September 6, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ಚೈತನ್ಯ ಕಲಾವಿದರು ಬೈಲೂರು ತಂಡದಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನ





​ಸಮಾಜಕ್ಕೆ ನೀಡಿದ ಭರವಸೆಗಳು ಕಾರ್ಯಗತಗೊಳ್ಳುತ್ತಿವೆ – ಗಣೇಶ್ ಕಾಂಚನ್

ಮುಂಬಯಿ, ನವೆಂಬರ್ 13. ನಗರದ ಹಿರಿಯ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತವಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ, ಚೈತನ್ಯ ಕಲಾವಿದರು ಬೈಲೂರು ತಂಡದ ಕಲಾವಿದರಿಂದ “ಅಷ್ಟೆಮಿ” ಎಂಬ ಸಾಂಸಾರಿಕ ತುಳು ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವು ನವೆಂಬರ್ 9ರಂದು ಅಪರಾಹ್ನ ಅಂಧೇರಿ ಪಶ್ಚಿಮದ ಎಂ.ವಿ.ಎಂ. ಎಜುಕೇಶನ್ ಮಾರ್ಗದಲ್ಲಿರುವ ಮೊಗವೀರ ಭವನದ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

​ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕೆ. ಕಾಂಚನ್, ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಮೂಲ್ಕಿ, ಗೌರವ ಕೋಶಾಧಿಕಾರಿ ದೇವರಾಜ್ ಎಚ್. ಕುಂದರ್, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಕರ್ಕೇರ, ಮತ್ತು ಇತರ ಪದಾಧಿಕಾರಿಗಳು ಹಾಗೂ ಟ್ರಸ್ಟಿಗಳು ದೀಪ ಬೆಳಗಿಸಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

​ಬಳಿಕ ಮಾತನಾಡಿದ ಗಣೇಶ್ ಕಾಂಚನ್, ತಮ್ಮ ಅಧ್ಯಕ್ಷಾವಧಿಯಲ್ಲಿ ಕಳೆದ 4 ತಿಂಗಳಲ್ಲಿ ಕಾರ್ಯಗತಗೊಳಿಸಿದ ಯೋಜನೆಗಳನ್ನು ವಿವರಿಸಿದರು. “ಮಂಡಳಿಗೆ ಸದಸ್ಯರನ್ನು ನೋಂದಾಯಿಸಲು ಡಿಜಿಟಲ್ ಸೌಲಭ್ಯವನ್ನು ಆರಂಭಿಸಲಾಗಿದ್ದು, ಕೇವಲ ನಾಲ್ಕು ತಿಂಗಳಲ್ಲಿ 326 ಸದಸ್ಯರು ನೋಂದಾಯಿಸಿರುವುದು ಉತ್ತಮ ಸಾಧನೆ. ವಸಾಯಿಯಲ್ಲಿ 5 ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಡಯಾಲಿಸಿಸ್ ಹಾಗೂ ಆರೋಗ್ಯ ತಪಾಸಣಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಸಮಾಜ ಬಾಂಧವರು ಮತ್ತು ತುಳು-ಕನ್ನಡಿಗರು ಇದರ ಪ್ರಯೋಜನ ಪಡೆಯಬೇಕು. ಮೊಗವೀರ ಬಂಧುಗಳಿಗೆ ಉನ್ನತ ಶಿಕ್ಷಣಕ್ಕಾಗಿ ಉಚಿತ ತರಗತಿಗಳನ್ನು ಆಯೋಜಿಸಲಾಗಿದ್ದು, ಇದು ಸಮಾಜದ ಪದವೀಧರರಿಗೆ ಉದ್ಯೋಗ ನೀಡುವಲ್ಲಿ ಮಾರ್ಗದರ್ಶನವನ್ನೂ ಮಾಡಲಿದೆ. ಮಂಡಳಿಯು ತನ್ನ 125ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಇನ್ನೂ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಎಲ್ಲರ ಸಹಕಾರವಿರಲಿ” ಎಂದರು.

​ಈ ಸಂದರ್ಭದಲ್ಲಿ, “ಅಷ್ಟೆಮಿ” ನಾಟಕವನ್ನು ರಚಿಸಿ, ನಿರ್ದೇಶನ ಮಾಡಿದ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಮುಂಬೈ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ, ಚೈತನ್ಯ ಕಲಾವಿದರ ಪರವಾಗಿ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕರ್ಕೇರ ಅವರನ್ನು ಗೌರವಿಸಲಾಯಿತು.

​ಮಂಡಳಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರೆ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದಯಾವತಿ ಎಂ. ಸುವರ್ಣ ಧನ್ಯವಾದ ಸಮರ್ಪಿಸಿದರು.

​ಮೊಗವೀರ ವ್ಯವಸ್ಥಾಪಕ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ, ಗೌರವ ಕೋಶಾಧಿಕಾರಿ ದೇವರಾಜ್ ಕುಂದರ್, ಟ್ರಸ್ಟಿಗಳಾದ ಹರೀಶ್ ಪುತ್ರನ್, ಲಕ್ಷ್ಮಣ ಶ್ರೀಯನ್, ಪುರುಷೋತ್ತಮ ಕರ್ಕೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕರ್ಕೇರ, ಕಾರ್ಯದರ್ಶಿ ದಯಾವತಿ ಸುವರ್ಣ, ಸದಸ್ಯರುಗಳಾದ ಪ್ರೀತಿ ಶ್ರೀಯನ್, ಪ್ರಮೋದ್ ಪುತ್ರನ್, ಕಿರಣ್ ಮೆಂಡನ್, ದೇವರಾಜ್ ಬಂಗೇರ, ನಿವೇದಿತಾ ಸಾಲ್ಯನ್ ಹಾಗೂ ಮೊಗವೀರ ಮಹಿಳಾ ಗಾರ್ಡ್ಸ್‌ನ ಮುಖ್ಯಸ್ಥೆ ಹೇಮಲತ ಶಶಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

​ಇದರ ನಂತರ, ಚೈತನ್ಯ ಕಲಾವಿದರು ಬೈಲೂರು ತಂಡದ ಕಲಾವಿದರಿಂದ “ಅಷ್ಟೆಮಿ” ತುಳು ನಾಟಕದ ಯಶಸ್ವಿ ಪ್ರದರ್ಶನ ನಡೆಯಿತು.



Related posts

ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ ನ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ, ದತ್ತು ಸ್ವೀಕರ,

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಸ್ಥಳೀಯ ಸಮಿತಿಯಿಂದ ವಿಜೃಂಭಣೆಯ ಗುರುಪೂರ್ಣಿಮಾ ಆಚರಣೆ

Mumbai News Desk

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಿಶಿನ ಕುಂಕುಮ ಕಾರ್ಯಕ್ರಮ

Mumbai News Desk

ಅಕ್ಷರಿ ಡಿ. ಆಚಾರ್ಯಗೆ ಶೇ. 88.40 ಅಂಕ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk