
ಅಗಲಿದ ಗಣ್ಯರ ಕೊಡುಗೆ ಸಮಿತಿಗೆ ಅಪಾರ – ಎಲ್ ವಿ ಅಮೀನ್
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಅ20. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಘಟಿತವಾಗಿ ಬೆಳೆಯಲು, ಉಭಯ ಜಿಲ್ಲೆಗಳು lಅಭಿವೃದ್ಧಿಗೊಳ್ಳಲು ಸಮಿತಿಯಲ್ಲಿ ಜವಾಬ್ದಾರಿತ ಪದವಿಯಲ್ಲಿ ಸೇವೆ ಮಾಡಿದ ಸಮಿತಿಯ ಮಾಜಿ ಅಧ್ಯಕ್ಷ ನ್ಯಾ. ಸುಭಾಷ್ ಶೆಟ್ಟಿಯವರು ಅ. 10 ರಂದು ನಿಧನರಾಗಿದ್ದು ಹಾಗೂ
ಗೌ. ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷರಾಗಿದ್ದ ಬಿ ಮುನಿರಾಜ್ ಜೈನ್ ಅವರು ಜು. 29 ರಂದು ತವರೂರಲ್ಲಿ ನಿಧನರಾಗಿದ್ದು, ಅವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಆ. 17 ರಂದು ಸಂಜೆ ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.

ಅಗಲಿದ ಸಮಿತಿಯ ಇಬ್ಬರು ಗಣ್ಯರbಭಾವಚಿತ್ರಕ್ಕೆ ಪುಷ್ಪ ನಮನವನ್ನು ಅರ್ಪಿಸಿ ಸಮಿತಿಯ ಅಧ್ಯಕ್ಷರಾದ ಎಲ್ ವಿ ಅಮೀನ್ ಅವರು ನ್ಯಾ. ಶುಭಾಷ್ ಶೆಟ್ಟಿ ಯವರು ಧಾರ್ಮಿಕ ವ್ಯಕ್ತಿಯಾಗಿದ್ದು ಬಜ್ಪೆಯಲ್ಲಿ ನಮ್ಮ ಪಕ್ಕದ ಸ್ಥಳದಲ್ಲಿ ವಾಸವಾಗಿದ್ದರು. ಧಾರ್ಮಿಕ ಸೇವೆಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಾ ಜನಪ್ರಿಯರಾಗಿದ್ದರು. ಅವರು ದೈವಾಧೀನರಾಗುವ ಒಂದು ದಿನಕ್ಕೆ ಮೊದಲು ಒಂದು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾತುಗಳು ಗಂಭೀರತೆಯಾಗಿತ್ತು. ಅವರ ಅಧ್ಯಕ್ಷತೆಯ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಸಮಿತಿಯೊಂದಿಗೆ ಎಲ್ಲರನ್ನೂ ಆತ್ಮೀಯಿಂದ ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಮಹತ್ತರವಾದ ಕೊಡುಗೆಯನ್ನು ನೀಡುವಲ್ಲಿ ಶ್ರಮಿಸಿದರು.ಅದೇ ರೀತಿ ಸಮಿತಿಗೆ ಬಿ ಮುನಿರಾಜ್ ಜೈನ್ ಅವರ ಕೊಡುಗೆಯೂ ಅಪಾರ. ಸುದೀರ್ಘ ಕಾಲ ಸಮಿತಿಯ ಸೇವೆ ಮಾಡಿ. ಸೌಮ್ಯ ಸ್ವಭಾವ ದೊಂದಿಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಸಮಿತಿಯ ಎಲ್ಲಾ ಯೋಜನೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾ ಬಂದವರಾಗಿದ್ದರು ಇದೀಗ ನಮ್ಮನ್ನಗಲಿದ ಇಬ್ಬರೂ ಗಣ್ಯರು ಸಮಿತಿಯ ಸೇವಾ ಕಾರ್ಯದಲ್ಲಿ ಅಜರಾಮರಾಗಿರುತ್ತಾರೆ ಎಂದು ನುಡಿದರು.

ಪ್ರಾರಂಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಅವರು . ಬಿ ಮುನಿರಾಜ್ ಜೈನ್ ಮತ್ತು ನ್ಯಾ. ಸುಭಾಷ್ ಶೆಟ್ಟಿಯವರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಸಮಿತಿಯ ಸ್ಥಾಪಕ ಸದಸ್ಯ ಪಿ. ಡಿ. ಶೆಟ್ಟಿ.
ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್, ಮಹಾರಾಷ್ಟ್ರ ಕನ್ನಡಿಗರ ಕಲಾವಿದರ ಪರಿಷತ್ತು ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ,
ಪತ್ರಕರ್ತ ದಯಾಸಾಗರ ಚೌಟ, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಕುಲಾಲ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಕರ್ನಾಟಕ ಸಂಘ ಸಯನ್ ಸ್ಥಾಪಕ ಸದಸ್ಯ ಹ್ಯಾರಿ ಸಿಕ್ವೇರಾ, ಸಮಾಜ ಸೇವಕ ಡಾ. ಸತೀಷ್ ಬಂಗೇರ, ನ್ಯಾಯವಾದಿ ಶಶಿಧರ್ ಯು ಕಾಪು, , ನ್ಯಾಯವಾದಿ ರತ್ನಾಕರ್ ಮೋರ್ಲಾ ಮೊದಲಾದವರು ನುಡಿ ನಮನವನ್ನು ಅರ್ಪಿಸುತ್ತಾ ಅಗಲಿದ ಇಬ್ಬರೂ ಗಣ್ಯರು ಸಮಿತಿಗೆ ಸುಧೀರ್ಘ್ಹ ಸೇವೆ ಸಲ್ಲಿಸಿದ್ದು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಸಭೆ ಯಲ್ಲಿ ಸಂಜೀವ ಪೂಜಾರಿ ತೋನ್ಸೆ. ಡಾ. ಪ್ರಕಾಶ್ ಮೂಡಬಿದ್ರೆ ಮೊದಲಾದವರು ಉಪಸ್ಥಿತರಿದ್ದು ದಿ. ಬಿ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಶುಭಾಷ್ ಶೆಟ್ಟಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕೋಶಾಧಿಕಾರಿ ತುಳಸಿದಾಸ್ ಅಮೀನ್ ಧನ್ಯವಾದ ನೀಡಿದರು.,
ಇಬ್ಬರು ಸೇವಾಕರ್ತರು ಜೀವನದಲ್ಲಿ ಸಾರ್ಥಕ ಸೇವೆಯನ್ನು ಮಾಡಿ ನಮ್ಮನ್ನಗಲಿದ್ದಾರೆ:ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ಸಮಿತಿಗೆ ಮಹತ್ವವಾದ ಸೇವೆ ಮಾಡಿದ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ಸಮಿತಿಯ ಮಾಜಿ ಅಧ್ಯಕ್ಷ ನ್ಯಾ. ಸುಭಾಷ್ ಶೆಟ್ಟಿಯವರು ನಾಗಾರ್ಜುನ ಯೋಜನೆಯ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೆಲವು ರಾಜಕಾರಿಣಿಗಳ ವಿರೋದದ ಮಧ್ಯೆಯು ಸಂದಿಘ್ದ ಪರಿಸ್ಥಿತಿಯನ್ನು ಬಹಳ ಅರ್ಥಪೂರ್ಣವಾಗಿ ನಿಭಾಯಿಸಿದ ನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಇವರ ಅಕಾಲಿಕ ನಿಧನದಿಂದ ಸಮಿತಿಗೆ ನಷ್ಟ ಉಂಟಾದರೂ, ಅವರು ಜೀವನದಲ್ಲಿ ಸಾರ್ಥಕ ಸೇವೆಯನ್ನು ಮಾಡಿ ನಮ್ಮನ್ನಗಲಿದ್ದಾರೆ. ಬಿ ಮುನಿರಾಜ್ ಜೈನ್ ಅವರು ಮೌನವಾಗಿ ಸಮಿತಿಗೆ ಪ್ರೋತ್ಸಾಹ ನೀಡಿತ್ತಾ ಬಂದವರು. ಅವರ ಮೂಲಕ ನಮ್ಮ ಸಮಿತಿಗೆ ಅಖಿಲ ಕರ್ನಾಟಕ ಜೈನ ಸಂಘದ ಪ್ತ್ರೋತ್ಸಾಹ ನೀಡುತ್ತಿದ್ದರು, ಇವರಿಬ್ಬರೂ ನಮ್ಮನ್ನಗಲಿದರೂ, ಸಮಿತಿಗೆ ಇವರು ನೀಡಿದ ಕೊಡುಗೆ ಚಿರಸ್ಮರಣೀಯ ಎಂದರು.