September 6, 2026
Mumbai News Kannada
ಸುದ್ದಿ

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ : ಶರನ್ನವರಾತ್ರಿ ಉತ್ಸವ ಆರಂಭ





ಚಿತ್ರ ವರದಿ : ಪಿ.ಆರ್.ರವಿಶಂಕರ್ 

  ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್ ಜಿಲ್ಲೆಯ ತುಳು ಕನ್ನಡಿಗರ  ಸಾಂಸ್ಕೃತಿಕ  ಶೃದ್ಧಾಕೇಂದ್ರವೆನಿಸಿರುವ ಬೊಯಿಸರ್ ಪಶ್ಚಿಮದ ಪ್ರಸಿದ್ಧ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶರನ್ನವರಾತ್ರಿ ಉತ್ಸವವು ಆರಂಭಗೊಂಡಿತು. 

ಶ್ರೀನಿವಾಸ್ ಕೋಟ್ಯಾನ್ ದಂಪತಿಗಳು ವಾಸ್ತುಪೂಜೆಯನ್ನು ನೆರವೇರಿಸಿದರು. ಆರಂಭದಲ್ಲಿ ಪ್ರತಿಷ್ಟಾಹೋಮ ಜರಗಿತು. ಆನಂತರ ಶ್ರೀದೇವೀ ಕಲಶ ಪ್ರತಿಷ್ಟೆಯನ್ನು ಶ್ರೀಮತಿ ಪದ್ಮಾವತಿ ಮತ್ತು ಸತ್ಯಾ ಎಸ್. ಕೋಟ್ಯಾನ್ ಹಾಗೂ ಶ್ರೀಮತಿ ಸುಹಾಸಿನಿ ದಾಮೋದರ್  ನಾಯ್ಕ್ ಇವರು ನೆರವೇರಿಸಿದರು. ಸದ್ಗುರು ನಿತ್ಯಾನಂದ ಭಜನಾ ಮಂಡಳಿಯ ವತಿಯಿಂದ

ಭಕ್ತಿ ಗೀತೆ , ಭಜನಾ ಕಾರ್ಯಕ್ರಮ ಹಾಗೂ ಸಾಂಪ್ರದಾಯಿಕ ಗರ್ಭಾ ನೃತ್ಯದ ಬಳಿಕ ಮಹಾ ಮಂಗಳ ಆರತಿ ಕಾರ್ಯಕ್ರಮಜರಗಿತು.

ಧಾರ್ಮಿಕ ವಿಧಿ ವಿಧಾನಗಳನ್ನು ಮಂದಿರದ ಪುರೋಹಿತರಾದ ಶ್ರೀ ರಾಜೇಶ್ ಶಾಂತಿ ನೆರವೇರಿಸಿದರು.

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ಎಮ್. ರೈ ಸೇರಿದಂತೆ ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್ , ಡಹಾಣೂ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾಭಿಮಾನಿಗಳು , ನಿತ್ಯಾನಂದ ಸೇವಾ ಟ್ರಸ್ಟ್ ವಿಶ್ವಸ್ಥರು , ಭಜನಾ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .

ಕಾರ್ಯಕ್ರಮ ವ್ಯವಸ್ಥಾಪನೆಯಲ್ಲಿ ರಮಾನಂದ ಪೂಜಾರಿ ಸಹಕರಿಸಿದರು. 

ನವರಾತ್ರಿ ಉತ್ಸವವು ಅಶ್ವಯುಜ ಶುಕ್ಲ ಪ್ರತಿಪದೆಯಿಂದ ಅಶ್ವಯುಜ ಶುಕ್ಲ ನವಮಿಯವರೆಗೆ ( ಗುರುವಾರ  ಅಕ್ಟೋಬರ್ 03 ರಿಂದ ಶನಿವಾರ 12 ಅಕ್ಟೋಬರ್ ತನಕ ) ಜರಗಲಿರುವುದು. 

ನಿತ್ಯಾನಂದ ಸ್ವಾಮಿ ಮಂಗಳಾರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

ಚಿತ್ರ ಮತ್ತು ವರದಿ :

ಪಿ.ಆರ್.ರವಿಶಂಕರ್

8483980035



Related posts

ಮುಂಬೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಭವ್ಯ ಸ್ವಾಗತ

Mumbai News Desk

ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ

Mumbai News Desk

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (02/07/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ತೃತೀಯ ವಾರ್ಷಿಕ ಪ್ರತಿಷ್ಠ ಮಹೋತ್ಸವ.

Mumbai News Desk

ಕೊಂಕಣ ರೈಲ್ವೆ ವಿಲೀನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ: ಕರಾವಳಿ ಅಭಿವೃದ್ಧಿಗೆ ಲೋಕಸಭೆಯಲ್ಲಿ ಬಲವಾದ ಮಂಡನೆ

Mumbai News Desk