23.5 C
Karnataka
April 4, 2025
ಮುಂಬಯಿ

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಶೀರೂರು ಮಠಾಧಿಪತಿ, ಪೂಜ್ಯ ವೇದವರ್ಧನತೀರ್ಥ ಶ್ರೀಪಾದರ ಆಗಮನ.




ದೇವರ ಪೂಜೆ ಮಾಡುವುದರಿಂದ ನಿತ್ಯಆನಂದ ಪಡೆಯಬಹುದು:ಶೀರೂರು ಶ್ರೀ


ಚಿತ್ರ ವರದಿ ದಿನೇಶ್ ಕುಲಾಲ್


ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ, ಯೋಗ ಸಂಸ್ಥೆಯ ಹಿಂದೆ ಇರುವ ಶ್ರೀ ಪೇಜಾವರ ಮಠಕ್ಕೆ ಉಡುಪಿ ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರು
ತಮ್ಮ 4ನೇ ಚಾತುರ್ಮಾಸ್ಯವ್ರತವನ್ನು ಮುಂಬೈನಲ್ಲಿ ಮುಗಿಸಿ ಆಗಮಿಸಿದ್ದರು.
ಸ್ವಾಮೀಜಿಯವರು ಆಗಮಿಸಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಾದಪೂಜೆ ಗುರುಪೂಜೆ ನಡೆಯಿತು.
ಬಳಿಕ ಆಶೀರ್ವಚನ ನೀಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾಧನೆಗಾಗಿ ಎರಡು ತಿಂಗಳು ಚಾತುರ್ಮಾಸ್ಯವ್ರತವನ್ನು ಮುಂಬೈನಲ್ಲಿ ಮುಗಿಸಿ. ಮುಂದೆ ಧರ್ಮ ಪ್ರಚಾರಕ್ಕಾಗಿ ಸಿಮೋ ಲಂಗನ ಮಾಡಬೇಕಾಗಿದೆ. ಧರ್ಮದ ಜಾಗೃತಿ ನಿತ್ಯ ನಿರಂತರ ಮಾಡಬೇಕಾಗಿದೆ. ಉಡುಪಿಯ 8 ಮಠದಲ್ಲೂ ಒಂದೊಂದು ದೇವರನ್ನು ಪೂಜಿಸುತ್ತಾ ಇದ್ದೇವೆ ಎಲ್ಲಾ ಮಠದ ಮೂಲ ಉದ್ದೇಶ ಧರ್ಮಕಾರ್ಯವಾಗಿದೆ. ದೇವರ ಪೂಜೆ ಮಾಡುವುದರಿಂದ ನಿತ್ಯ ಆನಂದ ಪಡೆಯಬಹುದು .ಈ ಶರೀರ ಭಗವಂತ ನೀಡಿರುವುದು ಸಾಧನೆ ಪಡೆಯುವುದಕ್ಕಾಗಿ.ಮೋಕ್ಷ ಪಡೆಯುವುದಕ್ಕಾಗಿ. ನಿತ್ಯ ಧರ್ಮ ಕಾರ್ಯದಲ್ಲಿ ಬದುಕನ್ನು ಸಾಗಿಸಿ ಪೂಜೆ ,ಸತ್ಕಾರ್ಯ ಮಾಡುವಂತೆ ಆಗಬೇಕು. ಕೃಷ್ಣ ಮಠದ ದೇವರು ಎಲ್ಲೆಡೆಯೂ ಇದ್ದಾರೆ ಆದರೆ ಮೂಲ ಉಡುಪಿ ಇಲ್ಲಿಗೆ ಭಗವಂತನನ್ನು ಕಾಣುವುದಕ್ಕೆ ಬರಬೇಕು.ಮುಂದಿನ ವರ್ಷ2026 ರಿಂದ 2028 ಹೊರಗೆ ಪರ್ಯಾಯ ಶಿರೂರು ಮಠದದಾಗಿದೆ ಎಲ್ಲಾ ಭಕ್ತಾದಿಗಳು ಈ ಸಂದರ್ಭದಲ್ಲಿ ಶ್ರೀ ಕೃಷ್ಣನ ಮೂಲ ಮಠಕ್ಕೆ ಆಗಮಿಸಿ ಬದುಕನ್ನು ಪಾವನಗೊಳಿಸಿ ಎಂದು ನುಡಿದರು.

ಶ್ರೀಪಾದರನ್ನು ಭಕ್ತರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಟ್ರಸ್ಟ್ ಮುಂಬಯಿ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ದಂಪತಿಗಳು ಪಾದಪೂಜೆ ನಡೆಸಿ ಗುರುಕಾಣಿಕೆ ನೀಡಿದರು.
ಟ್ರಸ್ಟ್‌ನ ಸದಸ್ಯರು ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ, ವಿದ್ವಾನ್ ಶ್ರೀಹರಿ ಭಟ್, ಪುತ್ತಿಗೆ, ನಿರಂಜನ್ ಗೋಗೈ . ಪೂರ್ಣಪ್ರಜ್ಞ ವಿದ್ಯಾಪೀಠದ ಆಡಳಿತ ಪದಾಧಿಕಾರಿ ಸ್ವಾಮೀಜಿಯವರನ್ನು ಗೌರವಿಸಿ ಮಂತ್ರಾಕ್ಷತೆಯನ್ನು ಪಡೆದರು.
. ಪೇಜಾವರ ಮಠದ ಮುಂಬಯಿ ಶಾಖೆಯ ಮುಖ್ಯ ಆಡಳಿತಾಧಿಕಾರಿ ವಿದ್ವಾನ್ ಡಾ। ರೆಂಜಾಳ ರಾಮದಾಸ ಉಪಾಧ್ಯಾಯ ಸ್ವಾಗತಿಸಿ, ಅವರ ಸೇವಾಕಾರ್ಯಗಳನ್ನು ವಿವರಿಸಿದರು,

Related posts

ಮದರ್ ಇಂಡಿಯಾ 19ನೇ ಈಸ್ಟ್ ಬಾಂಬೆ ಹಳೇ ವಿದ್ಯಾರ್ಥಿ ಸ್ಕೌಟ್ ಬಳಗದ 4ನೇ ವಾರ್ಷಿಕ ಸ್ನೇಹ ಸಮ್ಮಿಲನ.

Mumbai News Desk

ಮುಂಬೈ : ಘಾಟ್ಕೋಪರ್ ನಲ್ಲಿ ಪಾದಚಾರಿಗಳ ಮೇಲೆ ಟೆಂಪೋ ಡಿಕ್ಕಿ 1 ಸಾವು, 5 ಮಂದಿಗೆ ಗಾಯ.

Mumbai News Desk

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.

Mumbai News Desk

 ಅಂದೇರಿ ಮೊಗವೀರ ಭವನದಲ್ಲಿ ಯಕ್ಷ ಅಭಿಮಾನಿಗಳನ್ನು ರಂಜಿಸಿದ ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ,

Mumbai News Desk

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk