September 6, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ – 47 ನೇ ವಾರ್ಷಿಕ ಮಹಾ ಸಭೆ





ಮುಂಬ್ರಾ ಮಿತ್ರ ಭಜನಾ ಮಂಡಳಿಯ 47 ನೇ ವಾರ್ಷಿಕ ಮಹಾಸಭೆಯು 18 ಆಗಸ್ಟ್ ರಂದು ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಡೊಂಬಿವಿಲಿ ಪೂರ್ವದ ಯಶವಂತ್ ನಗರದ ರಾಮಚಂದ್ರ ನಿವಾಸ್ ದಲ್ಲಿರುವ ಮಂದಿರದ ಸಭಾಗ್ರಹದಲ್ಲಿ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಜರಗಿತು ದೇವತಾ ಪ್ರಾರ್ಥನೆಯೊಂದಿಗೆ ಜರಗಿತು ಹಾಗೂ ಗತ ವರ್ಷದಲ್ಲಿ ನಿಧನರಾದ ಸದಸ್ಯರುಗಳಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮಹಾಸಭೆಯಲ್ಲಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ರವರು ಸ್ವಾಗತಿಸಿ ಮತ್ತು ಗತ ವರ್ಷದ ವರದಿ ಹಾಗೂ ಗತ ವರ್ಷದ ಮಹಾಸಭೆಯ ಟಿಪ್ಪಣಿಯನ್ನು ಓದಿ ಮಂಜೂರು ಮಾಡಲಾಯಿತು . ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಆಯಾ ವ್ಯಯ ಪಟ್ಟಿ ಮಂಡಿಸಿದರು.

ಸಭೆಯಲ್ಲಿ ನವೆಂಬರ್ ತಿಂಗಳಲ್ಲಿ ಏಕಾಹ ಭಜನೆ ಹಾಗು ಡಿಸೆಂಬರ್ ತಿಂಗಳಲ್ಲಿ ಕಾರ್ತೀಕ ದೀಪೋತ್ಸವ ಹಾಗು ರಕ್ತ ದಾನ ಶಿಬಿರ ಕೈಗೊಳ್ಳುವುದಾಗಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು ಮಂದಿರ ದ ಸುವರ್ಣ ಮಹೋತ್ಸವದ ಬಗ್ಗೆ ಪೂರ್ವ ತಯಾರಿ ಹಾಗು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮುಂಬರುವ ಸುವರ್ಣ ಮಹೋತ್ಸವಕ್ಕೆ ದೇವರಿಗೆ ಏಕ ಶಿಲಾ ಪಾಣಿ ಪೀಠ ಮತ್ತು ದೇವರ ಬಿಂಬಕ್ಕೆ ಪ್ರಭಾವಳಿಯ ಅವಶ್ಯಕತೆ ಇದ್ದು ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಗೌರವ ಅಧ್ಯಕ್ಷರಾದ ನಿತಿನ್ ಪ್ರಕಾಶ್ ಪುತ್ರನ್ ರವರು ಮಾತಾಡುತ್ತ ನಾವೆಲ್ಲರೂ ಸೇರಿ ಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು.

ಮಂದಿರದ ವತಿಯಿಂದ ಜರಗುವ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ ಕಾರ್ಯಕ್ರಮಗಳಿಗೆ ತನು-ಮನ-ಧನ ದ ಸಹಾಯವನ್ನು ನೀಡುತಾ ಬಂದಿರುವ ದಾನಿಗಳಿಗೆ , ಸದಸ್ಯರುಗಳಿಗೆ ಕೃತಜ್ಞತೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ಹೊಸದಾಗಿ ಮಂದಿರದ ಸದಸ್ಯತನವನ್ನು ಪಡೆದ ಎಲ್ಲ ಸದಸ್ಯರನ್ನು ಅಭಿನಂದಿಸಲಾಯಿತು .

ಮಂದಿರದ ಕಾರ್ಯಕಲಾಪದ ಬಗ್ಗೆ ಸದಸ್ಯರ ಪರವಾಗಿ ಸುರೇಶ್ ನಾಯ್ಕ್ , ಲತೇಶ್ ಸಾಲಿಯಾನ್ , ಹರೀಶ್ ಪದ್ಮಶಾಲಿ , ಪ್ರಶಾಂತ್ ಪೂಜಾರಿ, ಸವಿತಾ ಸಾಲಿಯಾನ್ , ಸ್ನೇಹ ಪೆವೇಕರ್ , ನಯನ ಕಾಂಚನ್ ಸಲಹೆ ನೀಡಿ ಸಹಕರಿಸಿದರು. ನಂತರ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಪೂಜಾರಿ ರವರು ಸರ್ವರನ್ನು ವಂದಿಸಿದರು.



Related posts

ಬಹುಮುಖ ಪ್ರತಿಭೆ ಕು. ಪ್ರಿಷಾ ಜಿತೇಂದ್ರ ಕೋಟ್ಯಾನ್ ಅವರ ಭರತನಾಟ್ಯ ರಂಗಪ್ರವೇಶ

Mumbai News Desk

ಧರೆಗಿಳಿದ ಮಳೆಹನಿ, ಮಿನುಗಿದ ಮುಂಬೈ: ಪ್ರಕೃತಿಯ ವಿಶೇಷ ಸಿರಿಯಲ್ಲಿ 2026ರ ಉದಯ

Mumbai News Desk

ಥಾಣೆಯಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ

Mumbai News Desk

ಎಸ್.ಎಸ್.ಸಿ ಪರೀಕ್ಷೆಯಲ್ಲಿ ಸಾನ್ವಿ ಸುರೇಶ್ ಪೂಜಾರಿಗೆ ಶೇ.91.60 ಅಂಕ.

Mumbai News Desk

ತುಳು ಸಂಘ ಬೊರಿವಲಿ ; ವಾರ್ಷಿಕ ವಿಹಾರ ಕೂಟ

Mumbai News Desk

ಶ್ರೀ ರಜಕ ಸಂಘ, ಡೊಂಬಿವಿಲಿ ಪ್ರಾದೇಶಿಕ ವಲಯದ ವತಿಯಿಂದ ಶ್ರೀ ಗುರು ಪೂಜಾ ಕಾರ್ಯಕ್ರಮ ಯಶಸ್ವಿ

Mumbai News Desk