
ಚಿತ್ರ ವರದಿ : ಪಿ.ಆರ್.ರವಿಶಂಕರ್
ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್ ಜಿಲ್ಲೆಯ ತುಳು ಕನ್ನಡಿಗರ ಸಾಂಸ್ಕೃತಿಕ ಶೃದ್ಧಾಕೇಂದ್ರವೆನಿಸಿರುವ ಬೊಯಿಸರ್ ಪಶ್ಚಿಮದ ಪ್ರಸಿದ್ಧ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶರನ್ನವರಾತ್ರಿ ಉತ್ಸವವು ಆರಂಭಗೊಂಡಿತು.
ಶ್ರೀನಿವಾಸ್ ಕೋಟ್ಯಾನ್ ದಂಪತಿಗಳು ವಾಸ್ತುಪೂಜೆಯನ್ನು ನೆರವೇರಿಸಿದರು. ಆರಂಭದಲ್ಲಿ ಪ್ರತಿಷ್ಟಾಹೋಮ ಜರಗಿತು. ಆನಂತರ ಶ್ರೀದೇವೀ ಕಲಶ ಪ್ರತಿಷ್ಟೆಯನ್ನು ಶ್ರೀಮತಿ ಪದ್ಮಾವತಿ ಮತ್ತು ಸತ್ಯಾ ಎಸ್. ಕೋಟ್ಯಾನ್ ಹಾಗೂ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ ಇವರು ನೆರವೇರಿಸಿದರು. ಸದ್ಗುರು ನಿತ್ಯಾನಂದ ಭಜನಾ ಮಂಡಳಿಯ ವತಿಯಿಂದ
ಭಕ್ತಿ ಗೀತೆ , ಭಜನಾ ಕಾರ್ಯಕ್ರಮ ಹಾಗೂ ಸಾಂಪ್ರದಾಯಿಕ ಗರ್ಭಾ ನೃತ್ಯದ ಬಳಿಕ ಮಹಾ ಮಂಗಳ ಆರತಿ ಕಾರ್ಯಕ್ರಮಜರಗಿತು.
ಧಾರ್ಮಿಕ ವಿಧಿ ವಿಧಾನಗಳನ್ನು ಮಂದಿರದ ಪುರೋಹಿತರಾದ ಶ್ರೀ ರಾಜೇಶ್ ಶಾಂತಿ ನೆರವೇರಿಸಿದರು.
ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್. ರೈ ಸೇರಿದಂತೆ ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್ , ಡಹಾಣೂ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾಭಿಮಾನಿಗಳು , ನಿತ್ಯಾನಂದ ಸೇವಾ ಟ್ರಸ್ಟ್ ವಿಶ್ವಸ್ಥರು , ಭಜನಾ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .
ಕಾರ್ಯಕ್ರಮ ವ್ಯವಸ್ಥಾಪನೆಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು.
ನವರಾತ್ರಿ ಉತ್ಸವವು ಅಶ್ವಯುಜ ಶುಕ್ಲ ಪ್ರತಿಪದೆಯಿಂದ ಅಶ್ವಯುಜ ಶುಕ್ಲ ನವಮಿಯವರೆಗೆ ( ಗುರುವಾರ ಅಕ್ಟೋಬರ್ 03 ರಿಂದ ಶನಿವಾರ 12 ಅಕ್ಟೋಬರ್ ತನಕ ) ಜರಗಲಿರುವುದು.
ನಿತ್ಯಾನಂದ ಸ್ವಾಮಿ ಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.
ಚಿತ್ರ ಮತ್ತು ವರದಿ :
ಪಿ.ಆರ್.ರವಿಶಂಕರ್
8483980035