32 C
Mumbai
March 7, 2026
Mumbai News Kannada
ಪ್ರಕಟಣೆ

ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಜಂಟಿ ಅಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಹಿಳೆಯರಿಗಾಗಿ (ಕರ್ಕರೋಗ)ಕ್ಯಾನ್ಸರ್ ತಪಾಸಣೆ :





ಡೊಂಬಿವಲಿ – ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಇವರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 2 ನೇ ತಾರೀಕು ಬುಧವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆಯ ತನಕ ಶಿಬಿರ ನಡೆಯಲಿದೆ. ಡೊಂಬಿವಲಿಯ ಪ್ರಸಿದ್ದ ವೈದ್ಯರಾದ ಡಾಕ್ಟರ್ ಅನಘಾ ಹೇರೂರ್ ಅವರ ತಂಡದಿಂದ ಉಚಿತ ನೇತ್ರ ತಪಾಸಣೆ ನಡೆಯಲಿದೆ. ನೇತ್ರ ಪರೀಕ್ಷೆ ಮಾಡಿಸುವವರು ಬೆಳಿಗ್ಗೆ 9 ಗಂಟೆಯಿಂದ ಶಿಬಿರ ದಲ್ಲಿ ಟೋಕನ್ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಮತ್ತು ಡಾಕ್ಟರ್ ಅನಿಲ್ ಹೇರೂರ್ ತಂಡದವರಿಂದ ಮಹಿಳೆಯರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆಯು ನಡೆಯಲಿದೆ. ಮೊದಲು ಬರುವ 30 ರಿಂದ 35 ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆಗೆ ಅವಕಾಶವಿದೆ. ಸಮಾಜ ಬಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜು ಮೊಗವೀರ ತಗ್ಗರ್ಸೆ, ಕಾರ್ಯದರ್ಶಿ ಶ್ರೀಯುತ ಸಂತೋಷ ಪುತ್ರನ್ ಮತ್ತು ಸಮಿತಿ ಸದಸ್ಯರು ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷರಾದ ಶ್ರೀಯುತ ಶೇಖರ್ ಮೆಂಡನ್, ಕಾರ್ಯದರ್ಶಿ ಶ್ರೀಯುತ ಉಮೇಶ್ ಮೆಂಡನ್ ಮತ್ತು ಶಾಖೆಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ಸ್ಥಳ – ಮೊಗವೀರ ವ್ಯವಸ್ತಾಪಕ ಮಂಡಳಿ. ವೇದ ಬ್ರಹ್ಮ,
2 ನೇ ಮಳಿಗೆ, M.G ರೋಡ್, ಲಿಜತ್ ಪಾಪಡ್ ಮೇಲುಗಡೆ,
ಡೊಂಬಿವಲಿ ಪಶ್ಚಿಮ.



Related posts

ಫೆ. 8, 9 ಹಾಗೂ 10 ರಂದು ತಿರುಪತಿ ತಿರುಮಲದಲ್ಲಿ ಭಜನ ಕಾರ್ಯಕ್ರಮ

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

ನಾಸಿಕ್: ನಾಳೆ(ಜ.26) ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ

Mumbai News Desk

ಕುಲಾಲ ಪ್ರತಿಷ್ಠಾನದ ಆಶ್ರಯದಲ್ಲಿ ನ.23 ರಂದು ವಿಜಯ ಕಲಾವಿದರು ಕಿನ್ನಿಗೋಳಿ ಇದರ ಮುಂಬೈ ಪ್ರವಾಸದ ಉದ್ಘಾಟನೆ

Mumbai News Desk

ಜೂನ್ 8ರಂದು “ಕನ್ನಡ ವೆಲ್ಫೇರ್ ಸಂಘ” ಜೆರಿಮರಿ, ಕುರ್ಲಾ ಪಶ್ಚಿಮ – ನೂತನ ಸಂಘದ ಉದ್ಘಾಟನೆ.

Mumbai News Desk