
ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್
ಡಹಾಣೂ : ತಾ.09.09.2024. ಕಳೆದ ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಡಹಾಣೂವಿನ ಪ್ರತಿಷ್ಟಿತ ರಾಜಾಪುರ ಸಾರಸ್ವತ ಸಮಾಜ ಸೇವಾ ಮಂಡಳದ 26ನೆಯ ವರ್ಷದ ಮಂಗಲಮೂರ್ತಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿ ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳನ್ನು ವೈದಿಕ ಶ್ರೀ ವಸಂತ್ ಭಟ್ ಜರಗಿಸಿದರು. ಸಂಪೂರ್ಣ ವ್ಯವಸ್ಥಾಪನೆಯಲ್ಲಿ ಯುವವೃಂದದ ಸದಸ್ಯರು ಸಹಕರಿಸಿದರು.
ಪ್ಲಾಸ್ಟಿಕ್ ಮುಕ್ತ ಆಚರಣೆಗೆ ಮಹತ್ವ ನೀಡಿದ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಂಗಳೂರು ಮಲ್ಲಿಗೆಯೂ ಸೇರಿದಂತೆ ವೈವಿಧ್ಯಮಯ ಹೂಗಳ ಅಲಂಕಾರ ಮತ್ತು ಮಂಗಲಮೂರ್ತಿಯ ಶೋಭಾಯಾತ್ರೆಯಲ್ಲಿ ಗೋಮಾಂತಕದ ಮೂಲ ಮಠದ ಮಾದರಿಯಲ್ಲಿನ ವಿಶೇಷ ಪಲ್ಲಕ್ಕಿಯು ರಾಜಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದ ನಗರವಾಸಿಗಳ ಗಮನ ಸೆಳೆಯಿತು.
ಸ್ಥಳೀಯ ಭಕ್ತಾದಿಗಳು ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳೂ ಸೇರಿದಂತೆ ತುಳುವ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶೋಭಾಯಾತ್ರೆಯ ಬಳಿಕ ಡಹಾಣೂ ಉತ್ತರದಲ್ಲಿನ ಕಂಕ್ರಾಡಿ ನದಿಯಲ್ಲಿ ಶ್ರೀಗಣೇಶ ಮೂರ್ತಿಯ ಜಲಸ್ಥಂಭನ ಕಾರ್ಯಕ್ರಮ ಜರಗಿತು.
ಡಹಾಣೂ ವಲಯದ ಜಾಹೀರಾತಿಗಾಗಿ ಸಂಪರ್ಕಿಸಿ : ಪಿ.ಆರ್.ರವಿಶಂಕರ್ 8483980035