30.1 C
Karnataka
April 4, 2025
ಮುಂಬಯಿ

ಮೀರಾ -ದಹಣು ಬಂಟ್ಸ್ ವತಿಯಿಂದ ಆಟಿದ ಕೂಟ -2024 ಕಾರ್ಯಕ್ರಮ




ಮಾತಾ – ಪಿತರು ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಹೆಚ್ಚು ಸಲಹೆ ನೀಡಿದಾಗ ಯುವ ಸಮುದಾಯ ಜಾಗೃತವಾಗುತ್ತದೆ: ವಿರಾರ್ ಶಂಕರ್ ಶೆಟ್ಟಿ
ವಸತಿ ಅ23.. ಮೀರಾ ರೋಡ್ ನಿಂದ ದಹಣು ತನಕದ ಬಂಟ ಬಾಂದವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ2009 ರಲ್ಲಿ ಸ್ಥಾಪನೆಯದ ಮೀರಾ ದಹಣು ಬಂಟ್ಸ್ ಇದರ ವತಿಯಿಂದ ಆಟಿದ ಕೂಟ -2024 ಕಾರ್ಯಕ್ರಮವು ಆಗಸ್ಟ್ 10 ರಂದು ವಸಯಿ ಪಶ್ಚಿಮದ ದತ್ತಾನಿ ಮಾಲ್ ನ ಆರ್ನ ಸ್ವರ್ಣ ಬಂಕ್ವೆಟ್ ಹಾಲ್ ನಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಮತ್ತು ಗೌರವ ಅಧ್ಯಕ್ಷರಾದ ಶಂಕರ ಬಿ ಶೆಟ್ಟಿ ವಿರಾರ್ ಇವರು ದೀಪ ಪ್ರಜ್ವಲೆನೆಯೊಂದಿಗೆ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ವಸಯಿ ವಿರಾರ್ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರವೀಣ್ ಸಿ ಶೆಟ್ಟಿ ಆಗಮಿಸಿ ಸಂಸ್ಥೆಯ ಯಶಸ್ವಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಅತಿಥಿಯಾಗಿ ಆಗಮಿಸಿದ ಕಲಾ ಜಗತ್ತು ಮುಂಬೈ ಇದರ ಸಂಸ್ಥಾಪಕ. ಚಿಣ್ಣರ ಬಿಂಬ ಮುಂಬೈ ಇದರ ಸಂಸ್ಥಾಪಕ, ರಂಗ ನಟ, ವಾಗ್ಮಿಮುಂಬೈಯಲ್ಲಿ ತುಳುನಾಡು ಎಂಬ ಯಶಸ್ವಿ ಕಾರ್ಯಕ್ರಮದ ರೂವಾರಿ ವಿಜಯ್ ಕುಮಾರ ಶೆಟ್ಟಿ ಆಟಿದ ತಿಂಗಳ ಬಗ್ಗೆ ಮತ್ತು ಬಂಟರ ಯಶಸಿನ ಬಗ್ಗೆ ಹಿತ ನುಡಿಯನ್ನು ನುಡಿದರು.


ಗೌರವ ಅತಿಥಿಯಾಗಿ ಉಪಸ್ಥಿತಿರಿಂದ ಮೀರಾ ಭಾಯಂದರ್ ಕರ್ನಾಟಕ ಮಹಾಮಂಡಲದ ಕಾರ್ಯದರ್ಶಿ ವಸಯಿಯ ಕೌಶಿಕಿ ಸಿಲ್ಕ್ಸ್ nx ನ ಪಾಲುದಾರ ನಯನ ರಮೇಶ್ ಶೆಟ್ಟಿ ಆಟಿ ತಿಂಗಳ ಬಗ್ಗೆ ಮತ್ತು ಬಂಟರ ಆಚಾರ ವಿಚಾರದ ಬಗ್ಗೆ ನುಡಿದರು. ಗೌರವ ಅತಿಥಿಯಾಗಿ ಪಾಲ್ಗರ್ ನ ಸಮಾಜ ಸೇವಕಿ ವಿಶಾಲ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಗೌರಧ್ಯಕ್ಷರಾದ ಶಂಕರ್ ಬಿ ಶೆಟ್ಟಿ ವಿರಾರ್ ಮಾತನಾಡುತ್ತ ನಮ್ಮ ಯುವ ಪೀಳಿಗೆಯು ನಮ್ಮ ಆಚಾರ ವಿಚಾರದಿಂದ ದೂರ ಇದ್ದಾರೆ.ಮಕ್ಕಳ ಮಾತಾ ಪಿತರು ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಹೆಚ್ಚು ಸಲಹೆ ನೀಡಿದಾಗ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ಸಭೆಯನ್ನು ಉದ್ದೇಶೀಸಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಕರ್ನುರು ಶಂಕರ ಆಳ್ವ ಮಾತನಾಡುತ್ತಾ ಆಟಿ ತಿಂಗಳ ಬಗ್ಗೆ ಹಿತ ನುಡಿಗಳನ್ನು ನುಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬೋಯ್ಸರ್ ನ ಉದ್ಯಮಿ ಭುಜಂಗ ಶೆಟ್ಟಿ ಯವರು ಮಾತನಾಡುತ್ತಾ ಸಂಸ್ಥೆಗೆ ಭದ್ರವಾದ ಅಡಿಪಾಯದ ಅಗತ್ಯವಿದೆ ನಾವೆಲ್ಲರೂ ಸೇರಿ ವಿರಾರ್ ನಲ್ಲಿ ಸ್ವಂತ ಕಛೇರಿ ಮಾಡುವ
ಹೊಂದುವ ಎಂದರು.
.
ಈ ಸಂದರ್ಭದಲ್ಲಿ 2024 ಸಾಲಿನ. ಸಿ ಎ ಪರೀಕ್ಷೆ ಯಲ್ಲಿ ಉತ್ತಿರ್ಣಳಾದ ಕುಮಾರಿ ಶ್ರೀರಕ್ಷಾ ಎಸ್ ಶೆಟ್ಟಿ ಇವರನ್ನು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಮತ್ತು ಸಮಾಜಸೇವಕಿ ಮೀರಾ ದಹಣು ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಾತಾ ಶೆಟ್ಟಿ ಯವರನ್ನು ಮತ್ತು ಮೀರಾ ದಹಣು ಬಂಟ್ಸ್ ನ ಉಪಾಧ್ಯಕ್ಷರಾದ ಕರ್ನುರು ಶಂಕರ ಆಳ್ವಮತ್ತು ಅವರ ಆರ್ನ ಸ್ವರ್ಣ ಬಂಕ್ವೆಟ್ ಹಾಲ್ ನ ಪಾಲುದಾರರಾದ ಕರುಣಾಕರ ಅಮೀನ್ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಸಯಿಯ ಪ್ರತಿಷ್ಠಿತ ಹೋಟೆಲ್ ಉದ್ಯಮಿ ರತ್ನಾಕರ ಶೆಟ್ಟಿ ಆದಿತ್ಯ ರೆಸಿಡೆನ್ಸಿ, ಬೋಯ್ಸರ್ ನ ಉದ್ಯಮಿ ರಘುರಾಮ್ ರೈ. ಯಶೋದಾ ಭಾಸ್ಕರ್ ಶೆಟ್ಟಿ ಬೋಯಿಸರ್, ಮೀರಾ ದಹಣು ಬಂಟ್ಸ್ ನ ಸಂಚಾಲಕರ ನಾಗರಾಜ್ ಶೆಟ್ಟಿ, ನಾಯ್ಗಾವ್ – ವಿರಾರ್ ವಲಯದ ಕಾರ್ಯಧ್ಯಕ್ಷ ಅಶೋಕ್ ಕೆ ಶೆಟ್ಟಿ ವಸಯಿ, ಸಂಸ್ಥೆಯ ಖಜಾಂಚಿ ರವಿ ರೈ ಬೋಯಿಸರ್ , ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಬೋಯಿಸರ್.,ವಿನಯ ಅಡಪ ಬೋಯ್ಸರ್, ಮೀರಾ ಬಾಯಿಂದರ್ ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷ ಉಮೇಶ್ ಶೆಟ್ಟಿ ಬೆಳ್ಳಂಪಳ್ಳಿ, ಮೀರಾ ಬಾಯಿಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷೆ ಪ್ರಿಯ ಆರ್ ಶೆಟ್ಟಿ. ನಾಯಗಾವ್ ವಿರಾರ್ ವಲಯದ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಡುವೆ ಕೌಶಿಕಿ ಸಿಲ್ಕ್ಸ್ nx ರವರ ವತಿಯಿಂದ ನಡೆದ ಲಕ್ಕಿ ಡಿಪ್ ಸ್ಪರ್ಧೆಯಲ್ಲಿ ವಿಜೇತರಿಗೆ ಉತ್ತಮ ದರ್ಜೆಯಸೀರೆಯನ್ನು ಬಹುಮಾನವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ.
ವಸಯಿ ಕರ್ನಾಟಕ ಸಂಘ, ಕರ್ನಾಟಕ ಕೋ ಕ್ರೆಡಿಟ್ ಸೊಸೈಟಿ, ಬಿಲ್ಲವರ ಅಶೋಯಿಷನ್, ಮೊಗವೀರ ಸಂಘ. ರಜಕ ಸಂಘ ಇತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು,
ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯ ಉದ್ಯಮಿಗಳು ಮತ್ತು ಪ್ರದೀಪ್ ಶೆಟ್ಟಿ ವಿರಾರ್, ನವೀನ್ ಶೆಟ್ಟಿ ವಿರಾರ್, ನವೀನ್ ಶೆಟ್ಟಿ ವಸಯಿ, ಸುರೇಶ್ ಶೆಟ್ಟಿ ವಸಯಿ,ಹರೀಶ್ ರೈ ಮೀರಾ ರೋಡ್, ಯಶೋದಾ N ಶೆಟ್ಟಿ ವಸಯಿ, ಪ್ರಮೀಳಾ ಶೆಟ್ಟಿ ವಸಯಿ ಮತ್ತಿತರರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದರು.ಕಾರ್ಯಕ್ರಮವನ್ನು ಮೀರಾ ದಹುನು ಬಂಟ್ಸ್ ನ ಗೌರವ ಪ್ರದಾನ ಕಾರ್ಯದರ್ಶಿ ಸುಕೇಶ್ ವಿ ರೈ ಮತ್ತು ಸಂತೋಷ ಶೆಟ್ಟಿ ಬೋಯಿಸರ್ ನಿರೂಪಿಸಿದರು.
ಸಂಚಾಲಕರದ ನಾಗರಾಜ್ ಶೆಟ್ಟಿ ವಸಯಿ ಧನ್ಯವಾದ ಸಮರ್ಪಿಸಿದರು .
ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ನಂತರ ಸಂಸ್ಥೆಯ ಸದಸ್ಯರಿಂದ ಮತ್ತು ಸಂಸ್ಥೆಯ ಸದಸ್ಯರ ಮಕ್ಕಳಿಂದ ವಿವಿಧ ರೀತಿಯ ಸಂಸ್ಕೃತಿಕ ಕಾರ್ಯಕ್ರಮವು ಸೇರಿdda ಜನರನ್ನು ಮನರಂಜಿಸಿದರು. ಕಾರ್ಯಕ್ರಮದ ಕೊನೆಗೆ ತುಳುನಾಡ ಶೈಲಿಯ ರುಚಿಯಾದ ಭೋಜನ ಸವಿದರು.

ಸಂಪ್ರದಾಯ ಆಚರಣೆಗಳು ಉಳಿವಂಥಹ ಕಾರ್ಯಕ್ರಮ ಅಗತ್ಯ: ಪ್ರಕಾಶ್ ಎಂ ಹೆಗ್ಡೆ

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಇವರು ಮಾತನಾಡುತ್ತ ಇಂಥ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಒಟ್ಟಾಗಿ ನಮ್ಮ ಸಂಸ್ಥೆಯ ಜೊತೆ ಸೇರಿ ನಮ್ಮ ಆಚಾರ ವಿಚಾರ ಯುವ ಪೀಳಿಗೆಗೆ ತಿಳಿಸಿದಂತಾಗುತ್ತದೆ . ಗ್ರಾಮೀಣ ಪ್ರದೇಶದ ಬಂಟರ ಪ್ರತಿಭೆಗಳು ಅನಾವರಣಗೊಳ್ಳಲು ಈ ಕಾರ್ಯಕ್ರಮಗಳು ಹಿರಿಯರ ಸಂಪ್ರದಾಯ ಆಚರಣೆಗಳು ಜೀವಂತ ಉಳಿವಲ್ಲಿ ನಮ್ಮ ಕಾರ್ಯ ನಿರಂತರ ನಡೆಯಬೇಕು ಎಂದು ನುಡಿದರು.

Related posts

ಸಾಂತಾಕ್ರೂಜ್   ಶ್ರೀ ಪೇಜಾವರ ಮಠದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರ ಪಂಚಮ ಸಮಾರಾಧನಾ ಮಹೋತ್ಸವ,

Mumbai News Desk

ಕರ್ನಾಟಕ ಸಂಘ ಕಲ್ಯಾಣ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಹರೀಶ್ ಜಿ ಅಮೀನ್ ಆಯ್ಕೆ

Mumbai News Desk

ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವರಿಂದ  ವಿಶ್ವ ಪರ್ಯಾವರಣ ದಿನಾಚರಣೆ.

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ