23.5 C
Karnataka
April 4, 2025
ಮುಂಬಯಿ

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ



ಭಕ್ತರ ಸಹಕಾರದಿಂದ ನವರಾತ್ರೋತ್ಸವ ವಜ್ರ ಮಹೋತ್ಸವವನ್ನು ವಿಜೃಂಭಣೆಯಿಂದ ಅಚರಿಸೋಣಾ- ಧರ್ಮದರ್ಶಿ ಅಶೋಕ ಶೆಟ್ಟಿ

ವರದಿ ರವಿ ಬಿ. ಅಂಚನ್ ಪಡುಬಿದ್ರಿ

ಡೊಂಬಿವಲಿ ಅ. 4:  ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ 60ವರ್ಷ ತುಂಬಿದೆ. ನಿಮ್ಮೇಲ್ಲರ ಸಹಕಾರದಿಂದ ದುರ್ಗೆಯ ಆಶೀರ್ವಾದದಿಂದ ಕಳೆದ 60 ವರ್ಷಗಳಲ್ಲಿ ಭಕ್ತಿ, ಭಾವದಿಂದ ನವರಾತ್ರೋತ್ಸವ ನಡೆಯತ್ತಾ ಬಂದಿದೆ. ವಜ್ರ ಮಹೋತ್ಸವದ ನಿಮಿತ್ತ  9 ದಿನ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಯೋಜಿಸಲು ತೀರ್ಮಾನಿಸಿದ್ದು ಈ ಕಾರ್ಯಕ್ರಮಗಳಿಗೆ ಪ್ರಾಯೋಜಕರು ತುಂಬು ಹೃದಯದಿಂದ ಸಹಕಾರ ನೀಡಿದ್ದಾರೆ. ಇಂದಿನ ಕಲ್ಲಡ್ಕ ವಿಠಲ್ ನಾಯಕ್  ಬಳಗದ ಗೀತಾ ಸಾಹಿತ್ಯ ಕಾರ್ಯಕ್ರಮದ ಪ್ರಾಯೋಜಕರಾಗಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪರಮ ಭಕ್ತರಾದ ಡೊಂಬಿವಲಿ ಪರಿಸರದ ಹಿರಿಯ ಉದ್ಯಮಿ ಮಹಾರಾಷ್ಟ್ರ ಜನರಲ್ ಸ್ಟೋರ್ಸನ  ಮಾಲಕ ಉಳ್ಳೂರು ಗುತ್ತು ಶ್ರೀಮತಿ ಮತ್ತು ಶ್ರೀ ಭಾಸ್ಕರ್ ಶೆಟ್ಟಿ ಲಭಿಸಿದ್ದಾರೆ ಇವರಿಗೆ ಇವರ ಕುಟುಂಬಕ್ಕೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಶ್ರೀ ರಕ್ಷೆ ಸದಾ ಇರಲಿ ದುರ್ಗಾಪರಮೇಶ್ವರಿ ಅಮ್ಮನವರ ಆಶೀರ್ವಾದದಿಂದ ಮುಂದಿನ  8 ದಿನದ ಏಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಭಕ್ತರ ಸಹಕಾರದಿಂದ ವಜ್ರ ಮಹೋತ್ಸವ ವಿಜೃಂಭಣೆಯಿಂದ ಅಚರಿಸೋಣಾ ಎಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಇದರ ಧರ್ಮದರ್ಶಿ ಅಶೋಕ್ ಶೆಟ್ಟಿ ನುಡಿದರು.

ಅವರು ಅ. 3 ರ ಗುರುವಾರದ ಸಂಜೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವದ ನಿಮಿತ್ತ ಜರಗಿದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಂಡಳಿಯ ಪ್ರಧಾನ ಅರ್ಚಕರಾದ ಶುಭಕರ್ ಭಟ್  ಮಾತನಾಡುತ್ತಾ ಭಕ್ತರ ಸಹಕಾರದಿಂದ ನವರಾತ್ರೋತ್ಸವ ಬಹು ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಡೆಯುತ್ತಿದೆ ಮಂಡಳಿಗೆ ಈ ವರ್ಷ ವಜ್ರ ಮಹೋತ್ಸವ ಈ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ ದುರ್ಗೆಯ ಅನುಗ್ರಹದಿಂದ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯಲಿ ಎಂದರು.

ಇದೇ ಸಂದರ್ಭದಲ್ಲಿ ಪ್ರಾಯೋಜಕರಾದ ಉಳ್ಳೂರು ಗುತ್ತು ಭಾಸ್ಕರ್ ಶೆಟ್ಟಿ ದಂಪತಿಯನ್ನು ಮಂಡಳಿಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು ಹಾಗೂ ಕಲ್ಲಡ್ಕ ವಿಠಲ್ ನಾಯಕ್ ರನ್ನು ಸನ್ಮಾನಿಸಲಾಯಿತು.

ಕಿಕ್ಕಿರಿದು ತುಂಬಿರುವ ಪ್ರೇಕ್ಷಕರ ಸಮ್ಮುಖದಲ್ಲಿ ವಿಠಲ್ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮವು ಜರಗಿತು 

  ಚಿನ್ಮಯ ಸಾಲ್ಯಾನ್ ಮತ್ತು ಪವಿತ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಕೊನೆಗೆ ಚಿನ್ಮಯ ಸಾಲ್ಯಾನ್ ವಂದಿಸಿದರು.

Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : 79ನೇ ವಾರ್ಷಿಕ ಮಹಾಸಭೆ,

Mumbai News Desk

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ

Mumbai News Desk