30.5 C
Mumbai
June 8, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್, ಜೋಗೇಶ್ವರಿ ಸ್ಥಳೀಯ ಕಚೇರಿಯಲ್ಲಿ, ಸಂಭ್ರಮದ “ಆಟಿದ ಒಂಜಿ ದಿನ” ಆಚರಣೆ.





———————————————-

  ಮುಂಬಯಿ   ಅ 12.  ಜೋಗೇಶ್ವರಿ ಪೂರ್ವ ಗುಂಫಾ ರಸ್ತೆ, ಜೈನ ಮಂದಿರದ ಎದುರಿರುವ, ಬಿಲ್ಲವರ ಅಸೋಸಿಯೇಶನಿನ ಜೋಗೇಶ್ವರಿ ಸ್ಥಳೀಯ ಕಚೇರಿಯಲ್ಲಿ ಇದೇ ಭಾನುವಾರ ಆ.4ರಂದು ಸಂಜೆ 6-00ರಿಂದ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ “ಆಟಿದ ಒಂಜಿ ದಿನ”ವನ್ನು ಅತಿ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು.

ಪ್ರಥಮದಲ್ಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ನಾರಾಯಣ ಪೂಜಾರಿಯವರಿಂದ ಗುರುದೇವರಿಗೆ ದೀಪ ಪ್ರಜ್ವಲಿಸಲ್ಪಟ್ಟು, ಗುರುವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಗೋರೆಗಾಂವ್ ಸ್ಥಳೀಯ ಕಚೇರಿಯ ಮಾಜಿ ಕಾರ್ಯದರ್ಶಿ ಶಶಿಧರ ಬಂಗೇರ ಇವರು ತುಳು ಸಂಸ್ಕೃತಿ, ಆಚಾರ ವಿಚಾರ, ಆಟಿ ತಿಂಗಳ ವಿಶೇಷತೆಯನ್ನು ಅರ್ಥವತ್ತಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ಮೋಹನ್ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದವರು ತಾವು ಅತಿ ಮುತುವರ್ಜಿಯಿಂದ ತಯಾರಿಸಿರುವ ತುಳುನಾಡಿನ ತಿಂಡಿತಿನಸು ಆಹಾರಗಳನ್ನು ಪ್ರದರ್ಶಿಸಿ ಆಟಿ ಕಡoಜ ಹಾಡು ಹಾಗೂ ಜಾನಪದ ಹಾಡುಗಳನ್ನು ಹಾಡಿದರು. ಆ ಸಂದರ್ಭ ಆ ಖಾದ್ಯಗಳ ಪರಿಮಳ ಎಲ್ಲೆಡೆ ಪಸರಿಸಿ ಎಲ್ಲರ ಮನದಲ್ಲೂ ಸಂತೋಷದ ಭಾವನೆಗಳು  ಸುಳಿಯಲಾರಂಬಿಸಿತು. ತಿಂಡಿತಿನಸುಗಳ ರುಚಿಯಂತೂ ಒಂದನ್ನೊಂದು ಮೀರಿಸುವಂತಿತ್ತು. 

ಸ್ಥಳೀಯ ಕಚೇರಿಯ ಉಪಾಧ್ಯಕ್ಷೆ ಕಲಾವತಿ ಡಿ. ಅಮೀನ್ ಇವರೊಂದಿಗೆ ಸರ್ವ ಮಹಿಳಾ ಸದಸ್ಯೆಯರು, ಗೌ। ಕೋಶಾಧಿಕಾರಿ ಸಂತೋಷ್ ಪೂಜಾರಿ ಹಾಗೂ ಸರ್ವ ಸದಸ್ಯರು, ಯುವ ಸದಸ್ಯರು ಕಾರ್ಯಕ್ರಮದ ಸಫಲತೆಗಾಗಿ ಶ್ರಮಿಸಿರುವರು.

ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರುವರೇ ಸಹಕರಿಸಿದ ಎಲ್ಲರಿಗೂ ಪ್ರೇಮಪೂರ್ವಕ ಧನ್ಯವಾದಗಳೊಂದಿಗೆ ಕಾರ್ಯದರ್ಶಿ ಚಂದ್ರೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.



Related posts

ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಮುಂಬೈ ಒತ್ತೆಯಾಳು ಬಿಕ್ಕಟ್ಟಿನ ಹಿಂದಿನ ವ್ಯಕ್ತಿ ರೋಹಿತ್ ಆರ್ಯ ಯಾರು? ಆತನ ಹಿನ್ನೆಲೆ ಏನು?

Mumbai News Desk

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk

ಜನವರಿ 1, 26ರಿಂದ ಮತ್ಸ್ಯಗಂಧ ರೈಲು ಪ್ರಯಾಣದಲ್ಲಿ ವ್ಯತ್ಯಯ; ಪನ್ವೇಲ್‌ನಲ್ಲೇ ನಿಲ್ಲಲಿವೆ ನೇತ್ರಾವತಿ, ಮತ್ಸ್ಯಗಂಧ ಎಕ್ಸ್‌ಪ್ರೆಸ್

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಕಚೇರಿಯ ವತಿಯಿಂದ ವಿಹಾರ ಕೂಟ

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ, ಸಮಾರೋಪ ಸಮಾರಂಭ

Mumbai News Desk