ಮಹಾನಗರದ ಹಿರಿಯ ಧಾರ್ಮಿಕ ಸಂಸ್ಥೆ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 80 ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ 28 ಸೆಪ್ಟೆಂಬರ್ 2024 ರಂದು ಶನಿ ಸಿಂಗನಾಪುರದಲ್ಲಿ ಶನಿ ಪೂಜೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರಗಳು:
1) 27/9/24ರಿಂದ 29/9/24 ಶನಿ ಸಿಂಗನಾಪುರಕ್ಕೆ ಯಾತ್ರೆ ( ಬಸ್ ಮೂಲಕ)
2)27/9 ರಾತ್ರಿ 8.30 ಕ್ಕೆ ಡೊಂಬಿವಲಿಯಲ್ಲಿ ಒಗ್ಗೂಡಿ, ರಾತ್ರಿ 9 ಕ್ಕೆ ಪ್ರಯಾಣ ಆರಂಭ.
3) ಸೆ. 28 ಬೆಳ್ಳಿಗೆ 7 ಗಂಟೆಗೆ ಶನಿಸಿಂಗನಾಪುರ ತಲಪುವುದು
4) ಎಲ್ಲರಿಗೂ ವಸತಿ ಮತ್ತು ಇತರ ಸೌಲಭ್ಯದ ವ್ಯವಸ್ಥೆ ಮಾಡಲಾಗುವುದು.
5) ಸೆ. 28.ರಾತ್ರಿ ರಾತ್ರಿ 10 ಗಂಟೆಗೆ ಪೂಜೆ ಮತ್ತು ದರ್ಶನದ ನಂತರ ಶನಿ ಸಿಂಗನಾಪುರದಿಂದ ಮುಂಬಯಿಗೆ ಹೊರಡಲಾಗುವುದು ಮತ್ತು ಮಾರನೇದಿನ ಬೆಳಿಗ್ಗೆ 6 ಗಂಟೆಗೆ ಮುಂಬಯಿಯನ್ನು ತಲುಪಲಾಗುವುದು.
6) ಪ್ರತಿಯೊಬ್ಬರಿಗೆ ತಗಲುವ ವೆಚ್ಚ ರೂಪಾಯಿ 1,000/- (10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅದೇ ದರವು ಅನ್ವಯಿಸುತ್ತದೆ.)
ಅತ್ಯಂತ ಪ್ರಮುಖ ಸೂಚನೆಗಳು
ದರ್ಶನದ ಸಮಯದಲ್ಲಿ ವಸ್ತ್ರನೀತಿ
-ಪುರುಷರಿಗೆ : ಬಿಳಿ ಲುಂಗಿ ಮತ್ತು ಶಾಲು.
-ಮಹಿಳೆಯರಿಗೆ: ಸೀರೆ ಮತ್ತು ರವಿಕೆ.
ನಮ್ಮದು ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಮತ್ತು ತೀರ್ಥಯಾತ್ರೆಯಾಗಿ ಪ್ರಯಾಣಿಸುವುದರಿಂದ ಎಲ್ಲರೂ ಶಿಸ್ತು ಮತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರತಿಷ್ಠೆಗನುಗುಣವಾಗಿ ನಡೆದುಕೊಳ್ಳುವಂತ್ತೆ ವಿನಂತಿ.
ಹೆಚ್ಚಿನ ಮಾಹಿತಿಗಾಗಿ :
ರಾಜೇಶ್ ಸುವರ್ಣ: 99305 12972
ವಿಶ್ವನಾಥ್ ಭಂಡಾರಿ: 98926 29022
ಇವರನ್ನು ಸಂಪರ್ಕಿಸಬಹುದು.