
ಡೊಂಬಿವಲಿ ಅ. 24: ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಅಜ್ದೆಗಾವ್, ಡೊಂಬಿವಲಿ ಪೂರ್ವ ಇದರ ವಾರ್ಷಿಕ ಮಹಾ ಸಭೆಯು ತಾರೀಕು 11/08/2024 ನೇ ಆದಿತ್ಯವಾರ ಅಧ್ಯಕ್ಷರಾದ ರವಿ ಎಂ. ಸುವರ್ಣರವರ ನೇತೃತ್ವದಲ್ಲಿ ಜರಗಿತು.
ಸಭೆಯ ಪ್ರಾರಂಭದಲ್ಲಿ ಪ್ರಧಾನ ಅರ್ಚಕರಾದ ಕಾನಂಗಿ ಪ್ರಕಾಶ್ ಭಟ್ ರವರು ದೇವರ ಪ್ರಾರ್ಥನೆಯೊಂದಿಗೆ ಶುಭಾರಂಭ ಮಾಡಿದರು. ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಪ್ರಾಸ್ತವಿಕ ಭಾಷಣ ಮಾಡಿದರು.
ಗತ ವಾರ್ಷಿಕ ಲೆಕ್ಕ ಪರಿಶೋಧನೆಯ ನಂತರ 2024-27ರ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸೂರಜ್ ಡಿ ಸಪಲಿಗರನ್ನು ಸರ್ವಾನುಮತದಿಂದ ಆರಿಸಲಾಯಿತು, ತದ ನಂತರ ಗೌರವ ಅಧ್ಯಕ್ಷರಾಗಿ ರವಿ ಎಂ. ಸುವರ್ಣ, ಸಲಹೆಗಾರರಾಗಿ ಭಾಸ್ಕರ್ ಎಲ್. ಅಮೀನ್, ಪ್ರಧಾನ ಅರ್ಚಕರಾಗಿ ಕಾನಂಗಿ ಪ್ರಕಾಶ್ ಭಟ್, ಉಪಾಧ್ಯಕ್ಷರಾಗಿ ಸಂಜೀವ ಪಿ. ಪಾಲನ್, ಕಾರ್ಯದರ್ಶಿಯಾಗಿ ಸಂತೋಷ್ ಜಿ. ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಎಸ್. ಸಾಲಿಯಾನ್, ಕೋಶಾಧಿಕಾರಿಯಾಗಿ ಜೈಕೀಶ್ ಆರ್. ಸನಿಲ್, ಜೊತೆ ಕೋಶಾಧಿಕಾರಿಯಾಗಿ ರಕ್ಷನ್ ಸಾಲಿಯಾನ್, ಸಹ ಅರ್ಚಕರಾಗಿ ಪ್ರವೀಣ್ ಪೂಜಾರಿ ಇವರನ್ನು ನೇಮಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಂಜಿತ್ ಕೆ ಶೆಟ್ಟಿ, ಮೋಹನ್ ಪಿ ಸಾಲಿಯನ್, ರತನ್ ಪೂಜಾರಿ, ವಿಶ್ವನಾಥ್ ಜಿ ಸಾಲಿಯನ್, ಜಯಂತ ಬಿ ಪೂಜಾರಿ, ಸತೀಶ್ ಜಿ ಪೂಜಾರಿ, ಸಚಿನ್ ಪೂಜಾರಿ ( ಪಲಿಮಾರ್ ), ಸಾಗರ್ ವೈ ಪೂಜಾರಿ, ಕಿಶೋರ್ ಬಂಗೇರ, ಧಿರೇಶ್ ವಿ ಸಾಲಿಯನ್, ದಿನೇಶ್ ಎಸ್ ಬಂಗೇರ, ಹರೀಶ್ ಎಸ್ ಸಪಲಿಗ, ರಾಘು ಎಸ್ ಶೆಟ್ಟಿ ಇವರನ್ನು ನೇಮಿಸಲಾಯಿತು.
ಸಭೆಯನ್ನು ಉದ್ದೇಶಿಷಿ ಭಾಸ್ಕರ್ ಅಮೀನ್, ಸಂಜೀವ ಪಾಲನ್, ಸಂತೋಷ್ ಪೂಜಾರಿ, ರಕ್ಷನ್ ಸಾಲಿಯಾನ್, ಪ್ರದೀಪ್ ಸಾಲಿಯನ್ ಮಾತನಾಡಿದರು, ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ರವರು ಆಶೀರ್ವಾದ ವಚನ ಮಾಡಿದರು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರಜ್ ಸಪಲಿಗರವರು ತನ್ನ ಭಾಷಣದಲ್ಲಿ ಮಂದಿರದ ಏಳಿಗೆ ಹಾಗೂ ಶಿಸ್ತು ಬದ್ಧವಾದ ವಿಚಾರಗಳನ್ನು ಮಂಡಿಸಿದರು, ನೂತನ ಕಾರ್ಯದರ್ಶಿಗಳು ಸಭೆಯಲ್ಲಿ ನೆರೆದ ಎಲ್ಲರಿಗೂ ಧನ್ಯವಾದಗೈದು ಸಭೆಯನ್ನು ಮುಕ್ತಾಯಗೊಳಿಸಿದರು