
ಪುಣ್ಯ ಕ್ಷೇತ್ರದ ಜೀರ್ಣೋದ್ದಾರಕ್ಕೆ ನಾವೆಲ್ಲರೂ ಭಕ್ತಿಯಿಂದ ಕೈಜೋಡಿಸೋಣ – ಸಿ.ಬಿ. ಕರ್ಕೇರ
ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು’ವಿನ ಸುಂದರ ತಾಣದಲ್ಲಿ ಸಪ್ತ ದುರ್ಗೆಯರ ಸಮ್ಮುಖದಲ್ಲಿ ನೆಲೆ ನಿಂತಿರುವ ಕ್ಷೇತ್ರ ಸಸಿಹಿತ್ಲು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ. ಅನಾದಿಕಾಲದಲ್ಲಿ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಕೈಯಾರೆ ಕಟ್ಟಿದ ಗರೋಡಿ ಎನಿಸಿದ ಈ ಕ್ಷೇತ್ರ ಇದೀಗ ದೈವಸ್ಥಾನವಾಗಿದ್ದು, ಮತ್ತೆ ಗರೋಡಿಯಾಗಬೇಕೆಂದು ಉಳ್ಳಾಯ ಪರಿವಾರ ಶಕ್ತಿಗಳು ಅಭಯ ನೀಡಿದ ಪ್ರಕಾರ ಮತ್ತೆ ಗರೋಡಿ ನಿರ್ಮಿಸಲು ಸರ್ವ ಸಿದ್ಧತೆ ನಡೆಸಿ ಮುಂದಡಿ ಇಡಲಾಗಿದೆ.
ಕ್ಷೇತ್ರದ ಜೀರ್ಣೋದ್ಧಾರದ ನಿಟ್ಟಿನಲ್ಲಿ ಬಿಲ್ಲವರ ಹಿತವರ್ಧಕ ಸಂಘ(ರಿ.) ಸಸಿಹಿತ್ಲು ಇದರ ಮುಂಬಯಿ ಸಮಿತಿಯ ಆಶ್ರಯದಲ್ಲಿ ನಂದಾದೀಪ ಆಡಿಟೋರಿಯಮ್, ಅಭಿನವ ಶೈಕ್ಷಣಿಕ ಮಂಡಲ್, ಜೆ.ಬಿ.ನಗರ್, ಗೋರೆಗಾಂವ್ ಪೂರ್ವದಲ್ಲಿ ಮನವಿಪತ್ರ ಬಿಡುಗಡೆ ಸಮಾರಂಭವು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ತುಳು ನಾಡಿನ ವೀರ ಪುರುಷರು ಕಾಂತಾಬಾರೆ ಬೂದಾಬಾರೆ ಪ್ರಥಮವಾಗಿ ಕಟ್ಟಿಸಿದ ಗರಡಿ ಸಸಿಹಿತ್ಲುನಲ್ಲಿ. ಅದೇ ರೀತಿ ಇನ್ನೂ ಹಲವಾರು ದೈವ ದೇವರುಗಳು ಪ್ರಥಮವಾಗಿ ನೆಲೆಯೂರಿದ ಊರು ಸಸಿಹಿತ್ಲು. ಇಂತಹ ಪುಣ್ಯ ಪ್ರದೇಶದಲ್ಲಿರುವ ಕಾಂತಾಬಾರೆ ಬೂದಾಬಾರೆಯರ ಗರೋಡಿಯನ್ನು ಜೀರ್ಣೋದ್ದಾರ ಮಾಡುವ ಭಾಗ್ಯ ನಮಗೊದಗಿದೆ. ಈ ಪುಣ್ಯ ಕ್ಷೇತ್ರದ ಜೀರ್ಣೋದ್ದಾರಕ್ಕೆ ನಾವೆಲ್ಲರೂ ಭಕ್ತಿಯಿಂದ ಕೈಜೋಡಿಸೋಣ. ಮೂರು ಕೋಟಿ ಅಂದಾಜು ವೆಚ್ಚದ ಈ ಕಾರ್ಯಕ್ಕೆ ಮುಂಬಯಿ ಹಾಗೂ ಪರಊರಿನವ ಸಹಾಯ ಅತೀ ಅಗತ್ಯ ಎಂದರು.
ನಳಿನಿ ಸಾಲಿಯಾನ್ ಮತ್ತು ಶೇಖರ್ ಸಸಿಹಿತ್ಲು ಇವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಮುಖ್ಯ ಅತಿಥಿಯಾಗಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಗೌರಾವಾನ್ವಿತ ಅತಿಥಿಗಳಾಗಿ ಸಾಕಿನಾಕ ಜೆರಿಮೆರಿಯ ಉಮಾಮಹೇಶ್ವರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಎನ್ ಉಡುಪ, ಮುಂಬಯಿ ಮಹಿಮ್ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಮನೋಜ್ ನಾಗ್‍ಪಾಲ್, ಡಿ.ಜೆ ಮೀಡಿಯ ಪ್ರಿಂಟ್ ಇದರ ಆಡಳಿತ ನಿರ್ದೇಶಕ ದಿನೇಶ್ ಕೋಟ್ಯಾನ್, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ, ಉದ್ಯಮಿ ಶಂಭು ಸನಿಲ್,
ಉದ್ಯಮಿ ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ, ಬಿಲ್ಲವರ ಅಸೋಷಿಯೇಷನ್ ಮುಂಬಯಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶಕುಂತಲಾ ಎಂ ಕೋಟ್ಯಾನ್ ಉಪಸ್ಥಿತರಿದ್ದು ಮಾತನಾಡುತ್ತಾ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ) ಪುನರ್ ನಿರ್ಮಾಣ ಶುಭ ಕಾರ್ಯಕ್ಕೆ ಪ್ರತಿಯೊಬ್ಬರ ಸಹಾಯ ಸರಕಾರವನ್ನು ಅಪೇಕ್ಷಿಸುತ್ತಾ ಒಂದು ವರ್ಷದ ಅವಧಿಯಲ್ಲಿ ಈ ಪುಣ್ಯ ಕ್ಷೇತ್ರದ ಎಲ್ಲಾ ಕಾರ್ಯವು ದೇವರ ಆಶೀರ್ವಾದದಿಂದ ಸುಗಮವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಮಹಿಳಾ ವಿಭಾಗದ ಕಾರ್ಯದರ್ಶಿ ಸವಿತಾ ಪೂಜಾರಿ, ಸಮಾಜಸೇವಾ ಕಾರ್ಯಕರ್ತೆ ಶಶಿಕಲಾ ಎಸ್ ಕೋಟ್ಯಾನ್ ಗೋರೆಗಾಂವ್. ವಿಶೇಷ ಅಥಿತಿಗಳಾಗಿ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಸಲಹೆಗಾರರಾದ ಉದಯ ಬಿ. ಸುವರ್ಣ, ಉಪಾಧ್ಯಕ್ಷ ಅನಿಲ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ನಿತಿನ್ ಕುಕ್ಯಾನ್, ಮತ್ತು ಜಗದೀಶ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಸಮಾರೋಪ ಸಮಾರಂಭ – ಮನವಿಪತ್ರ ಬಡುಗಡೆ ಮತ್ತು ಅಭಿನಂದನಾ ಸಮಾರಂಭ
ಸಸಿಹಿತ್ಲು ಕಲಾವಿದರ ಹಿತ್ಲು – ಕೈರಬೆಟ್ಟು ವಿಶ್ವನಾಥ ಭಟ್
ಇಂದು ಸ್ವತಂತ್ರ ಉತ್ಸವದ ದಿನ. ದೇಹ ಪೂಜೆ, ದೇವ ಪೂಜೆ ಹಾಗೂ ದೇಶಪೂಜೆ ಮುಖ್ಯವಾದದ್ದು. ನಾವು ಸಂಪಾದಿಸಿದನ್ನು ಒಳ್ಳೆ ಕೆಲಸಕ್ಕೆ ಉಪಯೋಗಿಸಬೇಕು. ಕ್ಷೇತ್ರದ ಉದ್ದಾರ ದಿಂದ ಊರಿನ ಉದ್ಧಾರವಾಗುತ್ತದೆ. ಎಲ್ಲರೂ ಒಟ್ಟಿಗೆ ಸೇರುವಂತ ಅವಕಾಶ ಉಂಟಾಗುತ್ತದೆ. ಸಸಿಹಿತ್ಲು ನಲ್ಲಿ ಮೇರು ಕಲಾವಿದರರಿದ್ದು ಸಸಿಹಿತ್ಲು ಕಲಾವಿದರ ಹಿತ್ಲು ನಂತೆ ಎಂದು ಮುಂಬಯಿಯ ಶ್ರೀಕೃಷ್ಣ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಕೈರಬೆಟ್ಟು ವಿಶ್ವನಾಥ ಭಟ್ ಅವರು ಆಶೀರ್ವಚನ ಭಾಷಣದಲ್ಲಿ ನುಡಿದರು.
ಬಿಲ್ಲವರ ಹಿತವರ್ಧಕ ಸಂಘ(ರಿ.) ಸಸಿಹಿತ್ಲು ಇದರ ಮುಂಬಯಿ ಸಮಿತಿಯ ಅಧ್ಯಕ್ಷ ಸತೀಶ್ ಎನ್ ಕೋಟ್ಯಾನ್‍ರವರು ಮನವಿಪತ್ರ ಬಡುಗಡೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಊರಿಗೆ ಆಗಲಿರುವ ಗಂಡಾಂತರವನ್ನು ತಪ್ಪಿಸಲು ಗರೋಡಿಯ ಪುನರ್ನಿಮಾಣದ ಕಾರ್ಯ ಅತೀ ಮುಖ್ಯವಾಗಿದ್ದು ಇಂದು ಮುಂಬಯಿಯಲ್ಲಿ ಈ ಸಭೆಯನ್ನು ಕರೆದಿದ್ದೇವೆ. ಹಣವಿದ್ದು ದಾನ ಮಾಡಿದಲ್ಲಿ ಮಾತ್ರ ಗೌರವ ಪ್ರಾಪ್ತಿ ಮುಂದಿನ ಏಪ್ರಿಲ್ ತಿಂಗಳಲ್ಲಿ ಗರೋಡಿಯಲ್ಲಿ ನೇಮೋತ್ಸವ ನಡೆಯಲು ನಿಮ್ಮೆಲ್ಲರ ಸಹಕಾರವಿರಲಿ ಎಂದರು.
ವೇದೆಕೆಯಲ್ಲಿ ಮುಖ್ಯ ಅತಿಥಿ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಬಿಲ್ಲವರ ಎಸೋಸಿಯೇಶನ್ನಿನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ.ಕೊಟ್ಯಾನ್, ಸುರೇಂದ್ರ ಎ. ಪೂಜಾರಿ (ಸಾಯಿ ಕೇರ್ ಲಾಜಿಸ್ಟಿಕ್), ಭಾರತ್ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಎಮ್ ಕೋಟ್ಯಾನ್, ಭಾಸ್ಕರ್ ಎಮ್ ಸಾಲ್ಯಾನ್, ಗಂಗಾಧರ ಜೆ ಪೂಜಾರಿ, ಗಣೇಶ್ ಡಿ ಪೂಜಾರಿ ಮತ್ತು ದಯಾನಂದ್ ಪೂಜಾರಿ, ಉದ್ಯಮಿ ಸುರೇಶ ಬಿ. ಸುವರ್ಣ ಹೋಟೆಲ್ ಉದ್ಯಮಿ ಮೋಹನ್ ಪೂಜಾರಿ, ವಿಶೇಷ ಅತಿಥಿಗಳಾಗಿ ಜಗನ್ನಾಥ್ ಕೋಟ್ಯಾನ್, ಉಮೇಶ್ ಸುವರ್ಣ, ಹಿರಿಯ ಪತ್ರಕತ್ರ ಪರಮಾನಂದ ವಿ. ಸಾಲ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಜೀರ್ಣೋದ್ದಾರ ಕಾರ್ಯಕ್ಕೆ ಶುಭ ಕೋರಿ ಬೆಂಬಲ ವ್ಯಕ್ತಪಡಿಸಿದರು.
ಬಿಲ್ಲವರ ಹಿತವರ್ಧಕ ಸಂಘದ ಸ್ಥಾಪಕ ಸದಸ್ಯ ಮಂಜುನಾಥ್ ಆರ್. ಕೋಟ್ಯಾನ್, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಹಿರಿಯ ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್ ಅವರಿಗೆ ಅಭಿನಂದನ ಕಾರ್ಯಕ್ರಮ ನಡೆದಿದ್ದು, ಬಿಲ್ಲವರ ಹಿತವರ್ಧಕ ಸಂಘ ಮುಂಬಯಿಯ ಉಪಾಧ್ಯಕ್ಷ ವಿಜಯಕುಮಾರ್ ಪಿ. ಸನಿಲ್ ಅವರು ಅಭಿನಂದನಾ ಭಾಷಣ ಮಾಡಿದರು.
ಪ್ರಾರ್ಥನಾ ಭಜನ್ ಸಂಧ್ಯಾ, ನೃತ್ಯ ವೈವಿಧ್ಯ, ಸಂಗೀತ ವೈವಿಧ್ಯ ಮತ್ತು ಕೆ.ವಿ.ಎಸ್ ಎಂಟರ್‍ಟೈನ್‍ಮೆಂಟ್ ಮುಂಬಯಿ ಇವರಿಂದ ‘ಈ ರಾತ್ರೆಗ್ ಪಗೆಲ್ಗ್ ಯಾನ್’ ನಾಟಕ ಪ್ರದರ್ಶನವಿತ್ತು.
ಕಾರ್ಯಕ್ರಮವನ್ನು ಪದ್ಮನಾಭ ಸಸಿಹಿತ್ಲು ಭಾಸ್ಕರ್ ಸುವರ್ಣ ಸಸಿಹಿತ್ಲು, ಶೇಖರ ಸಸಿಹಿತ್ಲು ದಿನೇಶ್ ಪಿ. ಸಾಲ್ಯಾನ್, ಮತ್ತು ನಳಿನಿ ಎಸ್ ಕೋಟ್ಯಾನ್ ನಿರ್ವಹಿಸಿದರು. ಅಶೋಕ್ ಕುಕ್ಯಾನ್ ವಂದನಾರ್ಪಣೆ ಮಾಡಿದರು.
=====
ಸನ್ಮಾನಿತರ ನುಡಿ.
ಸನ್ಮಾನಕ್ಕೆ ಕೃತಜ್ಞತೆಗಳು. ದೇವಸ್ಥಾನಕ್ಕೆ ಕೇವಲ ಮುಂಬಯಿಗರ ಮಾತ್ರವಲ್ಲ ಊರಿನವರ ಸಹಾಯ ಅಗತ್ಯ. ದೇವಸ್ಥಾನ ಜೀರ್ಣೋದ್ದಾರದಿಂದ ಊರಿನ ಉದ್ದಾರ ಹಾಗು ಜನರೆಲ್ಲರೂ ಒಟ್ಟಾಗುತ್ತಾರೆ. ಈ ಜೀರ್ಣೋದ್ದಾರ ಕಾರ್ಯವು ಒಂದು ವರ್ಷದ ಒಳಗೆ ಪೂರ್ಣ ಗೊಳ್ಳಲು ನಾವೆಲ್ಲರೂ ಸಹಕರಿಸೋಣ. –ಸೂರ್ಯಕಾಂತ್ ಜೆ ಸುವರ್ಣ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ
====
ಕಾಂತಾಬಾರೆ ಬೂದಾಬಾರೆಯರು ಕಟ್ಟಿದ ಎಂಟು ಗರಡಿಗಳಲ್ಲಿ ಪ್ರಥಮ ಗರಡಿ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು ಗರಡಿ. ತುಳು ನಾಡಿನಲ್ಲಿ ದೈವ ದೆವರುಗಳಿಗೆ ಪ್ರಾಧನ್ಯತೆ ಇದೆ. ಮುಂಬಯಿಗರು ಊರಿಗೆ ಬಂದಲ್ಲಿ ನಾವು ಏನೂ ಕೇಳುದಿಲ್ಲ ಆದರೆ ನಾವು ಮುಂಬಯಿಗೆ ಬಂದಲ್ಲಿ ಸನ್ಮಾನಿಸುತ್ತೀರಿ ಹಾಗೂ ನಾವು ನಿಮ್ಮಲ್ಲಿ ಸಹಾಯ ಕೇಳುತ್ತೇವೆ. ಊರಿನವರು ನಿಮ್ಮೆಲ್ಲರ ಭರವಸೆಯಲ್ಲಿದ್ದಾರೆ. ಆ ಸಾನಿಧ್ಯದಲ್ಲಿ ಕೆಲಸ ಮಾಡಿದವರು ಯಾರು ಹಾಳಾಗಲಿಲ್ಲ. ಯಾಕೆಂದರೆ ಇದು ದೇವರ ಸೇವೆ.- ಹಿರಿಯ ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್, (ಅಧ್ಯಕ್ಷ ಜೀರ್ಣೋದ್ದಾರ ಸಮಿತಿ)