April 2, 2025
ಪ್ರಕಟಣೆ

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,

ಕುಲಾಲ ಸಂಘ ಮುಂಬಯಿ ಇದರ ವತಿಯಿಂದ ಗಣೇಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆ.7 ಮತ್ತು 8 ರಂದು ನಡೆಯಲಿದೆ.
ದಾಣೆ ಪಶ್ಚಿಮ ಗೋಡ್ ಬಂದರು, ಹೋಟೇಲು ಕೋರ್ಟ್ ಯಾರ್ಡ್ ಸಮೀಪ, ಶುಭಂ ಹೌಸಿಂಗ್ ಕಾಂಪ್ಲೆಕ್ಸ್ ಇದರ ಮುಂದುಗಡೆ, ಕಸರವಾಡವಲಿ ಇಲ್ಲಿರುವ ಕುಲಾಲ ಸಂಘದ ನಿವೇಷನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಎರಡು ದಿನಗಳ ಗಣೇಶೋತ್ಸವವು ಸಂಭ್ರಮದಿಂದ ನಡೆಯಲಿದೆ.

ಸೆ.7 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ ಮತ್ತು ಮತ್ತು ಪ್ರಾಣ ಪ್ರತಿಷ್ಠ ಪೂಜಾ, ಮಧ್ಯಾಹ್ನ 3ರಿಂದ ಭಜನಾ ಸಂಕೀರ್ತನ, ಸಂಜೆ 4 ಕ್ಕೆ ಸಂಘದ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಂಜೆ 6ಕ್ಕೆ ಮಹಾಮಂಗಳಾರತಿ, ರಾತ್ರಿ 8 ರಿಂದ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ.

ಸೆ. 8 ರಂದು ಬೆಳಿಗ್ಗೆ 8 ಕ್ಕೆ ಆರತಿ, ಮಧ್ಯಾಹ್ನ 2ರಿಂದ ಮಹಾ ಆರತಿ ಮತ್ತು ವಿಸರ್ಜನೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಆಗಮಿಸಿ ಸಹಕರಿಸಬೇಕಾಗಿ ಕುಲಾಲ ಸಂಘಯ ಅಧ್ಯಕ್ಷರಾದ ರಘು ಎ ಮೂಲ್ಯ, ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಉಪಧ್ಯಕ್ಷ ಡಿ ಐ ಮೂಲ್ಯ ಪ್ರಧಾನ ಕಾರ್ಯದರ್ಶಿ ಕರುಣಾಕ‌ರ್ ಸಾಲಿಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಮಮತಾ ಎಸ್ ಗುಜರಾನ್ ಹಾಗೂ ಕಾರ್ಯಕಾರಿ ಸಮಿತಿ, ಗುರು ವಂದನ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ವಿನಂತಿಸಿದ್ದಾರೆ.

Related posts

ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿ ಘಾಟ್ಕೊಪರ್ ಪಶ್ಚಿಮ : ಜ. 4ಕ್ಕೆ 45ನೇ ವಾರ್ಷಿಕ ಮಹಾಪೂಜಾ ಉತ್ಸವ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, ಡಿ. 1ರಂದು 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ,

Mumbai News Desk

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ ಇಲ್ಲಿ ನವೆಂಬರ್ 13 ರಂದುತುಳಸೀ ಪೂಜೆ ಹಾಗೂ ಕಾರ್ತಿಕ ದೀಪೋತ್ಸವ

Mumbai News Desk

ದೊಡ್ಡಣ್ಣ ಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ಮೇ 2 :: ಶ್ರೀ ಕುಬೇರ ಲಕ್ಷ್ಮಿ ಪ್ರತಿಷ್ಠಾವರ್ಧಂತಿ 

Mumbai News Desk