ಕಂಬದಕೋಣೆ,ಕಾಲ್ತೊಡು : ದಿನಾಂಕ 23 ಆಗಸ್ಟ್ 2024 ರ ಶುಕ್ರವಾರ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಕಾಲ್ತೋಡು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಡಾಕ್ ಸೇವಾ; ಜನ್ ಸೇವಾ-ಅಂಚೆ ಜನ ಸಂಪರ್ಕ ಅಭಿಯಾನವನ್ನು ಕಾಲ್ತೊಡು ಅಂಬೇಡ್ಕರ್-ಭವನದಲ್ಲಿ ಆಯೋಜಿಸಲಾಗಿತ್ತು. ಅಭಿಯಾನವನ್ನು ಜ್ಯೊತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಪಂಚಾಯತ್ ಅಧ್ಯಕ್ಷ ಅಣ್ಣಪ್ಫ ಶೆಟ್ಟಿ ಬಟ್ನಾಡಿ ಇಂತಹ ಕುಗ್ರಾಮದಲ್ಲೂ ಕೂಡ ಅಂಚೆ ಅಭಿಯಾನವನ್ನು ಆಯೋಜಿಸಿದಕ್ಕಾಗಿ ಅಂಚೆ ಇಲಾಖೆಯನ್ನು ಶ್ಲಾಘಿಸಿದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ವಿವಿಧ ಅಂಚೆ ಸೇವೆಗಳ ಮಾಹಿತಿ ನೀಡಿದರು. ಅಂಚೆ ಅಧೀಕ್ಷಕ ರಮೇಶ್ ಪ್ರಭು, ಮತ್ತೊರ್ವ ಸಹಾಯಕ ಅಂಚೆ ಅಧೀಕ್ಷಕರಾದ ದಯಾನಂದ ದೇವಾಡಿಗ, ಪಿ.ಡಿ.ಓ. ದಿವಾಕರ ಶಾನುಭೋಗ ಮತ್ತು ಹೇರೂರು ಪಂಚಾಯತ್ ಸದಸ್ಯ ಸೂಲಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಆನಂದ್ ಬಿಲ್ಲವ ಕಾರ್ಯಕ್ರಮವನ್ನು ನಿರ್ವಹಿಸಿದರು. ನೂರಾರು ಗ್ರಾಮಸ್ತರು ಆಧಾರ್ ಹೊಸ ನೊಂದಣಿ/ಪರಿಷ್ಕರಣೆ ಹಾಗು ವಿವಿಧ ಅಂಚೆ ಸೌಲಭ್ಯಗಳ ಮಾಹಿತಿಯ ಪ್ರಯೋಜನವನ್ನು ಪಡೆದರು.