
ಡೊಂಬಿವಲಿ ಪರಿಸರದಲ್ಲಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಮಾನ ಮನಸ್ಕರು ಒಂದಾಗಿ ಪ್ರಕಾಶ್ ರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನೂತನ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಈ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಕಂಕಣ ಭಾಗ್ಯ ಹಾಗೂ ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದು, ಪಥರ್ಲಿ ಶಿವ ಮಂದಿರದ ಎದುರು, ಓಂ ಶಿವದರ್ಶನ್ ಹೌಸಿಂಗ್ ಸೊಸ್ಕಾಟಿಯಲ್ಲಿ ಪ್ರಾರಂಭವಾದ ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆಯು ಸೆ. 15 ರ ರವಿವಾರರಂದು ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ ಡೊಂಬಿವಲಿಯ ಪ್ರಸಿದ್ಧ ಗಣೇಶ ಮಂದಿರ ದೇವಸ್ಥಾನದ ವಕ್ರತುಂಡ ಸಭಾಂಗಣ, 3ನೇ ಮಹಡಿ ಡೊಂಬಿವಿಲಿ ಪೂರ್ವ ಇಲ್ಲಿ ಜರಗಲಿದೆ.
ನಂತರ ಉದ್ಘಾಟನಾ ಕಾರ್ಯಕ್ರಮ ಮತ್ತು ಮಧ್ಯಾಹ್ನ 12:00 ರಿಂದ 1:00 ಘಂಟೆಯ ತನಕ ಸಭಾ ಕಾರ್ಯಕ್ರಮ ಜರಗಲಿದೆ.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಆರ್. ಶೆಟ್ಟಿ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಹೇಶ ಆರ್. ಕರ್ಕೇರ (ಗೌ, ಕಾರ್ಯದರ್ಶಿ ಎಸೋಸಿಯೇಶನ್ ಆಫ್ ಕೆಮಿಕಲ್ ವರ್ಕ್ಸ್) ಉಪಸ್ಥಿತರಿರುವರು. ಅತಿಥಿಗಳಾಗಿ
ಪ್ರಕಾಶ ಶೆಟ್ಟಿ (ಉದ್ಯಮಿ, ಬಿಲ್ಡರ್), ಪ್ರಭಾಕರ ಆರ್. ಶೆಟ್ಟಿ (ಹೋಟೆಲ್ ಉದ್ಯಮಿ), ಆರ್. ಎಂ. ಭಂಡಾರಿ (ನ್ಯಾಯವಾದಿ), ಸಚಿನ್ ಕೆ. ಶೆಟ್ಟಿ (ಹೋಟೆಲ್ ಉದ್ಯಮಿ), ಇಂ. ಸತೀಶ್ ಆಲಗೂರ (ಅಧ್ಯಕ್ಷ : ಮಹಾನಗರ ಕನ್ನಡ ಸಂಸ್ಥೆ (ರಿ.)), ಕಲ್ಯಾಣಿ ವಿಠಲ ಕಾರಬಾರಿ (ಉದ್ಯಮಿ) ಉಪಸ್ಥಿತರಿರುವರು.
ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್‌ನ ಉದ್ಘಾಟನಾ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂಅನ್ನ ಸಂತರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯ ತುಳು-ಕನ್ನಡಿಗರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಉಪಾಧ್ಯಕ್ಷರಾದ ವಿಕ್ರಾಂತ್ ಜಿ. ತಾಮಸೆ, ಮಂಜುನಾಥ ಎಂ. ಹೆಗ್ಗಡೆ, ಗಣೇಶ್ ಎಸ್. ಭಟ್, ಗೌ. ಕಾರ್ಯದರ್ಶಿ ವೆಂಕಟರಮಣ ಶೆಟ್ಟಿ, ಕೋಶಾಧಿಕಾರಿ ಚಂದ್ರಕಾಂತ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಕಾಶ್ ಜಿ. ಉಡುಪಿ, ಜೊತೆ ಕೋಶಾಧಿಕಾರಿ ವಿಶಾಲ್ ಪಿ. ಶೆಟ್ಟಿ, ಸಲಹೆಗಾರ ನಾಗೇಶ್ ಕುಮಟಾಕರ್, ಸಮಿತಿಯ ಸದಸ್ಯರಾದ ಕಲ್ಯಾಣಿ ವಿ. ಕಾರ್‌ಬಾರಿ, ಅಮಿತ್ ಪಾಲನ್ನರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ಎನ್. ಕೋಟ್ಯಾನ್, ಉಪಾಧ್ಯಕ್ಷೆ ಚಂದ್ರಾ ಪಿ. ಶೆಟ್ಟಿ, ಕಾರ್ಯದರ್ಶಿ ಶಶಿಕಲಾ ಬಿ. ಶೆಟ್ಟಿ, ಸಲಹೆಗಾರರಾದ ಮಂಜುಳಾ ಎಸ್. ಶೆಟ್ಟಿ, ಸಾಧನಾ ಮ್ಹಾತ್ರೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.
.