
ಡೊಂಬಿ ವಲಿ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬ ಮಂದಿರದಲ್ಲಿ ವರ್ಷಂಪ್ರತ್ರಿ ಜರಗುವ ವರಮಹಾಲಕ್ಷ್ಮಿ ಪೂಜೆಯು ಇದೇ ತಾ. 16/08/2024 ಶುಕ್ರವಾರ ಸಾಯಂಕಾಲ ಗಂ 5.00 ರಿಂದ ಮಂದಿರದಲ್ಲಿ ಜರಗಲಿದೆ.
ಈ ಪ್ರಯುಕ್ತ ಸಾಯಂಕಾಲ ಗಂ.6.00ರಿಂದ ಭಜನೆ, ರಾತ್ರಿ ಗಂ 8.30 ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿದೆ.
ಭಕ್ತರು ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಮಹಾಲಕ್ಷ್ಮಿ ಜಗದಂಬ ಅಮ್ಮನವರು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ನಾಗದೇವರು ಹಾಗೂ ನವಗ್ರಹ ದೇವರ ಕೃಪೆಗೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ಮಂದಿರದ ಪರವಾಗಿ ಗೌ. ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಮಹಿಳಾ ಸದಸ್ಯರು, ಯುವ ಸದಸ್ಯರು, ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
ವರಮಹಾಲಕ್ಷ್ಮಿ ಪೂಜೆ ಮಾಡುವ ಭಕ್ತರು ಮಂದಿರದ ಸೇವಾ ಕಚೇರಿಯಲ್ಲಿ ಪಾವತಿ ಮಾಡತಕ್ಕದ್ದು,
ಹೆಚ್ಚಿನ ಮಾಹಿತಿಗಾಗಿ ಹಾಗೂ ಪೂಜೆ ಸೇವೆಗೆ
ಕರೆಮಾಡಬಹುದು.
ದಿವಾಕರ್ ಜಿ. ರೈ (ಅಧ್ಯಕ್ಷರು)
8828680320
ರವೀಂದ್ರ ಭಟ್ (ಅರ್ಚಕರು)
9380359549
ರಾಜೇಶ್ ಸಿ ಕೋಟ್ಯಾನ್ (ಕಾರ್ಯದರ್ಶಿ)
9930026134
ಸಂತೋಷ್ ಶೆಟ್ಟಿ – (ಖಜಾಂಜಿ)
9819757703.