
ಶೋಭ ಯಾತ್ರೆಯಲ್ಲಿ ನೋಡುಗರ ಆಕರ್ಷಣೆಗೊಳಗಾದ ದಿನೇಶ್ ಕೋಟ್ಯಾನ್ ಬಳಗದ ಗೊಂಬೆ ಕುಣಿತ, ಹುಲಿ ವೇಷ.
ಮುಂಬೈಯ ಹೃದಯ, ಪೋರ್ಟ್ ಪರಿಸರದ ಗೊಲಾ ಲೈನ್ಟ್ರ ನ ಸೆಂಟ್ರಲ್ ಕೆಮರ ಬಳಿ ಇರುವ ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ, ರಾಜೇಶ್ ಹೆಗ್ಡೆ ಮತ್ತು ರೋಹಿತ ಹೆಗ್ಡೆ ಅವರ ಸೆಂಟ್ರಲ್ ಹೋಟೆಲ್ ಮುಂಭಾಗದಲ್ಲಿ ಬಾಲ ಗಣೇಶ ಮಂಡಳಿ ಅವರ ಸಂಯೋಜನೆಯಲ್ಲಿ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ 56 ವರ್ಷಗಳಿಂದ ನಡೆಯುತ್ತಿರುವ 10 ದಿನಗಳ ಗಣೇಶ ಉತ್ಸವ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.
ಪ್ರತಿದಿನ ಗಣೇಶ ಮಂಡಲದಲ್ಲಿ ಮಂಗಳಾರತಿ, ಭಜನೆ, ವಿಶೇಷ ಪೂಜೆಗಳು ನಡೆಯುತ್ತಿದ್ದವು.








ಸಪ್ಟಂಬರ್ 17ರಂದು ಭವ್ಯ ಗಣೇಶನ ಮೂರ್ತಿಯು ಸಾವಿರಾರು ಭಕ್ತರು ಪಾಲ್ಗೊಳ್ಳುವಿಕೆಯಲ್ಲಿ ರಾಜೇಶ್ ಹೆಗ್ಡೆ ಮತ್ತು ರೋಹಿತ್ ಹೆಗ್ಡೆ ಮುಂದಾಳತ್ವದಲ್ಲಿ ವಿಸರ್ಜನಾ ಶೋಭ ಯಾತ್ರೆ ನಡೆಯಿತು.
ಮುಂಬೈಯ ಪ್ರಸಿದ್ಧ ಸೇಕ್ಸೋಪೋನ್ ವಾದಕ ಜೆರಿಮರಿ ದಿನೇಶ್ ಕೋಟ್ಯಾನ್ ನೇತೃತ್ವದಲ್ಲಿ ಊರಿನ ಪ್ರಸಿದ್ಧ ಎಪ್ಪತ್ತುಕ್ಕೂ ಕಲಾವಿದರ ತಂಡದ ಗೊಂಬೆ ಕುಣಿತ, ಹುಲಿ ವೇಶ, ಕಂಬಳದ ಕೋಣಗಳು, ಹನುಮಂತ, ಬೇತಾಳ, ಚೆಂಡೆ ಆಕರ್ಷಕವಾಗಿ ಮೆರವಣಿಗೆಗೆ ಶೋಭೆ ತಂದಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡವರು ಹಾಗೂ ವೀಕ್ಷಕರು ಈ ಗೊಂಬೆ ಕುಣಿತಗಳ , ಹುಲಿ ವೇಷದ ಅಬ್ಬರದ ಕುಣಿತದ ಆಕರ್ಷಣೆಗೆ ಒಳಪಟ್ಟರು.
ಪೋರ್ಟ್ ಪರಿಸರದಲ್ಲಿ ಪ್ರಸಿದ್ಧ ವಾಗಿರುವ ಬಾಲವಿಹಾರ ಗಣೇಶ ಮಂಡಳಿಯ ಗಣೇಶ ಉತ್ಸವ ಮತ್ತು ವಿಸರ್ಜನಾ ಶೋಭಾ ಯಾತ್ರೆ ಬಹಳ ಪ್ರಸಿದ್ಧಿ ಪಡೆದಿದೆ.ಪ್ರತಿ ವರ್ಷ ದಿನೇಶ್ ಕೋಟ್ಯಾನ್ ಅವರು ಊರಿನಿಂದ ವಿವಿಧ ವೇಷ ದಾರಿಗಳನ್ನು, ಚೆಂಡೆವಾದಕರನ್ನು ಮುಂಬೈಗೆ ಕರೆಸಿ, ಬಾಲ ವಿಹಾರ ಮಂಡಳಿಯ ಗಣೇಶ ವಿಸರ್ಜನೆಯ ಶೋಭಾ ಯಾತ್ರೆಗೆ ವಿಶೇಷ ಮೆರುಗು ನೀಡುತ್ತಿರುವರು.
.