April 2, 2025
ಮುಂಬಯಿ

ಬೋರಿವಲಿ ಐ.ಸಿ. ಕಾಲೋನಿ ಮಂಡಳಿಯ 33ನೇ ಗಣೇಶೋತ್ಸವ ಭಕ್ತಿ ಸಂಭ್ರಮದೊಂದಿಗೆ ಆಚರಣೆ


ಚಿತ್ರ,ವರದಿ : ದಿನೇಶ್ ಕುಲಾಲ್


ಮುಂಬಯಿ ಸೆ13. ಬೋರಿವಲಿ ಪಶ್ಚಿಮದ ಐಸಿ ಕೊಲೋನಿಯ ತುಳು ಕನ್ನಡಿಗರೊಂದಿಗೆ ಗಣೇಶ ಭಕ್ತರು 1992 ರಲ್ಲಿ ಸ್ಥಾಪಿಸಿರುವ ಐಸಿ ಕೊಲೋನಿ ಗಣೇಶೋತ್ಸವ ಮಂಡಲಿಯ ಗಣೇಶ ಉತ್ಸವ ಸೆಪ್ಟೆಂಬರ್ 7 ರಿಂದ 11 ವರಗೆ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.ಐಸಿ ಕೊಲೋನಿಯ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ 33 ನೇ ವಾರ್ಷಿಕೋತ್ಸವದ ವೈಭವದ ಗಣೇಶ ಉತ್ಸವ ಸಪ್ಟಂಬರ್ 7ರಂದು ಗಣೇಶನ ಭವ್ಯ ಮೂರ್ತಿಯನ್ನು ಸ್ಥಾಪಿಸಿ, ಸೆಪ್ಟೆಂಬರ್ 11ರವರೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆ, ಹಳದಿ ಕುಂಕುಮ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. .ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಗಣೇಶನ ದರ್ಶನವನ್ನು ಪಡೆದರು. ನಗರದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಧಾರ್ಮಿಕ ಸೇವಾಕರ್ತರು ಮಂಡಳಿಯ ಮಹಾಪ್ರಸಾದವನ್ನು, ಗೌರವವನ್ನು ಸ್ವೀಕರಿಸಿದರು. ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ. ಮತ್ತು ನಿರ್ದೇಶಕ ಮಂಡಳಿ, ದೇವರ ದರ್ಶನವನ್ನು ಪಡೆದು ಗೌರವವನ್ನು ಸ್ವೀಕರಿಸಿದರು. ಪಾಲ್ಗೊಂಡ ಎಲ್ಲರನ್ನು ಐ.ಸಿ. ಕಾಲೋನಿ ಸರ್ವಜನಿಕ ಗಣೇಶೋತ್ಸವ ಮಂಡಲದ ಅಧ್ಯಕ್ಷರು ಹರೀಶ್ ಸುವರ್ಣ.ಉಪಾಧ್ಯಕ್ಷರುಗಳದ ರಾಜು ಪೂಜಾರಿ, ಸಿದ್ದು ಗಾಯಕವಾಡ, ರಾಜೇಂದ್ರ ಇಂದುಲ್ಕರ್, ಕಾರ್ಯದರ್ಶಿ, ಶಂಕರ ಪೂಜಾರಿ, ಕೋಶಾಧಿಕಾರಿ ಶ್ರೀಕಾಂತ್ ಹೆಜಮಾಡಿ. ಮಹಿಳಾ ಸದಸ್ಯರು ಯುವ ಸದಸ್ಯರು ಗೌರವಿಸಿದರು.

Related posts

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಕಾಂದಿವಿಲಿ ಕನ್ನಡ ಸಂಘ ದಹಾಣುಕರ್ ವಾಡಿ 29ನೇ ವಾರ್ಷಿಕ ಮಹಾಸಭೆ

Mumbai News Desk

ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ, ಬಹುಮಾನ ವಿತರಣೆ

Mumbai News Desk

ಸ್ಮಿತಾ ಬೆಳ್ಳೂರ್ ಯವರು  ಸಂಗೀತ  ಕಛೇರಿ ಮೂಲಕ ಸಂಗೀತಕಲಾ ರಸಿಕರನ್ನು ಮನಮೋಹಕಗೊಳಿಸಿದರು

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವ

Mumbai News Desk