31 C
Karnataka
April 3, 2025
ಮುಂಬಯಿ

ಹೊಸಬೆಟ್ಟು ಮೊಗವೀರ ಸಂಘ ಮುಂಬಯಿ,ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ಕೂಟ



ಹೊಸಬೆಟ್ಟು ಮೊಗವೀರ ಸಂಘ ಮುಂಬೈ ಇದರ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ಕೂಟ ಕಾರ್ಯಕ್ರಮವು ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೊಗವೀರ ಭವನ ಸಭಾಗ್ರಹದಲ್ಲಿ ಆಗಸ್ಟ್ 11ರಂದು ಜರಗಿತು.
ಸಂಘದ ಸದಸ್ಯೆ ರೇಣುಕಾ ಸುದೀರ್ ಅವರು ಅತಿಥಿಗಳನ್ನ ಸ್ವಾಗತಿಸಿದರು. ಬಳಿಕ ದೀಪ ಪ್ರಜ್ವಲನೆಯನ್ನು ಸಂಘದ ಅಧ್ಯಕ್ಷರಾದ ಉಮೇಶ್ ಹೊಸಬೆಟ್ಟು, ಮುಖ್ಯ ಅತಿಥಿ ಸವಿತಾ ಚಂದ್ರಶೇಖರ್ ಸಾಲಿಯನ್, ಗುರಿಕಾರರಾದ ಜನಾರ್ಧನ ಗುರಿಕಾರ, ಮಹಿಳಾ ಸಂಘದ ಅಧ್ಯಕ್ಷರಾದ ರೋಹಿಣಿ ಸಾಲ್ಯಾನ್, ಕಾರ್ಯದರ್ಶಿ ಸುಲಭ ಕರ್ಕೇರ, ಕೋಶಾಧಿಕಾರಿ ಅನಿತಾ ಪುತ್ರನ್ ಹಾಗೂ ಸಂಘದ ಕಾರ್ಯದರ್ಶಿ ಪ್ರತಾಪ್ ಕರ್ಕೇರರವರು ಮಾಡಿದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹೊಸಬೆಟ್ಟು ಅರುಣ್ ಕುಮಾರ್ ಅವರು ಊರಿನ ಪರಂಪರೆ, ಕಟ್ಟುಕಟ್ಟಲೆ, ನಮ್ಮೂರ ಶಾಲೆ, ನೇಶನಲ್ ಹೆಲ್ತ್ ಲೀಗ್,ವ್ಯಾಯಾಮ ಶಾಲೆ, ಅದರ ತಾಲೀಮ್ ಟೀಮ್, ಕುಸ್ತಿಯಲ್ಲಿ ತುಳು ಕೇಸರಿ ತುಳು ಕುಮಾರ್ ಮತ್ತಿತರ ಪ್ರಶಸ್ತಿಯ ಬಗ್ಗೆ, ಊರಿನ ಗಣ್ಯರು, ಸಮಾಜ ಸೇವೆ ಮಾಡಿ ಹೆಸರಾದವರನ್ನು ನೆನಪಿಸಿದರು. ಊರ ಲಕ್ಷ್ಮಿ ವೆಂಕಟೇಶ ಭಜನಾ ಮಂದಿರ, ಹನುಮಾನ್ ಮಂದಿರ, ದೈವಗಳು ಮತ್ತು ಅದರ ಕಾರ್ಣಿಕವನ್ನು ವಿಸ್ತಾರವಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸವಿತಾ ಚಂದ್ರಶೇಖರ್ ಸಾಲ್ಯಾನ್ ರವರು ತಮ್ಮ ಭಾಷಣದಲ್ಲಿ ಆಟಿ ತಿಂಗಳ ಆಚರಣೆ ಬಗ್ಗೆ, ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಜನರು ಪಡುತ್ತಿದ್ದ ಕಷ್ಟ, ಪರಶುರಾಮ ಸೃಷ್ಟಿಯಾದ ನಮ್ಮ ಕರಾವಳಿಯ ಇತಿಹಾಸ, ದಾಸ ಶ್ರೇಷ್ಠರ ಕುರಿತಾಗಿ, ಜಾನಪದ ಕಲೆಯ, ಸಂಸ್ಕೃತಿ, ದೈವರಾದನೆ ಮತ್ತು ಇಂದಿನ ಸಮಾಜದ ವಿದ್ಯಾಮಾನವನ್ನು ತಿಳಿಸಿದರು.
ಸಂಘದ ಅಧ್ಯಕ್ಷ ಉಮೇಶ್ ಹೊಸಬೆಟ್ಟು ಅವರು ಆಟಿ ತಿಂಗಳ ಬಗ್ಗೆ ಮಾಹಿತಿ ನೀಡಿ ಮಹಿಳಾ ವಿಭಾಗದ ಸದಸ್ಯರ ಕಾರ್ಯಕ್ಷಮತೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಜನಾರ್ಧನ್ ಗುರಿಕಾರರು ಸಭೆಯನ್ನು ಉದ್ದೇಶಿಸಿ ಹಿತವಚನ ನುಡಿದರೆ, ಪ್ರತಾಪ್ ಕರ್ಕೇರ ಸಂದರ್ಭೋಚಿತವಾಗಿ ಮಾತನಾಡಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರೋಹಿಣಿ ಕೋಟ್ಯಾನ್ ರವರು ಮಹಿಳಾ ವಿಭಾಗದ ಪ್ರಾರಂಭ ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಆಟಿ ಕಳಂಜ ನ್ರತ್ಯ ಎಲ್ಲರ ಮನಸುರೆಗೊಂಡರೆ ಜೊತೆಗೆ ಪಾರ್ದನದ ಇಂಪು ನಮ್ಮ ಹಿಂದಿನ ದಿನದ ಆಟಿ ತಿಂಗಳನ್ನು ನೆನಪಿಸುವಂತಿತ್ತು. ಮಹಿಳಾ ಸದಸ್ಯೆಯರಿಂದ ವಿವಿಧ ನೃತ್ಯ ಸಾದಾರಗೊಂಡಿತು.
ಈ ಸಂದರ್ಭದಲ್ಲಿ ಹೊಸಬೆಟ್ಟು ಮೋಗವೀರ ಸಂಘ ಮುಂಬಯಿಯ ಹಿರಿಯ ಸದಸ್ಯರಾದ ದಾಮೋದರ್ ಅಮೀನ್ ರವರನ್ನು ಅವರು ಸಂಘಕ್ಕೆ ನೀಡಿದ ಸೇವೆಗಾಗಿ ಆಧಾರ ಪೂರಕವಾಗಿ ಸನ್ಮಾನಿಸಲಾಯಿತು.
ಬಳಿಕ ಸಂಘದ ಮಹಿಳೆಯರು ಬಹಳ ಮುತುವರ್ಜಿಯಿಂದ ತಯಾರಿಸಿದ ವಿವಿಧ ಭಕ್ಷ, ಆಹಾರ, ತಿನಿಸುಗಳನ್ನು ಎಲ್ಲರೂ ಪ್ರೀತಿಯಿಂದ ಸವಿದರು.
ರೇಣುಕಾ ಸುಧೀರ್ ರವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು 150ಕ್ಕಿಂತ ಹೆಚ್ಚು ಸದಸ್ಯರು ಮತ್ತು ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೊನೆಗೆ ಕಾರ್ಯದರ್ಶಿ ಸುಲಭ ಕರ್ಕೆರ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

.

Related posts

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ, 59ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ

Mumbai News Desk

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk