April 2, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ, ಬಿ ಜೆ ಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸ್ಥಾನದ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಇದೇ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಸವಿತಾ ಸಮಾಜದ ಕಿಶೋರ್ ಕುಮಾರ್ ಪುತ್ತೂರ್​ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದರೊಂದಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್​ಗೆ ಮುಖಭಂಗವಾಗಿದೆ. ಲೋಕಾಸಭಾ ಚುನಾವಣೆಯಲ್ಲೂ ಸಹ ಟಿಕೆಟ್​ ಮಿಸ್ ಆಗಿತ್ತು, ಇದೀಗ ವಿಧಾನಪರಿಷತ್ ಉಚಪಾವಣೆಯ ಟಿಕೆಟ್​ ಸಹ ಕೈತಪ್ಪಿದೆ.

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸ್ಥಾನದ ಮರು ಚುನಾವಣೆ ಅ.21 ರಂದು ನಿಗದಿಯಾಗಿದ್ದು, ಬಿಜೆಪಿ ಗೆದ್ದಿದ್ದ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ಬಿಜೆಪಿ ಪಾಲಿಗೆ ಸಿಕ್ಕಿದ್ದು ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುತ್ತಿದೆ. ಹಾಗಾಗಿ ಈ ಬಾರಿ ಗೆಲ್ಲುವ ಸಾಧ್ಯತೆ ಬಿಜೆಪಿಗೇ ಹೆಚ್ಚಾಗಿದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು.

.

.

Related posts

ಮೀರಾ ಡಹಾಣೂ ಬಂಟ್ಸ್ (ರಿ) . ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್.

Mumbai News Desk

ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ

Mumbai News Desk

ಬಿಲ್ಲವರ ಎಸೋಸಿಯೇಶನ ನ ಮಾಜಿ ಉಪಾಧ್ಯಕ್ಷ ಸಿ. ಟಿ. ಸಾಲ್ಯಾನ್ ನಿಧನ

Mumbai News Desk

ಬೊಯಿಸರ್ ನಿತ್ಯಾನಂದ ಸ್ವಾಮಿ ಮಂದಿರದ 14 ನೆಯ ವಾರ್ಷಿಕೋತ್ಸವ ಸಂಪನ್ನ

Mumbai News Desk

ಪುಷ್ಪ 2 ಯಶಸ್ಸಿನ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಬಂಧನ, ಅಭಿಮಾನಿಗಳು ಶಾಕ್

Mumbai News Desk

ಆಯೋದ್ಯ ಶ್ರೀರಾಮ ಮಂದಿರದಲ್ಲಿ ಹರೀಶ್ ಪೂಜಾರಿ ಅವರಿಂದ ಸೇಕ್ಸೋಪೋನ್ ವಾದನ

Mumbai News Desk