
ರಕ್ಷಣಾಪುರ ಖ್ಯಾತಿಯ ಕಾಪುವಿನಲ್ಲಿ ಮೂರು ಶತಮಾನಗಳ ಹಿಂದೆ ನೆಲೆ ನಿಂತು ನಂಬಿದ ಭಕ್ತರ ಅಭಿಷ್ಟ ಈಡೇರಿಸುವ “ಕಾಪುದ ಅಪ್ಪೆ” ಶ್ರೀ ಹಳೇಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ತಾ. 3-10-2024ನೇ ಗುರುವಾರ ಮೊದಲ್ಗೊಂಡು ತಾರೀಕು 13- 10 2024ನೇ ರವಿವಾರ ಪರ್ಯಂತ ಆಚರಿಸಲಾಗುವುದು.
ಕಾರ್ಯಕ್ರಮಗಳ ವಿವರ :
03-10-24 ರಿಂದ : ಪ್ರತಿದಿನ ಶ್ರೀದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ
12-10-24 ರ ತನಕ : ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನ ಸಂತರ್ಪಣೆ
08-10-24 : ಕದಿರು ಕಟ್ಟುವುದು
09-10-24 : ಶಾರದಾ ಪೂಜೆ
11-10-24 : ದುರ್ಗಾಷ್ಟಮಿ ದುರ್ಗನಮಸ್ಕಾರ ಪೂಜೆ
13-10-24 : ವಿಜಯದಶಮಿ, ಕಲಶ ವಿಸರ್ಜನೆ
15-10-24 : ಚಂಡಿಕಾಯಾಗ,ಪೂರ್ಣಹುತಿ, ಮಹಾ ಅನ್ನಸಂತರ್ಪಣೆ
ತಾರೀಕು 03-10-24ನೇ ಗುರುವಾರದಿಂದ ತಾರೀಕು 12-24ನೇ ರವಿವಾರದವರೆಗೆ ಪ್ರತಿದಿನ ಸಾಯಂಕಾಲ ಗಂಟೆ 6.00ರಿಂದ ಭಜನಾ ಕಾರ್ಯಕ್ರಮ (ವಿವಿಧ ಭಜನಾ ಮಂಡಳಿಯವರಿಂದ )ನಡೆಯಲಿರುವುದು.
ಶರನ್ನವರಾತ್ರಿ ಮಹೋತ್ಸವದಲ್ಲಿ ಭಕ್ತಾದಿಗಳು, ಇಷ್ಟಮಿತ್ರ ಬಂಧು – ಬಾಂಧವರೊಡಗೂಡಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೃತಾರ್ಥರಾಗುವಂತ್ತೆ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು ಅಪೇಕ್ಷಿಸುತ್ತಾರೆ.

.
.
.