
ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಸಂಘ ಕಲ್ಯಾಣ ನ ವಾರ್ಷಿಕ ಕಾರ್ಯಕ್ರಮವಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಸ್ವಾತಂತ್ರ್ಯ ದಿನದಂದು ಆಚರಿಸುತ್ತಾ ಬಂದಿದ್ದು ಈ ವರ್ಷ 15 ಆಗಸ್ಟ್ ರಂದು ಮುರಬಾಡ್ ರೋಡಿನ ಬ್ರಾಹ್ಮಣ ಸೊಸೈಟಿ ಸಭಾಗ್ರಹದಲ್ಲಿ ಸಂಜೆ ಆಚರಿಸಲಾಯಿತು. ಪ್ರಾರಂಭದಲ್ಲಿ ಸದಸ್ಯರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದೇಶದ ಸೈನಿಕರ ದೇಶಪ್ರೇಮವನ್ನು ಸಾರುವ ಒಂದು ಕಿರು ನಾಟಕವನ್ನು ವಸಂತ ಚಂದ್ರಶೇಖರ ತಂಡದವರು ಎಲ್ಲರ ಮನಮುಟ್ಟುವಂತೆ ಪ್ರಸ್ತುತ ಪಡಿಸಿದರು.









ನಂತರ ಪೂರ್ವ ಅಧ್ಯಕ್ಷ ಗೋಪಾಲ ಹೆಗ್ಡೆ, ದರ್ಶನಾ ಸೋನ್ಕರ್, ಅಧ್ಯಕ್ಷ ರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ದೀಪ ಪ್ರಜ್ವಲನೆ ನಡೆಸಿದರು. ಸಂಘದ ಅಧ್ಯಕ್ಷ ಕೆ.ಎನ್.ಸತೀಶರು ಎಲ್ಲರನ್ನೂ ಸ್ವಾಗತಿಸುತ್ತ ದೇಶದ ನಾಗರಿಕರಾಗಿ ನಮ್ಮೆಲ್ಲರ ಕರ್ತವ್ಯದ ಬಗ್ಗೆ ಒತ್ತು ನೀಡಿದರು.ಇನ್ನೋರ್ವ ಪೂರ್ವ ಅಧ್ಯಕ್ಷ ಶ್ರೀ ಗೋಪಾಲ ಹೆಗ್ಡೆಯವರು ಸಭಿಕರನ್ನು ಉದ್ದೇಶಿಸಿ ಭಾರತೀಯರಾಗಿ ಹಿಂದುಗಳಾಗಿ ನಾನು ಜಾಗೃತರಾಬೇಕೆಂದು ತಿಳಿಸಿದರು.ಅಲ್ಲದೆ ಮತ್ತೋರ್ವ ಪೂರ್ವ ಅಧ್ಯಕ್ಷೆ ದರ್ಶನಾ ಸೊನ್ಕರರವರು ಸಂಘದ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾದ ವಿವರ ನೀಡಿದರು.ನಂತರ ಸಂಘದ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಇಂದಿನ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಸದಸ್ಯರ 25,40,50ರ ವಿವಾಹ ದಿನವನ್ನು ಹಾಗೂ 60,70,75 ಹಾಗೂ 80 ರ ಹುಟ್ಟು ಹಬ್ಬವನ್ನು ಕುಂಕುಮ ಆರತಿ ಹಾಗೂ ಕೇಕ್ ತುಂಡರಿಸುವುದರೊಂದಿಗೆ ಮನಮುಟ್ಟುವಂತೆ ಆಚರಿಸಲಾಯಿತು.ಇಂದಿನ ಕಾರ್ಯಕ್ರಮವನ್ನು ಸುಸೂತ್ರವಾಗಿ ಸಂಘದ ಮಹಿಳಾಧ್ಯಕ್ಷೆ ವೀಣಾಕಾಮತ್, ವಿಭಾ ದೇಶಮುಖ, ವೀಣಾನಾಯಕ್ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಸನ್ನ ಹೆಗ್ಡೆಯವರು ಸುಸೂತ್ರವಾಗಿ ನೆರವೇರಿಸಿ ಕೊಟ್ಟರು.ಕಾರ್ಯಕ್ರಮವು ಸಂಘದ ಉಪಾಧ್ಯಕ್ಷ ವಿಜಯಾ ಹುನ್ಸುವಾಡ್ಕರ್ ರವರ ವಂದನಾರ್ಪಣೆ ಹಾಗೂ ರಾಷ್ರಗೀತೆಯೊಂದಿಗೆ ಕೊನೆಗೊಂಡಿತು.