ್ದೇವೆ ಅದಕ್ಕೆ ಎಲ್ಲಾ ಸದಸ್ಯರು ಪ್ರೋತ್ಸಾಹ ಸಹಕಾರ ನೀಡಿದ್ದಾರೆ. ಯುವ ವಿಭಾಗದ ಸದಸ್ಯರು ಸಂಘದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸ್ಥಳೀಯ ಸಮಿತಿಗೆ ಗೌರವನ್ನು ತರುವ ಸೇವೆಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಕೂಡ ನಾವೆಲ್ಲರೂ ಒಗ್ಗಟ್ಟಿನಿಂದ ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಎಂದು ನುಡಿದರು
ವೇದಿಕೆಯಲ್ಲಿಸಂಘದ ಗೌರವ ಅಧ್ಯಕ್ಷರಾದ ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷರಾದ ಡಿ. ಐ. ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ. ಸಾಲಿಯಾನ್, , ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕುಲಾಲ್, ಉಪ ಕಾರ್ಯಾಧ್ಯಕ್ಷ ಅರುಣ್ ಬಂಗೇರ, ಕಾರ್ಯದರ್ಶಿ ಸತೀಶ್ ಬಂಗೇರ, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಪರವಾಗಿ ಕಾರ್ಯಾಧ್ಯಕ್ಷೆ ಆಶಾಲತಾ ಮೂಲ್ಯ, ಉಪ ಕಾರ್ಯಾಧ್ಯಕ್ಷೆ ರತ್ನ ಡಿ. ಕುಲಾಲ್, ಕಾರ್ಯದರ್ಶಿ ಆರತಿ ಸಾಲ್ಯಾನ್, ಕೋಶಾಧಿಕಾರಿ ಭಾರತಿ ಆರ್ಖ್ಯಾನ್ ,, ಜೊತೆ ಕೋಶಾಧಿಕಾರಿ ಪುಷ್ಪ ಕುಲಾಲ್, ಉಪಸ್ಥರಿದ್ದರು
ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಲಾಡ್ ಪೂರ್ವದ ಗೋವಿಂದ್ ನಗರದ ಆಜಿ ಬಾಬೂ ರೋಡ್ ನಲ್ಲಿರುವ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ (ಉನ್ನತಾಧಿಕಾರಿ) ಜಯ ಮೋಹನ್ ಬಂಗೇರ ಮಹಿಳೆಯರ ಬಗ್ಗೆ ಮಾತನಾಡಿದರು
ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆರತಿ ಕರುಣಾಕರ್ ಸಾಲಿಯಾನ್ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ರತ್ನ ಡಿ ಕುಲಾಲ್ ನಿರ್ವಹಿಸಿದರು. ಪ್ರಾರ್ಥನೆಯನ್ನು ಜಯಂತಿ ಬಂಗೇರ ಮಾಡಿದರು.
ಆಟಿದ ಸಂಭ್ರಮದ ಅಂಗವಾಗಿ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯರು ವಿವಿಧ ಬಗೆಯ ಖಾದ್ಯಗಳನ್ನು ತಯಾರಿ ತಂದಿದ್ದರು. ಆಟಿ ಕಾಳಂಜೆ ಆಕರ್ಷಕವಾಗಿತ್ತು. ಸದಸ್ಯರೆಲ್ಲರೂ ಊರಿನ ವಿವಿಧ ಬಗೆಯ ಸಸ್ಯಗಳನ್ನು. ತಿಂಡಿ ತಿನಿಸುಗಳನ್ನು. ಅಕ್ಕಿ. ಮತ್ತಿತರ ಸಾಮಗ್ರಿಗಳನ್ನು ವಿಭಿನ್ನ ರೀತಿಯ ಮೆರವಣಿಗೆಯ ಮೂಲಕ ವೇದಿಕೆಗೆ ತಂದರು.
ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
—-
ಮಹಿಳೆಯರು ಧೈರ್ಯದಲ್ಲಿ ಮುನ್ನಡೆದಾಗ ಯಶಸ್ವಿ :ಜಯ ಮೋಹನ್ ಬಂಗೇರ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಮಲಾಡ್ ಪೂರ್ವದ ಗೋವಿಂದ್ ನಗರದ ಆಜಿ ಬಾಬೂ ರೋಡ್ ನಲ್ಲಿರುವ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ (ಉನ್ನತಾಧಿಕಾರಿ) ಜಯ ಮೋಹನ್ ಬಂಗೇರ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಇಂದಿನ ಕಾಲದ ಆಟಿ ತಿಂಗಳು ಎಂದರೆ ಅದನ್ನು ನೆನಪಿಸುವುದು ಕಷ್ಟ. ಮಳೆಯ ಅರ್ಭಟ. ಜೀವನ ಸಾಗಿಸುವುದಕ್ಕೆ ಕಷ್ಟವಾಗುತ್ತಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟದ ಸಮಯ ಅದಾಗಿತ್ತು ಅಂತ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲಿದ್ದ ಸಸ್ಯಗಳೇ ಆಹಾರವಾಗಿತ್ತು ಅದರಲ್ಲಿ ಔಷಧೀಯ ಗುಣಗಳು ಇದ್ದವು. ಅಂತ ಕಷ್ಟದ ಆಟಿ ತಿಂಗಳನ್ನು ನೆನಪಿಸುವುದು ಅಗತ್ಯವಿದೆ ಇಂದು ಅದನ್ನು ಬಾಳ ಅರ್ಥಪೂರ್ಣವಾಗಿ ನಡೆಸಿದ್ದೀರಿ. ಹೆಣ್ಣಿಗೆ ಹೆಣ್ಣೆ ಸತ್ರು ಆಗಬಾರದು. ಒಬ್ಬರನ್ನೊಬ್ಬರು ಅರಿತು ಜೀವನ ನಡೆಸಿದಾಗ ಜೀವನದ ಅರ್ಥ ಸಿಗುತ್ತದೆ. ನಮ್ಮೊಳಗಿರುವ ಪ್ರತಿಭೆ ಬೆಳೆಯುವಂತಾಗಳು ಎಲ್ಲಾ ನಾರಿಯರು ಧೈರ್ಯದಲ್ಲಿ ಮುನ್ನಡೆ ಬೇಕು ಅದರಿಂದ ಯಶಸ್ವಿಯಾಗುತ್ತದೆ ಎಂದು ನುಡಿದರು.