
ಮುಂಬೈಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಸಮಾಜ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಕೆ ಎನ್ ಚಂದ್ರಶೇಖರ್ ಅವರು ತನ್ನ ಹುಟ್ಟುರಾದ ಪಡುಬಿದ್ರಿ ನಡಿಪಟ್ಣ ದಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಸದಾ ಚುರುಕಾಗಿ ಕ್ರಿಯಾಶೀಲರಾಗಿರುವ ಅವರು ತನ್ನ ಸಮಾಜದ ಮುಖ್ಯ ಕುಲಕಸಬು ಮೀನುಗಾರಿಕೆಯಲ್ಲೂ ತೊಡಗಿಕೊಂಡಿರುವರು .
ಮಳೆಗಾಲದ ಸಮುದ್ರ ತುಸು ಜೋರಾಗಿ ಇದ್ದರೂ, ಮೊನ್ನೆ (ಅ. 14) ಚಂದ್ರಶೇಖರ್ ಅವರ ಬೀಸು ಬಲೆಗೆ ದೊಡ್ಡ ಗಾತ್ರದ ತೊರಕೆ ಮೀನು (Sting Ray Fish )ಬಿದ್ದಿರುತ್ತದೆ. ಇಂತಹ ದೊಡ್ಡ ಗಾತ್ರದ ಮೀನು ಪರ್ಸಿನ್ ಅಥವಾ ಆಳ ಸಮುದ್ರದ ಬೋಟುಗಳಿಗೆ ಸಿಗುವುದಿದೆ, ಬೀಸು ಬಲೆಗೆ ದೊಡ್ಡ ಮೀನುಗಳು ಸಿಗುವುದು ಅಪರೂಪ, ಅಂದ ಹಾಗೆ ಚಂದ್ರಶೇಖರ್ ಅವರ ಬೀಸು ಬಲೆಗೆ ಬಿದ್ದ ತೊರೆಕೆ ಮೀನಿನ ಬರೋಬ್ಬರಿ ತೂಕ 11 ಕೆಜಿ. ಇಷ್ಟು ದೊಡ್ಡ ಗಾತ್ರದ ಮೀನು ನಾಡ ಬೀಸು ಬಲೆಗೆ ಬಿದ್ದದ್ದು ಒಂದು ದಾಖಲೆ ಎಂದು ಸ್ಥಳೀಯ ಮೀನುಗಾರರ ಅನಿಸಿಕೆ.
ಮುಂಬೈಯಲ್ಲಿ ಸಮಾಜ ಪರ ಸಂಘಟನೆಗಳಿಗೆ ಕೊಡುಗೈ ದಾನಿಯಾಗಿ ಸಹಕಾರ ನೀಡುತ್ತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಚಂದ್ರಶೇಖರ್ ಅಧ್ಯಾತ್ಮಿಕ ಒಲವುಳ್ಳವರು ಇದೀಗ ಹುಟ್ಟೂರಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.