
ಮುಂಬಯಿ : ಮಹಾರಾಷ್ಟ್ರ ಚುಣಾವಣಾ ಸಹ ಪ್ರಮುಖರರೂ, ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಾಕಾರಿ ಸದಸ್ಯೆ, ಕನ್ನಡತಿ ಮಂಜೇಶ್ವರದ ಅಶ್ವಿನಿ ಎಮ್. ಎಲ್. ಅವರು 26.9.2024 ರ ತನಕ ಮೂರು ವಾರ ಮುಂಬಯಿ ಪ್ರವಾಸದಲ್ಲಿದ್ದು ನಗರ ಹಾಗೂ ಉಪನಗರದಲ್ಲಿನ ಪಕ್ಷದ ಹಿರಿಯ ಹಾಗೂ ಕಿರಿಯ ಮಹಿಳಾ ಸದಸ್ಯರನ್ನು ಹಾಗೂ ಗಣ್ಯರನ್ನು ಬೇಟಿಯಾಗಿ ಚರ್ಚೆ ನಡೆಸಿದರು.

ಬೊರಿವಲಿ ಪಶ್ಚಿಮ ಓಪಲ್ ಸಭಾಗೃಹದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕಿ ಮನಿಶಾ ಚೌದರಿ, ಮಾಜಿ ಸಂಸದರಾದ ಗೋಪಾಲ್ ಸಿ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಲ್ಲದೆ ಪಕ್ಷದ ದಕ್ಷಿಣ ಭಾರತೀಯ ಮಹಿಳಾ ಕಾರ್ಯ ಕರ್ತರನ್ನು ಹಾಗೂ ಉಪನಗರಗಳಲ್ಲಿನ ವಿವಿಧ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಮಹಾಲಕ್ಷಿ ದೇವಸ್ಥಾನ, ಮುಂಬಾದೇವಿ, ಸಿದ್ದಿ ವಿನಾಯಕ ಕ್ಷೇತ್ರ ಸೇರಿದಂತೆ ಕೆಲವು ಧಾರ್ಮಿಕ ಕ್ಷೇತ್ರಕ್ಕೆ ಕಾರ್ಯಕರ್ತರೊಂದಿಗೆ ಬೇಟಿಯಿತ್ತರು.