
ಮಂಗಳೂರು ಅ 2. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಒಕ್ಕೂಟದ ಮಹಾ ನಿರ್ದೇಶಕರಾದ ಬೆಳ್ಳಾಡಿ ಅಶೋಕ್ ಎಸ್.ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕುಂದಾಪುರದ ಹೇರಿಕುದ್ರು ಗ್ರಾಮದ ನಿವಾಸಿ ಪ್ರೇಮಾ ಶೇಡ್ತಿಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಪಲಾನುಭವಿಯ ಸಹೋದರಿ ಗೀತಾ ಶೇಡ್ತಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.

ಮಹಾ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕುಂದಾಪುರದ ಹಲ್ತೂರು- ಉಳ್ತೂರು ಗ್ರಾಮದ ನಿವಾಸಿ ಶೆಟ್ಟಿಯವರು ಕಿಡ್ನಿ ವೈಫಲ್ಯವಾಗಿ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಪಲಾನುಭವಿಯ ಪತಿ ಉದಯ್ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಒಕ್ಕೂಟದ ಪೋಷಕ ಸದಸ್ಯರಾದ ಅಶೋಕ್ ವಿಠ್ಠಲ್ ಶೆಟ್ಟಿ ಸೂರ್ಗೋಳಿ ಇವರ ಶಿಫಾರಸ್ಸಿನ ಮೇರೆಗೆ ಕುಂದಾಪುರದ ಕನ್ಯಾನ ಗ್ರಾಮದ ನಿವಾಸಿ ಜ್ಯೋತಿಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಅವರ ಸಹೋದರ ರತ್ನಾಕರ್ ಆಚಾರ್ಯ ರವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು..
ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕುಂದಾಪುರದ ಉಳ್ತೂರಿನ ನಿವಾಸಿ ಪ್ರಭಾವತಿ ಶೆಟ್ಟಿಯವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಫಲಾನುಭವಿಯ ಗಂಡ ತೇಜಪ್ಪ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.*