


ಗಣೇಶೋತ್ಸವ ಸಮಾಜ ಬಾಂಧವರ ಒಗ್ಗಟ್ಟಿನೊಂದಿಗೆ ಧರ್ಮ ಜಾಗೃತಿಯ ಕಾರ್ಯವಾಗಿದೆ: ರಘು ಮೂಲ್ಯ ಪಾದೆಬೆಟ್ಟು..
ಪ್ರತಿಷ್ಠಿತ ಜಾತಿಯ ಸಂಸ್ಥೆಗಳೊಂದಾದ ಕುಲಾಲ ಸಂಘ ಮುಂಬಯಿ ಇದರ ವತಿಯಿಂದ 7ನೇ ವರ್ಷದ ಗಣೇಶೋತ್ಸವ ಆಚರಣೆಯು ಸಪ್ಟೆಂಬರ್ 7ಮತ್ತು 8ರಂದು ಘೋಡ್ ಬಂದರ್ ರೋಡ್ ನ ಸಂಘದ ಸ್ವಂತ ಜಾಗದಲ್ಲಿ ಸಂಘದ ಅಧ್ಯಕ್ಷರಾದ ರಘು ಏ ಮೂಲ್ಯ ಪಾದೆಬೆಟ್ಟು ರವರ ನೇತೃತ್ವದಲ್ಲಿ,ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಹಾಗೂ ಉಪಾಧ್ಯಕ್ಷರಾದ ಡಿ ಐ ಮೂಲ್ಯ ಇವರ ಮುಂದಾಳತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಸುಮಾರು 95 ವರ್ಷದ ಇತಿಹಾಸ ಇರುವ ಕುಲಾಲ ಸಂಘ ಮುಂಬಯಿ ಸಮಾಜದ ಬಾಂದವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುತ್ತದೆ.ಕಳೆದ 8 ವರ್ಷಗಳಿಂದ ಸಂಘವು ಥಾಣೆ ಘೋಡ್ ಬಂದರಿನ ತನ್ನ ಸ್ವಂತ ಜಾಗದಲ್ಲಿ ಸಮಾಜ ಬಾಂಧವರನ್ನು ಒಟ್ಟು ಮಾಡಿ ಎಲ್ಲರೂ ಒಂದಾಗಬೇಕೆಂಬ ನಿಟ್ಟಿನಲ್ಲಿ ಪ್ರತೀ ವರ್ಷ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ.ಗಣೇಶೋತ್ಸವ ಸಮಾಜ ಬಾಂಧವರ ಒಗ್ಗಟ್ಟಿನೊಂದಿಗೆ ಧರ್ಮ ಜಾಗೃತಿಯ ಕಾರ್ಯವಾಗಿದೆ. ಸಮಾಜದ ಬಂಧುಗಳು ಸಂಘದ ಎಲ್ಲಾ ಸೇವಾ ಕಾರ್ಯಗಳಿಗೆ ದಾನ ರೂಪದ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ ಅದರಿಂದ ಸಂಘದ ಸಮಾಜಮುಖಿ ಸೇವಾಕಾರಿಗಳು ಯಶಸ್ವಿಯಾಗಿ ನಡೆಯುತ್ತದೆ ಎಂದು ನುಡಿದರು



ಪ್ರತಿವರ್ಷದಂತೆ ಈ ವರ್ಷವೂ ಗುರುವಂದನಾ ಭಜನಾ ಮಂಡಳಿಯ ಭಜನೋತ್ಸವ ಮಹಾ ಮಂಗಳಾರತಿ ,ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ಕಾರ್ಯಕ್ರಮ ಜರಗಿತು.
ಸಪ್ಟೆಂಬರ್ 7ರಂದು ಪೂಜೆ ಮತ್ತು ಗಣೇಶ ಮೂರ್ತಿಯ ಪ್ರತಿಷ್ಠಾಪನೆಯು ಕೃಷ್ಣ ಭಟ್ ಘೋಡ್ ಬಂದರ್, ಥಾಣೆ ಅವರ ಪೌರೋಹಿತ್ಯದಲ್ಲಿ ಗಣ ಹೋಮ ಮತ್ತು ಸ್ಥಳ ಶುದ್ಧಿ ಪೂಜೆ ನಡೆಯಿತ್ತು .
ಗುರುವಂದನಾ ಭಜನಾ ಮಂಡಳಿಯ ಅರ್ಚಕ ಶಂಕರ್ ವೈ ಮೂಲ್ಯ, ಮಹಾ ಮಂಗಳಾರತಿ ಮಹಾ ಮಂಗಳಾರತಿ ನಡೆಸಿದರು.ಅರ್ಚಕರಾದ ನಾರಾಯಣ ಹಾಂಡ ಸಹಕರಿಸಿದರು.ಗುರು ವಂದನ ಭಜನೆ ಮಂಡಳಿಯ ಕಾರ್ಯಧ್ಯಕ್ಷ ಸಯನ್ ಸುಂದರ್ ಏನ್ ಮೂಲ್ಯ ಇವರ ಮುತುವರ್ಜಿಯಲ್ಲಿ ಹಾಗೂ ವಾಶಿ ಪ್ರೇಮ ಲಿಂಗಪ್ಪ ಮೂಲ್ಯ ದಂಪತಿಯ ಯಜಮಾನಿಕೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.
ಸಂಘದ ಐದು ಸ್ಥಳೀಯ ಸಮಿತಿಯ ಗುರುವಂದನಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಸಂಕೀರ್ತನೆ ಬಳಿಕ ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ಕಾರ್ಯಕ್ರಮವು ರಾತ್ರಿ ಮಹಾ ಮಂಗಳಾರತಿ ತದ ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪೂಜೆಗೆ ವಿಶೇಷ ಸಹಕಾರ ನೀಡಿದ ದಾನಿಗಳನ್ನು ಸಂಘದ ಅಧ್ಯಕ್ಷರು ಗೌರವಿಸಿದರು ಬಳಿಕ ಮಾತನಾಡಿ. ಸಂಘದ ಸ್ವಂತ ಜಾಗ ಸಮಾಜದ ಎಲ್ಲಾ ಬಂಧುಗಳು ನೋಡುವಂತಾಗಬೇಕು ನಮ್ಮಲ್ಲಿ ಇನ್ನಷ್ಟು ಧರ್ಮ ಜಾಗೃತಿ ಆಗಬೇಕು ಎನ್ನುವ ಸಂಕಲ್ಪ ದೊಂದಿಗೆ ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ.
ಗೌರವಿಸಲಾಯಿತು.
ಮರುದಿನ ಭಜನೆ ಸಂಕೀರ್ತನೆ ರಂಗ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು . ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯೊಂದಿಗೆ ಮೂರ್ತಿಯನ್ನು ವಿಸರ್ಜಿಸಲಾಯಿತು.
ಗಣೇಶೋತ್ಸವದ ಯಶಸ್ವಿಗೆ ಅಂಬರನಾಥ್ ನ ದಾನಿ ಜಗದೀಶ್ ಬಂಜನ್,ದಾನಿ ಸುನಿಲ್ ಸಾಲಿಯಾನ್, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲಿಯಾನ್, ಗೌರವಕೋಶಧಿಕಾರಿ ಜಯ ಅಂಚನ್,ಜ್ಯೋತಿ ಕೊ ಅಫ್ ಕ್ರೆಡಿಟ್ ಸೊಸೈಟಿ ಚೇರ್ ಮೇನ್ ಗಿರೀಶ್ ಬಿ ಸಾಲಿಯಾನ್, ಸಂಜೀವ ಏನ್ ಬಂಗೇರ , ಥಾಣೆಯ ನಂದ ಕುಮಾರ್ ಮೂಲ್ಯ ರವರು , ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಹಾಗೂ .ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.