
ಮಲಾಡ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ತುಳು ಕನ್ನಡಿಗರು ಬಲಿಷ್ಟಗೊಂಡಿದ್ದಾರೆ – ಐಕಳ ಹರೀಶ್ ಶೆಟ್ಟಿ
ಮುಂಬಯಿ: ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯು ಕಳೆದ 15 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಅಸಾಯಕರಿಗೆ ಸಹಾಯ ಹಸ್ತವನ್ನು ನೀಡುತ್ತಾ ಬಂದಿದ್ದು, ಸ್ಥಳೀಯ ತುಳು ಕನ್ನಡಿಗರನ್ನು ಒಂದೇ ತಾಯಿಯ ಮಕ್ಕಳಂತೆ ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ನುಡಿದರು.
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 15ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 18ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ದತ್ತ ಮಂದಿರ ರೋಡ್, ಮಲಾಡ್ ಪೂರ್ವ ಇಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಆಗಮಿಸಿದ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಇಂಥ ಕಾರ್ಯಕ್ರಮವನ್ನು ನಡೆಸಲು ದಾನಿಗಳ ಸಹಾಯ ಅಗತ್ಯ ಎನ್ನುತ್ತಾ ಇಂದು ಸನ್ಮಾನ ಕಾರ್ಯಕ್ರಮ ನಡೆದಿದ್ದು, ಸಾಧಕರನ್ನು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಅಂತರಾಷ್ಟ್ರೀಯ ಮಟ್ಟದ ಜ್ಯೋತಿಷಿ ಡಾ. ಎಂ ಜೆ ಪ್ರವೀಣ್ ಭಟ್, ಮಾತನಾಡುತ್ತಾ ಮಲಾಡ್ ಪರಿಸರಕ್ಕೂ ನನಗೂ ನಿಕಟ ಸಂಪರ್ಕವಿದ್ದು, ಈ ಧಾರ್ಮಿಕ ಸಂಸ್ಥೆಗೆ ನನ್ನ ಕೊಡುಗೆ ಯಾವತ್ತೂ ಇದೆ, ನನ್ನ ಯಶಸ್ಸಿಗೆ ಕಾರಣರಾದವರನ್ನು ಎಂದು ಮರೆಯುವಂತಿಲ್ಲ ಎನ್ನುತ್ತಾ ವರಮಹಾಲಕ್ಷ್ಮೀಯ ಆಶೀರ್ವಾದದಿಂದ ಸಮಿತಿಯು ಇನ್ನು ಎತ್ತರದ ಮಟ್ಟಕ್ಕೇರಲಿ ಎಂದರು.
ಈ ಸಂದರ್ಭದಲ್ಲಿ ಐವತ್ತು ವರ್ಷ ಪೂರೈಸಿದ ಮಲಾಡ್ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕುರಾರ್ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಇವರನ್ನು, ಬಿಲ್ಲವರ ಅಷೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಪೂಜಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರು ಮತ್ತು ಯಕ್ಷ ಗುರು ನಾಗೇಶ್ ಪೊಳಲಿ ಅವರನ್ನು ಗೌರವಿಸಲಾಯಿತು
10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ಸ್ಥಳೀಯ ಪ್ರತಿಭೆಗಳನ್ನು ಗೌರವಿಸಲಾಯಿತು.
ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಅಭ್ಯುದಯ ಬ್ಯಾಂಕಿನ ಸಿಇಓ ಹಾಗೂ ಎಂಡಿ ಪ್ರೇಮ್ ನಾಥ್ ಸಾಲಿಯಾನ್, ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಶಶಿಧರ ಕೆ ಶೆಟ್ಟಿ ಇನ್ನಂಜೆ, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಲ್ಲಾರ್, ಕುಲಾಲ ಸಂಘ ಮುಂಬಯಿ ಯ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ವರ್ಲಿ ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ , ಹೋಟೆಲ್
ನಿಧಿ ಬಿಯರ್ ಶಾಪ್ ಕಾಂದಿವಲಿಯ ಮಾಲಕ ಸುರೇಂದ್ರ ಶೆಟ್ಟಿ ಹೊಸ್ಮಾರ್, ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಸಮಾಜ ಸೇವಕ, ನಿತ್ಯಾನಂದ ಪೂಜಾರಿ ಬೈಕುಲ, ಹೋಟೆಲ್ ಉದ್ಯಮಿ ಸಂತೋಷ್ ಗೋಪಾಲ್ ಪೂಜಾರಿ, ಕಾರ್ಕಳದ ಕಾಂಗ್ರೆಸ್
ಪಕ್ಷದ ಮುಖಂಡ ಉದಯ ಶೆಟ್ಟಿ ಮುನಿಯಾಲ್ , ಪ್ರಿಯಾಂಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಮಲಾಡ್ ಇದರ ಕಾರ್ಯಧ್ಯಕ್ಷ ಹೋರಿಲ್ ಗುಪ್ತ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಮಿತಿಯ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲಾ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ವಿ ಕುಮರೇಶ್ ಆಚಾರ್ಯ, ಶ್ರೀಮತಿ ಕೆ ಆಚಾರ್ಯ ಮತ್ತು ಪರಿವಾರ, ಡಾ. ಎಂ ಜೆ ಪ್ರವೀಣ್ ಭಟ್, ಶಶಿಧರ ಹೆಗ್ಡೆ ಮತ್ತು ಪರಿವಾರ, ದಿನೇಶ್ ಕಾಮತ್, ಉಡುಪಿ ಕ್ಯಾಟರರ್ಸ್, ಹರೀಶ್ ಶೆಟ್ಟಿ ಗುರ್ಮೆ,ಎಂ ಎಂ ಗ್ರೂಪ್ ವಿರಾರ್ ಮತ್ತು ನಾಲಾಸೋಪಾರ ಮತ್ತಿತರರು ಸಹಕರಿಸಿದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪರವಾಗಿ ಸಮಿತಿಯ ಸಂಚಾಲಕ ದಿನೇಶ್ ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು, ಕಾರ್ಯದರ್ಶಿ ದಿನೇಶ್ ಎಸ್. ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಉಪಾಧ್ಯಕ್ಷರುಗಳಾದ ವಿ. ಕುಮರೇಶ್ ಆಚಾರ್ಯ ಮತ್ತು ಸಂತೋಷ್ ಕೆ. ಪೂಜಾರಿ, ಜೊತೆ ಕಾರ್ಯದರ್ಶಿ ಸನತ್ ಪೂಜಾರಿ, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಸಲಹಾ ಸಮಿತಿಯ ಪರಮಾನಂದ ಭಟ್, ಪ್ರೇಮನಾಥ್ ಎಸ್ ಸಾಲ್ಯಾನ್, ರವಿ ಸ್ವಾಮೀಜಿ ಮತ್ತು ವೇದಾನಂದ ಸ್ವಾಮಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್, ಉಪಕಾರ್ಯಾಧ್ಯಕ್ಷರುಗಳಾದ ಲಲಿತ ಎಸ್ ಗೌಡ, ಗೀತಾ ಜೆ. ಮೆಂಡನ್, ಸಂಧ್ಯಾ ಪ್ರಭು, ಕಾರ್ಯದರ್ಶಿ ಶ್ರೀಮತಿ ಕೆ. ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ, ಜೊತೆ ಕಾರ್ಯದರ್ಶಿ ಶೋಬಾ ರಾವ್, ಜೊತೆ ಕೋಶಾಧಿಕಾರಿಗಳಾದ ನಳಿನಿ ಕರ್ಕೇರ, ಮತ್ತು ಜಯಲಕ್ಷ್ಮಿ ನಾಯಕ್, ಸಲಹಾ ಸಮಿತಿಯ ಸದಸ್ಯರಾದ ಮೋಹಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್, ಉಪಕಾರ್ಯಾಧ್ಯಕ್ಷರುಗಳಾದ ದಿವ್ಯ ಎನ್ ಅಮೀನ್, ನವೀನ್ ಯು ಸಾಲ್ಯಾನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಕೋಶಾಧಿಕಾರಿ ದಿಶಾ ಕರ್ಕೇರ, ಸಂಚಾಲಕ ಡಾ. ಸಶಿನ್ ಆಚಾರ್ಯ, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಜೊತೆ ಕಾರ್ಯದರ್ಶಿ ಪವನ್ ರಾವ್, ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ಪ್ರಣಿತಾ ಶೆಟ್ಟಿ, ಸಾಮಾಜಿಕ ಮಾಧ್ಯಮ ಉಸ್ತುವಾರಿಗಳಾದ ಹರ್ಷ ಕುಂದರ್ ಮತ್ತು ನಿಧಿ ನಾಯಕ್ ಮೊದಲಾದವರು ಸಹಕರಿಸಿದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರಿಂದ ಯಕ್ಷಗುರು ನಾಗೇಶ ಪೊಳಲಿ ಇವರ ನಿರ್ದೇಶನದಲ್ಲಿ ಸಿ ಎ ಸುರೇಂದ್ರ ಕೆ ಶೆಟ್ಟಿ, ರವೀಂದ್ರನಾಥ್ ಭಂಡಾರಿ, , ಪ್ರಣೀತ ವರುಣ್ ಶೆಟ್ಟಿ ಯವರ ಸಹಕಾರದೊಂದಿಗೆ ’ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.

ಸಭಾ ಕಾರ್ಯಕ್ರಮದ ನಂತರ ವೇದಮೂರ್ತಿ ಶ್ರೀ ರಮೇಶ್ ವಾಗ್ಲೆ ಡೊಂಬಿವಲಿ, ಇವರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಸುಮಾರು 5೦೦ ಕ್ಕೂ ಮಿಕ್ಕಿ ಸುಮಂಗಲೆಯರು ಪಾಲ್ಗೊಂಡಿದ್ದರು. ಪೂಜಾ ಸೇವವನ್ನು ಮೋಹಿನಿ ಜಗನ್ನಾಥ್ ಶೆಟ್ಟಿ ಮತ್ತು ಪರಿವಾರದವರು ನಡೆಸಿದರು. ಆನಂತರ ಮಹಾಮಂಗಳಾರತಿ, ಮಹಾಪ್ರಸಾದ ಹಾಗೂ ಅನ್ನಪ್ರಸಾದ ನಡೆಯಿತು.
===
ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ. ಮಕ್ಕಳಿಗೆ ಇದು ಅತೀ ಅಗತ್ಯ. ಮಕ್ಕಳು ಎಳೆಯದರಲ್ಲೇ ಪರಿಶ್ರಮ ವಹಿಸುವ ಅಗತ್ಯವಿದೆ. ಇದು ಅವರ ಮುಂದಿನ ಜೀವನಕ್ಕೆ ಪ್ರಯೋಜನಕಾರಿಯಾಗುವುದು. ನಮ್ಮ ಮಕ್ಕಳಿಗೆ ನಾಡಿನ ಸಂಸ್ಕೃತಿಯನ್ನು ತಿಳಿಸುವ ಕಾರ್ಯ ಮುಂದುವರಿಯಲಿ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡೋಣ. ಹಿರಿಯರನ್ನು, ಮಹಿಳೆಯರನ್ನು ಹಾಗೂ ಪರಿಸರವನ್ನು ಗೌರವಿಸೋಣ.
–ಡಾ. ವಿಜೇತ ಶೆಟ್ಟಿ, ಪ್ರಾಂಶುಪಾಲೆ , ವಿವೇಕ್ ವಿದ್ಯಾಲಯ ಗೋರೆಗಾಂವ್ (ಪ.)
=====
ಇಂದು ನನಗೆ ಯಕ್ಷಗಾನದಲ್ಲಿ ಪಾತ್ರವಹಿಸುವ ಅವಕಾಶ ಅವಕಾಶ ಸಿಕ್ಕಿದೆ. ಯಕ್ಷಗಾನ ನಮ್ಮ ತುಳು ನಾಡಿನ ಕಲೆ. ವರಮಹಾಲಕ್ಷ್ಮಿ ಪೂಜಾ ಸಮಿತ್ಯು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಎಲ್ಲರಿಗೂ ವರಮಹಾಲಕ್ಷ್ಮಿ ಆಶೀರ್ವದಿಸಲಿ. –ಸಿಎ ಸುರೇಂದ್ರ ಶೆಟ್ಟಿ, ಅಧ್ಯಕ್ಷರು ಬಾಂಬೆ ಬಂಟ್ಸ್ ಅಸೋಸಿಯೇಷನ್
ಸನ್ಮಾನಿತರ ನುಡಿ :
ಯಾವುದಕ್ಕೂ ಋಣ ಬೇಕು. ಇಂದು ವೇದಿಕೆಯಲ್ಲಿರುವ ಗಣ್ಯಾತಿಗಣ್ಯರಿಂದ ಸನ್ಮಾನ ಪಡೆಯಲೂ ಋಣ ಬೇಕು. ನಮ್ಮ ಜೀವನ ಹಾಲಿನಿಂದ ಪಡೆದ ಬೆಣ್ಣೆಯಂತಿರಬೇಕು. ಅದು ಯಾವಾಗಲೂ ಹಾಳಾಗುದಿಲ್ಲವಂತೆ. ಆದುದರಿಂದ ನಮ್ಮ ಜೀವನ ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದಲ್ಲಿ ನಡೆಯುವಂತಾಗಲಿ. ಈ ಗೌರವವನ್ನು ಶನಿ ಮಹಾತ್ಮಾ ಪೂಜಾ ಸಮಿತಿಗೆ ಅರ್ಪಿಸುತ್ತಿರುವೆನು.- ಶ್ರೀನಿವಾಸ ಸಾಫಲ್ಯ, ಅಧ್ಯಕ್ಷರು, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕುರಾರ್
===
ನಾನು ಈ ಸಮಿತಿಯ ಒಂದು ಅಂಗವಾಗಿದ್ದು, ಸನ್ಮಾನಿಸಿದಕ್ಕೆ ಸಮಿತಿಗೆ ಆಭಾರಿಯಾಗಿದ್ದೇನೆ. ಪವಿತ್ರವಾದ ದಿನದಲ್ಲಿ ಪವಿತ್ರವಾದ ಸ್ಥಳದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ. ನಾರಾಯಣ ಗುರುಗಳ ತತ್ವದಂತೆ ನಾವು ಎಲ್ಲರೂ ಒಂದೇ ಮನೆಯವರಂತೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. – ಸಂತೋಷ್ ಕೆ ಪೂಜಾರಿ, ಬಿಲ್ಲವರ ಅಶೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಭಾರತ್ ಬ್ಯಾಂಕಿನ ನಿರ್ದೇಶಕ.
ಪೂಜೆ ಪ್ರಾರಂಭಿಸಿದ ಫಲದಿಂದ ಮಲಾಡ್ ಕುರಾರ್ ವಿಲೇಜ್ಈಗ ಸಿಟಿಯಾಗಿ ರೂಪ ತಾಳಿದೆ: ನ್ಯಾ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರ
ಸಮಾರಂಭದ ಅಧ್ಯಕ್ಷತೆ ವಹಿಸಿದ ಪೂಜಾ ಸಮಿತಿಯ ಅಧ್ಯಕ್ಷ ನ್ಯಾ ಜಗನ್ನಾಥ್ ಎನ್ ಶೆಟ್ಟಿ ಮಾತನಾಡಿ 15 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಯು ಪರಿಸರದ ತುಳು ಕನ್ನಡಿಗರನ್ನು ಒಟ್ಟು ಸೇರಿಸಿ ಜನಸಾಮಾನ್ಯರಿಗೆ ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಸೇವೆ ಮಾಡುವುದರೊಂದಿಗೆ ನಮ್ಮ ನಾಡಿನ ಸಂಸ್ಕೃತಿ, ಭಾಷೆ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದೆ. ಈ ಪರಿಸರದಲ್ಲಿ ಬಹಳಷ್ಟು ಜನ ತುಳು ಕನ್ನಡಿಗರು ಕಷ್ಟದ ಪರಿಸ್ಥಿತಿಯಲ್ಲಿ ವಾಸ್ತವ್ಯದಲ್ಲಿದ್ದರೂ. ನಮ್ಮ ಸಮಿತಿ 15 ವರ್ಷಗಳ ಹಿಂದೆ ಒಳ್ಳೆಯ ಸಂಕಲ್ಪವನ್ನು ಮಾಡಿ ಪೂಜೆಯನ್ನು ಪ್ರಾರಂಭಿಸಿದ್ದೇವೆ,ಕನ್ನಡಿಗರ ಸಮಸ್ಯೆಗಳು ಕಷ್ಟಗಳು ದೂರವಾಗಬೇಕೆಂಬ ನಮ್ಮ ಸಂಕಲ್ಪವಾಗಿತ್ತು
ಅದು ಈಗ ಈಡೇರಿದೆ. ಮಲಾಡ್ ಪೂರ್ವದ ಕುರಾರ್ ವಿಲೇಜ್ ಈಗ ಸಿಟಿಯಾಗಿ ಪರಿವರ್ತನೆಗೊಂಡಿದೆ.ದೇಶದ ಪ್ರಸಿದ್ಧ ಕಟ್ಟಡ ನಿರ್ಮಾಣ ಸಂಸ್ಥೆಗಳ ಕಟ್ಟಡಗಳು ತಲೆಯೆತ್ತಿ ನಿಂತಿದೆ .ಚಾಲ್ ಪ್ರದೇಶದಲ್ಲಿ ವಾಸ್ತವ್ಯವಿದ್ದ ತುಳು ಕನ್ನಡಿಗರು ಬಹು ಮಡಿನ ಕಟ್ಟಡದಲ್ಲಿ ವಾಸ್ತವ್ಯ ವಕ್ಕೆ ಸ್ಥಳಾಂತರ ಗೊಂಡಿದ್ದಾರೆ ಇದಕ್ಕೆ ನಮ್ಮ ಪೂಜಾ ಸಂಕಲ್ಪವು ಮುಖ್ಯ ಕಾರಣವಾಗಿದೆ ಎಂದು ನನ್ನ ಅನಿಸಿಕೆ. ಪರಿಸರದ ಮಕ್ಕಳೂ ಸಾಂಸ್ಕೃತಿಕವಾಗಿ ಸದೃಢ ಗೊಂಡಿದ್ದಾರೆ. ಇಂದು ಹಿರಿ ಕಿರಿಯರು ಯಕ್ಷಗಾನವನ್ನು ಕಲಿತು, ಕನ್ನಡ ಬಾರದೇ ಇದ್ದರೂ ಕೂಡ ಕನ್ನಡ ಸಂಭಾಷಣೆಯನ್ನು ಇಂಗ್ಲಿಷ್ ನಲ್ಲಿ ಬರೆದು ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ ಎನ್ನಲು ಅಭಿಮಾನವಾಗುತ್ತದೆ. ಮಹಿಳೆಯರು ಒಗ್ಗಟ್ಟಾಗಿ ಸಮಾಜದ ಸೇವಾ ಕಾರ್ಯದಲ್ಲಿ ಮುಂಚೇನಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಜಾತಿ ಭಾಷೆಗಳನ್ನು ತೊರೆದು ಒಗ್ಗಟ್ಟಾಗಿ ಭಾಷೆ ಸಂಸ್ಕೃತಿ, ಸಂಸ್ಕಾರ ವನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ನುಡಿದರು.