
ಚಿತ್ರ, ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಸೆ. 11:ಸಂತಾಕ್ರೂಸ್ ಪೂರ್ವದ ಕಲೀನಾ ಪೋಲಿಸ್ ಚೌಕಿ ಎದುರುಗಡೆ ಇರುವ ಸೌತ್ ಸೇವಾ ಸಂಘದ ವತಿಯಿಂದ 13ನೇ ವರ್ಷದ ಐದು ದಿನಗಳ ಸಾರ್ವಜನಿಕ ಗಣೇಶೋತ್ಸವ ಸಮಾರಂಭವು ಆರಂಭಗೊಂಡಿದ್ದು 4ನೇ ದಿವಸ ಸೆ. 10ರಂದು ರಘುಚಂದ್ರ ಆಚಾರ್ಯ ಪೊವಾಯಿ ಅವರ ಪೌರಹೋತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಗಣೇಶ ಪೂಜೆ ನಡೆಯಿತು. ಸಂಘದ ಉಪಾದ್ಯಕ್ಷ ಗಣೇಶ್ ಶೆಟ್ಟಿ ಉಳೆಪಾಡಿ ದಂಪತಿಗಳು ಪೂಜಾ ಕೖಂಕಾರ್ಯದಲ್ಲಿ ಉಪಸ್ಥಿತರಿದ್ದರು.ತದನಂತರ ಧಾರ್ಮಿಕ ಸಭೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಧಾರ್ಮಿಕ ಸಭೆಯಲ್ಲಿ ಕನ್ನಡ ಜಾನಪದ ಪರಿಷತ್, ಮಹಾರಾಷ್ಟ್ರ ಘಟಕದ ಅದ್ಯಕ್ಷ ಹಾಗೂ ರಾಷ್ಟ್ರೀಯ ಕಿಸಾನ್ ಕಾಂಗ್ರೆಸಿನ ಸಂಯೋಜಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸಂಘದ ಅದ್ಯಕ್ಷ ಸುಂದರ ಶೆಟ್ಟಿ ವಾಮದಪದವು ಹಾಗೂ ಪದಾಧಿಕಾರಿಗಳು ಸತ್ಕರಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಬಾಬು ಬೆಲ್ಚಡ ನಿರೂಪಿಸಿದರು.
ಸಂಘದ ಗೌರವಾದ್ಯಕ್ಷ ಚಿತ್ರೇಶ್ ಶೆಟ್ಟಿ ಪಾಂಗಾಳ, ಉಪಾದ್ಯಕ್ಷ ಮಂಜುನಾಥ್ ಆರ್. ಶೆಟ್ಟಿ , ಕಾರ್ಯದರ್ಶಿ ಸಂದೀಪ್ ಬಂಗೇರ ನಕ್ರೆ, ಜತೆ ಕಾರ್ಯದರ್ಶಿಗಳಾದ ಗಣೇಶ್ ಸುವರ್ಣ, ಶೇಖರ್ ಆರ್. ಸಾಲ್ಯಾನ್, ಕೋಶಾಧಿಕಾರಿ ಚಂದ್ರಹಾಸ್ ಕೋಟ್ಯಾನ್, ಜತೆ ಕೋಶಾಧಿಕಾರಿಗಳಾದ ಮಂಗೇಶ್ ನಾಯಕ್, ಅವಿನಾಶ್ ಅಮೀನ್, ಹಾಗೂ ಸಲಹೆಗಾರರು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
.
.
.
.