
ಜಾತಿ, ಮತ, ಮೇಲು- ಕೀಳು ,-ಬಡವ ಬಲ್ಲಿದನೆಂಬ ,ಬೇದ ಭಾವವಿಲ್ಲದೆ ಸತತ ಸುಮಾರು, ೪೦ ವರುಷಗಳ, ಸಾಮಾಜಿಕ, ಆರ್ಥಿಕ,ವೈದಕೀಯ, ಸಾಂಸ್ಕೃತಿ,ಕಲೆ ಹಾಗೂ ಆಟೋಟ ,ಕ್ರೀಡಾಕಲೆಗಳಿಗೆ ನಿರಂತರ ಪ್ರೋಸ್ಥಾಹ , ಕೊಡುತ್ತಾ ಬಂದಿರುವ ಮುಂಬೈ ನಗರದ ಹಿರಿಯ ಸಂಸ್ಥೆಗಳಲ್ಲಿ ಒಂದಾದ ಕನ್ನಡ ಕಲಾ ಸಮಾಜ (ಕೋಟೆ) ಮುಂಬಾಯಿ ಹಲವು ವರುಷ ಗಳಿಂದ , ತಮ್ಮ ಕಾರ್ಯಕಲಾಪಗಳನ್ನು ಕೆಲವು ಕಾರಣಾಂತಗಳಿಂದ ಸ್ಥಗಿತ ಹೊಂದಿತ್ತು,
ಆನಂತರ ಕೆಲವು ಹಿರಿಯ ಹಾಗೂ ಕಿರಿಯ ಸದಸ್ಯರು , ಈ ಪ್ರತಿಷ್ಠ ಸಂಸ್ಥೆಯನ್ನು ಮತ್ತೆ, ಮೊದಲಿನಂತೆ ಪುನಃ ತಮ್ಮ ಚಟುವಟಿಕೆಗಳನ್ನು ಮೊದಲಿನಂತೇ ಪುನಃ ಆರಂಭಿಸಬೇಕೆಂದು, ಈ ಕಳೆದ 4 ವರುಷಗಳಿಂದ ವಾರ್ಷಿಕ ಸ್ನೇಹ ಸಮ್ಮಿಲನ ಸಭೆಯ ಉದ್ದೇಶ……
ದಿನಾಂಕ 04.08.2023, ಭಾನುವಾರ, ಬೆಳಿಗ್ಗೆ ೧೧ ಘಂಟೆಗೆ ಸರಿಯಾಗಿ, ಮುಂಬಯಿ ಫೋರ್ಟ್ ಜೀವನ ಪ್ರಕಾಶ್ ಕಟ್ಟಡದ ೪ನೇ ಮಾಳಿಗೆಯಲ್ಲಿ , ಸಮಾಜದ ಅಧ್ಯಕ್ಷರಾದ ಮುಂಬಯಿಯ ಪ್ರತಿಷ್ಠಾ ನ್ಯಾಯವಾದಿ ಸತೀಶ್ ವಿ.ಬಿಜೈ ಇವರ ಗೈರು ಹಾಜರಿಯ ಕಾರಣ, ಇಂದಿನ ಸಭೆಯ ಹಿರಿಯ ಸದಸ್ಯ, ಹಾಗೂ ಮಾಜಿ ರೈಲ್ವೆ ನಿವೃತ್ತಿ ಉದ್ಯೋಗಿ ಶ್ರೀಯುತ ರವಿ ಕೋಟ್ಯಾನ್ ಇವರನ್ನು ಇಂದಿನ ಕಾರ್ಯಕಾರಿ ಸಭೆಯ ಅಧ್ಯಕ್ಷರಾಗಿ ಸಮಿತಿಯ ಒಪ್ಪಿಗೆಯ ಮೇರೆಗೆ , ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನ, ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ಈ ಸಂಸ್ಥೆಯಲ್ಲಿ ಅದೆಷ್ಟೋ ವರುಶಗಳಿಂದ, ಜನರ ಆಶೋತ್ತರಳಿಗೆ ಸ್ಪಂದಿಸಿ ನೀಡಿ, ಸೇವೆ ಗೈದ, ದೈವ ದೀನರಾದ ಸದಸ್ಯರಿಗೆ , ಶ್ರದ್ಧಾಂಜಲಿಯನ್ನು ಅರ್ಪಿಸಿ, ಅವರ ಆತ್ಮಕ್ಕೆಚಿರಶಾಂತಿ ಸಿಗಲೆಂದು, ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶೇಷವಾಗಿ, ಕಾರ್ಯಕಾರಿ ಸಮಿತಿಯ ಸಕ್ರಿಯ ,ಸಮಾಜದ,ಆಧಾರ ಸ್ತಂಭ, ಎನಿಸಿಕೊಂಡ , ಎಲ್ಲರ ಮನದಲ್ಲಿ ಪ್ರೀತಿ ಪಾತ್ರರಾದ ವೆಂಕಟೇಶ ಕೋಟ್ಯಾನ್ ಏರ್ಮಾಲ್, ಆಕಸ್ಮಿಕ ಹೃದಯಾಘಾತದಿಂದ ನಿಧನರಾದರು..ಅವರ ಕೊಡುಗೆ , ನಮ್ಮ ಸಮಾಜಕ್ಕೆ ಅಲ್ಲದೆ ಪ್ರತಿಯೊಬ್ಬ, ಬಂದವರನ್ನು, ಬಡವ ಬಲ್ಲಿದರೆಂದು ತಿಳಿಯದೆ ಸೇವೆ ಮಾಡುವ, ಮಹಾನುಭಾವ, ಅಗಲಿದ್ದು, ಸಮಾಜಕ್ಕೆ, ತುಂಬಲಾರದ ನಷ್ಟ. ಹುಟ್ಟು , ಸಾವು ಜೀವನದ ಎರಡುಗುಣಗಳು…ಮೂರು ದಿನದ ಮನುಷ್ಯನ ಬಾಳು, ಹುಟ್ಟುವಾಗಲೇ ದೇವರು ಪ್ರತಿಯೊಬ್ಬನ ಬಾಳಿಕೆಯ ಆಯುಷ್ಯ ಬರೆದು ಇಡುತ್ತಾನೆ…ಅವನಿಗೆ ಪ್ರಿಯರದವರನ್ನು ಬೇಗ ತನ್ನ ಕಡೆ ಬರ ಮಾಡಿ ಕೊಳ್ಳುತ್ತಾನೆ…ಅಂಥವರಲ್ಲಿ ಒಬ್ಬರಾದ ನಮ್ಮವರು ವೆಂಕಟೇಶ ಕೋಟ್ಯಾನ್, ಅವರಿಗೆ ದೇವರು ಚಿರಶಾಂತಿ ಸದಾ ನೀಡಲಿ ಎಂದು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ರವಿ ಕೋಟ್ಯಾನ್, ಕಾರ್ಯದರ್ಶಿ ವಸಂತ್ ಮಡಿವಾಳ, ಸದಸ್ಯರಾದ ಆನಂದ್ ಶೆಟ್ಟಿ, ಶ್ರೀಧರ್ ಸುವರ್ಣ, ಬಾಲಚಂದ್ರ ಶೆಟ್ಟಿ, ಶಿವರಾಂ ಸಫಲಿಗ, ಜಯಶೀಲ ಶೆಟ್ಟಿ, ಪುರುಷೋತ್ತಮ್7 ಸಾಲ್ಯಾನ್, ಅರುಣ್ ಶ್ರೀಯಾನ್, ಹಾಗೂ ಇನ್ನಿತರ ಸದಸ್ಯರು ತಮ್ಮ ಶೋಕ ಸಂತಾಪದಲ್ಲಿ ಬೇಸರದ , ಮನದಾಳದ ಮಾತನ್ನು ಆಡಿದರು. ಎರಡನೆಯದಾಗಿ, ಸಂಘದ ಹಿತ ದೃಷ್ಟಿಯಲ್ಲಿ, ಆನಂದ ಶೆಟ್ಟಿ,ಮಾತನಾಡುತ್ತಾ, ಹಿರಿಯರ, ಮಾರ್ಗದರ್ಶನದಿಂದ, ಕಿರಿಯ ಸದಸ್ಯರು ಸಹಕರಿಸಿ, ಸಮಾಜವ ಸೇವೆಯಲ್ಲಿ ತೊಡಗುವ, ಮರು ನಿರ್ಮಾಣ ಕಾರ್ಯ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.
ಇನ್ನೊಬ್ಬ ಹಿರಿಯ ಸದಸ್ಯರಾದ ಶಿವರಾಂ ಸಪಲಿಗೆ ತಮ್ಮ ಅನಿಸಿಕೆಯನ್ನು, ಪ್ರಸ್ತಾಪಿಸುತ್ತಾ, ನಾನು ಈ ಸಂಸ್ಥೆಯ ಚಿರಋಣಿಯಾಗಿದ್ದೇನೆ,ಕಾರಣ, ನಾನು ಅದೆಷ್ಟೋ ವರುಶಗಳಿಂದ ಹಿಂದೆ ಹೊಟ್ಟೆ ಪಾಡಿಗಾಗಿ,ಊರು ಬಿಟ್ಟು ಮುಂಬಯಿ ಮಹಾನಗರಕ್ಕೆ ಬಂದಾಗ, ನನಗೆ ಸಹರ, ಜನರ ಪರಿಚಯಮಾಡಿಕೊಟ್ಟ, ಈ ಸಮಾಜವನ್ನು ಎಂದಿಗೂ ಮರೆಯುವಂತಿಲ್ಲ….ನನ್ನ ಬಾಲ್ಯದ ದಿನಗಳಲ್ಲಿ ಅದೆಷ್ಟೋ ಯುವಕರು ಈ, ಊರಿಂದ ಬಂದು , ಇಲ್ಲಿ ನಿಲ್ಲಲು, ಫ್ರೀ ಆಶ್ರಯ ಕೊಟ್ಟಿತ್ತು, ಅವರು , ರಾತ್ರಿ ಶಾಲೆಯಲ್ಲಿ ಕಲಿತು ಇಂದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಆದರೂ , ಕೆಲವರು ಮಾತ್ರ ಬೆರಳಿಕೆಯಷ್ಟು ಮರೆತಿರಬಹುದು, ಆದರೆ ಸಮಾಜ ಅವರನ್ನು ಮರೆಯುವಂತಿಲ್ಲ….ಇನ್ನೊಬ್ಬ ಸಂಘದ ಸಕ್ರಿಯ ಕಾರ್ಯಕರ್ತ, ಕಾರ್ಯದರ್ಶಿ, ಮಾತನಾಡುತ್ತ, ನನಗೆ ಈ ಸಮಾಜವು ಅದೆಷ್ಟೋ ವರುಷ ನಿಲ್ಲಲು ಆಶ್ರಯ ನೀಡಿದುದರಿಂದ ನನ್ನ ಎಲ್ಲ ವಿಧ್ಯಾಭ್ಯಾಸ ಇಲ್ಲಿ ಇರುವಾಗಲೇ ಆಗಿತ್ತು. ನಾನು ನಿಜವಾಗಿಯೂ, ಚಿರಋಣಿ ಯಾಗಿದ್ದೇನೆ. ಪುರುಷೋತ್ತಮ ಸಾಲ್ಯಾನ್ ಮಾತನಾಡುತ್ತ, ನಾನು ಸಹಾ ಕನ್ನಡ ಕಾಲ ಸಮಾಜದ ಋಣಿ….ನನ್ನ ಬಾಲ್ಯದಲ್ಲಿ ಬಿಡುವಿನಲ್ಲಿ , ಆಟೋಟಸ್ಪರ್ದೇ, ಸಾಮಾಜಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದಾಗ ನಾನು ಭಾಗವಹಿಸಿ , ನನ್ನ ಅಳಿಲು ಸೇವೆ ಮಾಡುವ ಭಾಗ್ಯ, ಪುಣ್ಯ ನನಗಿತ್ತು………. ಶಿವರಾಂ ಸಪಲಿಗೆ ಮಾತನಾಡುತ್ತ, ಸಮಾಜದಿಂದ ನಮಗೆ ಅದೆಷ್ಟೋ ಅನುಭವ , ಜೀವನದ ಒಳ್ಳೆಯ ಸಂದೇಶ ಸಿಗುತ್ತವೆ….ತಮ್ಮ ಅನಿಸಿಕೆ, ಅಭಿಪ್ರಾಯ ಮಾತನಾಡುತ್ತ, ವಸಂತ ಮಡಿವಾಳ ಮಾತನಾಡುತ್ತ, ತಮ್ಮಲ್ಲಿ ಒಂದು ನಿವೇದನೆ ಕೇಳಿಕೊಳ್ಳುತ್ತೇನೆ, ಏನೆಂದರೆ, ತಾವು ತಮ್ಮ ಮನೆಯಲ್ಲಿ ತಮ್ಮ ಮಾತ್ರ ಭಾಷೆಯಲ್ಲೇ , ಮಕ್ಕಳ ಅಥವಾ ಮೊಮ್ಮಕ್ಕಳ ಹತ್ತಿರ ತುಳು ಅಥವಾ ಕನ್ನಡ ಭಾಷೆ ಯಲ್ಲಿ ಯೇ ಮಾತಾನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು….ತುಳು ಅಥವಾ ಕನ್ನಡ…ಕನ್ನಡ ಹಾಗು ತುಳು ತುಂಬಾ 2೦೦೦ ಹಿಂದಿನ ಕಾಲದ ಸ್ವಂಥ ಲಿಫಿ ಇರುವ ಭಾಷೆ….ಅದನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗು ಜವಾಬ್ದಾರಿ, ಭಾಷೆಯಿಂದ ಮಕ್ಕಳ, ಗುಣನದತೆ, ದೇವರಲ್ಲಿ ಭಕ್ತಿ , ಹಿರಿಯರನ್ನು, ಭಾಂದವರನ್ನು ಗೌರವಿಸುವ ಮನೋಭಾವ, ಪರಂಪರೆ ಬೆಳೆದು ಬರುತ್ತದೆ….ಎಲ್ಲರೂ ಕಡ್ಡಾಯವಾಗಿ ತುಳು ಅಥವಾ ಕನ್ನಡ ಭಾಷೆಯನ್ನು ಕಲಿಯುವ, ಕಲಿಸುವ, ಬರೆಯುವ ,ಹವ್ಯಾಸ ,ಅಭ್ಯಾಸ ಬರಲಿ , ಅದನ್ನು ಉಳಿಸಿ, ಬೆಳೆಸೋಣ, ಎಂದು ತಿಳಿಸಿದರು.
ಆನಂತರ ಕೆಲವು ಹಿರಿಯ , ಸಕ್ರಿಯ ಸದಸ್ಯರನ್ನು , ಅವರು ಸಂಘಕ್ಕೆ ಸಲ್ಲಿಸದ ಅದೆಷ್ಟೋ ಸಮಾಜ ಸೇವೆಯನ್ನು ನೆನಪಿಸಿ, ಆದರದಿಂದ, ಗೌರವದಿಂದ ಹೂ ಗುಚ್ಛ ಕೊಟ್ಟು ಸಭೆಯಲ್ಲಿ, ಭಾವಾಥ್ಮಕವಾಗಿ ಆದರದಿಂದ ಸನ್ಮನಿಸಲಾಯಿತು….
ಸಭೆಯ ಅಧಕ್ಷರಾದ ಅಧ್ಯಕ್ಷ್ರರಾದ ರವಿ ಕೋಟಿಯಾನ್ ಮಾತನಾಡುತ್ತ, ಸಂಸ್ಥೆಯ ಕಾರ್ಯಕಲಾಪಗಳನ್ನು ಮೊದಲಿನಂತೆ , ರೂಪಿಸಲು , ೬ ಜನರ, ಮುಖ್ಯಕಾರ್ಯ ಕಾರಿ ಸಮಿತಿ ಯನ್ನು ಆವಾಗಲೇ ರಚಿಸಲಾಗಿದೆ.
ಅದಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟು ಉಳಿದ ಸದಸ್ಯರು, ಅವರೊಟ್ಟಿಗೆ ಕೈಗೂಡಿಸಿ , ತಮ್ಮಲ್ಲಿ ಆಗುವ ಕಿರು ಸೇವೆಯನ್ನು ಮಾಡಲು ಸಹಕರಿಸಬೇಕೆಂದು , ಹಾಗು ಹಿರಿಯ ಹಾಗು ಕಿರಿಯ ಸಮಾಜದ ಸದಸ್ಯರು ಬಿಡುವಿನ ಸಮಯದಲ್ಲಿ, ನಮ್ಮ ಸಮಾಜದ ಹಿರಿಯ ನಾಗರಿಕ ಸದಸ್ಯರ ಮನೆಗೆ ಭೇಟಿ ಕೊಟ್ಟು ಅವರ ಅರೋಗ್ಯ ಸುಕ ಕಷ್ಟಗಳಲ್ಲಿ, ಸ್ಪಂದಿಸಿ, ಅವರ ಆಗಾಗ ಆಚಾರ ವಿಚಾರ ಮಾಡಿದುರಿಂದ ಅವರ ಮನಸ್ಸು ಹಗುರವಾಗಿ, ಅವರಿಗೆ ನೆಮ್ಮದಿ ತರಬಹುದು, ಅದಕ್ಕೆ ದೇವರ ದಯೆ ಕೂಡ ಇದೆ, ಎಂದು ನನ್ನ ಅಭಿಪ್ರಾಯ…..ಸಮಯ ಒದಗಿದರೆ, ಸಂಘದ ಹಿರಿಯ ಕಿರಿಯ ಸದಸ್ಯರು ಸೇರಿ, ತೀರ್ಥ ಕ್ಷೇತ್ರಗಳಿಗೆ ಹೋಗಿ, ದೇವರ ಆಶೀರ್ವಾದ, ಪಡೆದು ಪುಣ್ಯ ಕಟ್ಟೋಣ….. ಕಿರಿಯರು ಹಿರಿಯರು, ಜಾತಿ ಮತ ಬಡವ ,ಬಲ್ಲಿದ ಎಂಬ ಬೇದ ಭಾವ ಎಂಬ ಭಾವ ವಿಲ್ಲದೆ ನಾವೆಲ್ಲ , ಕನ್ನಡಾಂಬೆಯ, ಹಾಗು ತುಳುಮಾತೆ.ಯ ಮಕ್ಕಳಂತೆ ನಮ್ಮ ದಾಗುವಷ್ಟು ಅಳಿಲು ಸೇವೆ ಈ ಮನಕುಲ್ಕ್ಕೆ ಒಗ್ಗಟ್ಟಿನಿಂದ ಮಾಡೋಣ……
ಕೊನೆಯಲ್ಲಿ ಕಾರ್ಯದರ್ಶಿ ವಸಂತ್ ಮಡಿವಾಳ
ಇಂದಿನ ಈ ಸಭೆ ಸುಸಾಂಗವಾಗಿ, ಅಚ್ಚುಕಟ್ಟಾಗಿ, ನಡೆಸಲು ಜಾಗವನ್ನು ಕೊಟ್ಟು, ತುಳುನಾಡಿನ ಸಂಸ್ಕೃತಿಯ ತಿಂಡಿ ಚಾ, ಊಟ, ಉಪಚಾರ ಗಳಿಗೆ ಸಹಕರಿಸಿದ ಹಿರಿಯ ಸದಸ್ಯರಾದ ಜಯರಾಂ ಸಪಲಿಗ ಅವರಿಗೂ ಪುಷ್ಪ ಗುಚ್ಛ ಕೊಟ್ಟು, ಸನ್ಮಾನಿಸಿ, ಕೃತಧ್ಣತೆ ಸಲ್ಲಿಸಲಾಯಿತು…
ಸಭೆಯಲ್ಲಿ, ಹೋಟೆಲ್ ಉದ್ಯಮಿ ಜಯಶೀಲಾ ಶೆಟ್ಟಿ, ಅರುಣ್ ಶ್ರೀಯಾನ್, ಸುಂದರ್ ಸಪಲಿಗೆ, ಶಂಕರ್ ಕೋಟಿಯಾನ್, ಬಾಲಚಂದ್ರ ಶೆಟ್ಟಿ, ಶ್ರೀಧರ್ ಸುವರ್ಣ, ಶಂಕರ್ ಕೋಟಿಯಾನ್, ಜಗನ್ನಾಥ ಕರ್ಕೇರಾ , ಪುರುಷೋತ್ತಮ್ ಸಾಲಿಯಾನ್, ಜಗನ್ನಾಥ್ ಶ್ರೀಯಾನ್ ಉಪಸ್ಥಿತರಿದ್ದು, ಸಕ್ರಿಯ ಹಾಗೂ ಸಮಾಜ ಸೇವಕರಾದ ಶಿವರಾಂ ಸಪಲಿಗ, ವಸಂತ ಮಡಿವಾಳ ಇವರು ಇಂದಿನ ಸಭೆಯನ್ನು ಸುಸಾಂಗವಾಗಿ, ಸುಸಜ್ಜಿತವಾಗಿ ನೆರವೇರಿಸಲು ತುಂಬು ಹೃದಯದಿಂದ ಸಹಕರಿಸಿದರು .
ಕೊನೆಯದಾಗಿ , ರಾಷ್ಟ್ರಗೀತೆಯನ್ನು ಹಾಡಿ, ಸಭೆಯನ್ನು ಮುಕ್ತಾಯಿಸಲಾಯಿತು.