ವಿಜಯ ಕಾಲೇಜು ಮುಲ್ಕಿ ,ವಿಶ್ವ ಹಳೇವಿದ್ಯಾರ್ಥಿಗಳ ಸಂಘ,ಮುಂಬಯಿ ಇದರ 3 ನೆಯ ವಾರ್ಷಿಕ ಸದಸ್ಯರ ಕೂಡುವಿಕೆ ಬೋರಿವಲಿ ಪಶ್ಚಿಮದ ಮೆಜೆಸ್ಟಿಕ್ ನೆಕ್ಸ್ಟ್ ಹೋಟೆಲ್ ಇದರ ಹಾಲ್ ನಲ್ಲಿ ಆ 31 ರಂದು,ಸಂಘದ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಅವರು ವಾರ್ಷಿಕ ವರದಿ ಮಂಡಿಸಿದರು.
ಖಜಾಂಜಿ CA ರೋಹಿತಾಕ್ಷ ದೇವಾಡಿಗ ಲೆಕ್ಕ ಪತ್ರ ಮಂಡಿಸಿದರು.
ಉಪಾಧ್ಯಕ್ಷ ನ್ಯಾಯವಾದಿ ಶೇಖರ್ ಭಂಡಾರಿ ಅವರು ಸಂಘದ ಮುಂದಿನ ವಿವಿಧ ಉದ್ದೇಶಗಳನ್ನು ಸಭಿಕರ ಮುಂದೆ ಇಟ್ಟರು.
ಅಧ್ಯಕ್ಷ ವಾಸುದೇವ ಸಾಲ್ಯಾನ್ ಅವರು ಮಾತನಾಡಿ ಹಳೇವಿದ್ಯಾರ್ಥಿ ಸಂಘ ವಿಜಯ ಕಾಲೇಜಿನ ಉನ್ನತಿಗೆ ಕೆಲಸ ಮಾಡುತ್ತಾ ಇದೆ. ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಅನುದಾನ ಮಾಡುವ 4 ಲಕ್ಷ ದೇಣಿಗೆ ಯನ್ನು ಈ ವರ್ಷವೂ ಕೊಟ್ಟಿದೆ. ಮುಂಬಯಿ ಮತ್ತು ಪರದೇಶದಲ್ಲಿ ನೆಲೆಸಿರುವ ಹಳೇವಿದ್ಯಾರ್ಥಿಗಳು ಉದಾರ ಮನಸ್ಸಿನವರು.ಅವರ ಸಹಕಾರದಿಂದ ಹಳೇವಿದ್ಯಾರ್ಥಿ ಸಂಘ ಉತ್ತಮ ಕೆಲಸ ಮಾಡುತ್ತಾ ಇದೆ ಎಂದರು.
ಸಭೆ ಯಲ್ಲಿ ಹಳೇವಿದ್ಯಾರ್ಥಿಗಳಾದ , ಕೆ ಏನ್ ಸುವರ್ಣ ,ಭಾಸ್ಕರ್ ಯಂ ಸಾಲಿಯಾನ್,ಪ್ರಸಾದ್ ಭಂಡಾರಿ, CA ಸೋಮನಾಥ್ ಕುಂದರ್, CA ಕಿಶೋರ್ ಸುವರ್ಣ, ದಿನೇಶ್ ಸಿ ಸಾಲಿಯಾನ್ ಮಾತನಾಡಿ ಅವರ ಅನಿಸಿಕೆಯನ್ನು ತಿಳಿಸುದರು.
ಹಳೇವಿದ್ಯಾರ್ಥಿಗಳಾದ ಕಾಶಿಮಿರಾ ಭಾಸ್ಕರ್ ಶೆಟ್ಟಿ,
ಕಿಶೋರ್ ಕುತ್ಯಾರ್, ರಂಜನ್ ಶೆಟ್ಟಿ, ಮೋಹನ್ ಶೆಟ್ಟಿ, ನವೀನಚಂದ್ರ ಬಂಗೇರ, ಅಶೋಕ್ ಕೊಲ್ನಾಡ್, ರಿಟಾ ದೇಸ್ಸಾ ,ಸರಿತಾ ರಾವ್, ಸ್ವರ್ಣಜ್ಯೋತಿ ಶೆಟ್ಟಿ , ಉಷಾ ಶೇಖರ್, ಶಂಕರ್ ಸುವರ್ಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.