July 23, 2026
Mumbai News Kannada
ಸುದ್ದಿ

ಉಡುಪಿ : ಮಂದಾರ್ತಿ ಮೇಳದ ಕಲಾವಿದ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನ







​ನವೆಂಬರ್ 19 ರ ಬುಧವಾರ ಮಧ್ಯರಾತ್ರಿ ಕುಂದಾಪುರದ ಬಳಿ ನಡೆದ ಮಂದಾರ್ತಿ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ, ಮಹಿಷಾಸುರನ ಪಾತ್ರ ನಿರ್ವಹಿಸಿ ಹೊರಬಂದ ಕಲಾವಿದರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
​ನಿಧನರಾದವರು ಶೃಂಗೇರಿ ಸಮೀಪದ ನೆಮ್ಮಾರ ನಿವಾಸಿ, ಎರಡನೇ ಮೇಳದ ಪ್ರತಿಭಾವಂತ ಕಲಾವಿದ ಈಶ್ವರ ಗೌಡ ನೆಮ್ಮಾರ.
​ಅವರು ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ತಮ್ಮ ಪ್ರದರ್ಶನ ಮುಗಿಸಿ, ಚೌಕಿ ಒಳಗೆ ಪೂರ್ಣ ವೇಷಭೂಷಣ ತೆಗೆಯುವ ಮುನ್ನವೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ತಕ್ಷಣವೇ ಸಹ ಕಲಾವಿದರು ನೆರವಿಗೆ ಧಾವಿಸಿದರೂ, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದರು.
​ಈಶ್ವರ ಗೌಡ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.



Related posts

ಮುಲ್ಕಿ : ಟೆಂಪೋ ಡಿಕ್ಕಿಯಾಗಿ ಉದ್ಯಮಿ ಲಿಂಗಪ್ಪ ಶೆಟ್ಟಿ ನಿಧನ

Mumbai News Desk

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಲಚ್ಚಿ ಪೂಜಾರಿ ನಿಧನ

Mumbai News Desk

ಮುಂಬೈಯ ಬಾಂದ್ರ ಟರ್ಮಿನಸ್ ನಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ

Mumbai News Desk

ಶ್ರೇಯಾ ವಿ. ಸಾಲಿಯಾನ್ ಸಿ.ಎ.ಉತ್ತೀರ್ಣ

Mumbai News Desk

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk