
ಮುಂಬಯಿ, ಅ. 1: ಭಾರತ್ ಬ್ಯಾಂಕಿನ ಭಾಯಂದರ್ ಶಾಖಾ ಹಿರಿಯ ಅಧಿಕಾರಿ ವೀಣಾ ರಮೇಶ್ ಪೂಜಾರಿಯವರು ಸುಮಾರು 36 ವರ್ಷ 8 ತಿಂಗಳ ಅವಧಿಯಲ್ಲಿ ಸೇವೆಗೖದು ಸೆ. 30ರಂದು ನಿವೃತ್ತರಾದರು. ಭಾಯಂದರ್ ಶಾಖಾ ಪ್ರಭಂದಕ ಪ್ರವೀಣ್ ಬಂಗೇರ, ಜತೆ ಪ್ರಭಂಧಕಿ ನಮಿತಾ ಮಿಸ್ತ್ರಿ, ಬ್ಯಾಂಕಿನ ನಿರ್ದೇಶಕ ನರೇಶ್ ಕೆ. ಪೂಜಾರಿ ಹಾಗೂ ಶಾಖಾ ಸಿಬ್ಬಂಧಿಗಳು ಅವರನ್ನು ಶಾಲು, ಹೂಗುಚ್ಚ. ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿದರು. ಭಾರತ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪರವಾಗಿ ವಸಾಯಿ ಶಾಖಾ ಮುಖ್ಯಸ್ಥ ರಾಹುಲ್ ಸಾಲ್ಯಾನ್, ಅಧಿಕಾರಿ ದೀಪಾ ಸಾಲ್ಯಾನ್, ಕಿರಿಯ ಅಧಿಕಾರಿಗಳಾದ ಲೀಲಾಧರ್ ಸುವರ್ಣ, ಶ್ವೇತಾ ಶೆಟ್ಟಿ, ಸಿಬ್ಬಂದಿಗಳಾದ ಸೂರ್ಯಕೃಷ್ಣ ನಾಯರ್, ಪ್ರಾಪ್ತಿ, ಪ್ರಿಯಾ ಸಿಂಗ್, ಸೂರಜ್, ಪ್ರಿಯಾ, ವಿಜಯ್, ಭಾರತ್ ಬ್ಯಾಂಕ್ ಸಿಬ್ಬಂಧಿಗಳಾದ ನಿರ್ಮಲಾ ಎಸ್. ಶೆಟ್ಟಿ, ಅಕ್ಷತಾ, ಶ್ರದ್ದಾ, ದರ್ಶನ್, ಪ್ರಿಯಾ, ಬ್ಯಾಂಕಿನ ಮಾಜಿ ಸಿಬ್ಬಂದಿಗಳಾದ ರಘುನಾಥ್ ಹಳೆಂಗಡಿ, ವಿಜಯ ಎಲ್. ಅಂಚನ್, ವೀಣಾರವರ ಪತಿ ರಮೇಶ್ ಪೂಜಾರಿ, ಪುತ್ರ ಅಭಿಷೇಕ್ ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು ಉಪಸ್ಥಿತರಿದ್ದರು.


.
.
.