
ಶ್ರೀ ದುರ್ಗೆಯ ಅನುಗ್ರಹದಿಂದ ಮಂಡಳಿಯ ವಜ್ರ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ- ಡಾ. ಆರ್.ಕೆ. ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಅ. 5: ಗ್ರಾಮೀಣ ಪ್ರದೇಶವಾದ ಡೊಂಬಿವಲಿ ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿ ತುಳು- ಕನ್ನಡಿಗರನ್ನು ಒಗ್ಗೂಡಿಸಿ ನೇರಳೆ ವೃಕ್ಷದ ಕೆಳಗೆ ಕಳೆದ 60 ವರ್ಷಗಳಿಂದ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಶ್ರದ್ಧೆ, ಭಕ್ತಿಯಿಂದ ನವರಾತ್ರಿ ಉತ್ಸವವನ್ನು ಅಚರಣೆ ಮಾಡಲು ಮಂಡಳಿಯನ್ನು ಸ್ಥಾಪಿಸಿದ ಇನ್ನ ಕುರ್ಕಿಲ ಬೆಟ್ಟು ದಾಸು ಶೆಟ್ಟಿಯವರಿಗೆ ನಮನಗಳು ಅತೀ ಕಿರಿದಾದ ಈ ಸ್ಥಳದಲ್ಲಿ ಅಸಂಖ್ಯಾತ ಭಕ್ತರು ಅಗಮಿಸಿ ದರ್ಶನ ಪಡೆಯುವುದನ್ನು ಕಂಡಾಗ ಜಗನ್ಮಾತೆಯ ಶಕ್ತಿ ಈ ಸ್ಥಳದಲ್ಲಿದೆ ಎಂದು ಭಾಸವಾಗುತ್ತದೆ.ಈ ಸ್ಥಳಕ್ಕೆ ಬರಲು ನನಗೆ ಪ್ರೇರಣೆ ನೀಡಿದವರು ನನ್ನ ಆತ್ಮೀಯರಾದ ಇನ್ನಂಜೆ ಶಶಿಧರ ಶೆಟ್ಟಿ ಅವರಿಗೆ ಮನದಾಳದ ಕೃತಜ್ಞತೆಗಳು ನಿಮ್ಮ ಸಂಸ್ಥೆಯ ಒಗ್ಗಟ್ಟುನ್ನು ಕಂಡು ಸಂತೋಷವಾಗುತ್ತಿದೆ. ಕಳೆದ 60 ವರ್ಷಗಳಿಂದ ಭಯ, ಭಕ್ತಿ, ಶ್ರದ್ಧೆಯಿಂದ ನವರಾತ್ರಿ ಉತ್ಸವವನ್ನು ಅಚರಿಸಿಕೊಂಡು ಬರುತ್ತಿರುವ ನಿವೆಲ್ಲರೂ ಧನ್ಯರು ಶ್ರೀ ದುರ್ಗೆಯ ಅನುಗ್ರಹದಿಂದ ಮಂಡಳಿಯ ವಜ್ರ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಸಂಸ್ಥೆಯು ಉತ್ತರೋತ್ತರ ಬೆಳೆದು ಇತರ ಸಂಸ್ಥೆಗೆ ಮಾದರಿ ಸಂಸ್ಥೆಯಾಗಲಿ ಎಂದು ಬಂಟರ ಸಂಘ ಮುಂಬಯಿ ಇದರ ಕಾರ್ಯದರ್ಶಿ ಕಾರ್ಯಕ್ರಮದ ಸಹ ಪ್ರಾಯೋಜಕರಾದ ಡಾ. ಆರ್. ಕೆ. ಶೆಟ್ಟಿ ನುಡಿದರು
ಅವರು ಅಕ್ಟೋಬರ್4 ರ ಶುಕ್ರವಾರದಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಇದರ ವಜ್ರ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ ಮಾತನಾಡುತ್ತಾ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ನವರಾತ್ರಿ ಉತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದೆ ವಜ್ರ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕರು ತುಂಬು ಹೃದಯದಿಂದ ಸಹಕಾರ ನೀಡಿದ್ದಾರೆ ಡೊಂಬಿವಲಿಯ ಹಿರಿಯ ಉದ್ಯಮಿ ದಿ.ಕಿಟ್ಟಣ್ಣ ಶೆಟ್ಟಿಯವರ ಮಕ್ಕಳು ಹಾಗೂ ಬಂಟರ ಸಂಘ ಮುಂಬಯಿ ಇದರ ಕಾರ್ಯದರ್ಶಿ , ಜೀವ ವಿಮಾ ನಿಗಮದಲ್ಲಿ ಭಾರತ ದೇಶ ಕಂಡ ಅತ್ಯುತ್ತಮ ಜೀವ ವಿಮಾ ಎಜೆಂಟ್, 30 ಕ್ಕೂ ಹೆಚ್ಚು ವರ್ಷ ಮಿಲಿಯನ್ ಡಾಲರ್ ರೌಂಡ್ ಟೇಬಲ್ ( ಎಂ. ಡಿ. ಆರ್. ಟಿ) ಪ್ರಶಸ್ತಿಯನ್ನು ಪಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಅರ್.ಕೆ. ಶೆಟ್ಟಿ ಯವರು ಅಗಮಿಸಿದ್ದಾರೆ ಇವರೆಲ್ಲರಿಗೆ ಶ್ರೀ ದುರ್ಗೆ ಅಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದರು
ವೇದಮೂರ್ತಿ ಶುಭಕರ್ ಭಟ್ ಮಾತನಾಡುತ್ತಾ ಭಕ್ತರ ಶ್ರದ್ಧೆ, ಭಕ್ತಿ, ಸಹಕಾರದಿಂದ ನವರಾತ್ರಿ ಉತ್ಸವ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅದಿ ಶಕ್ತಿ ಎಲ್ಲರನ್ನೂ ಉದ್ಧರಿಸಲಿ ಎಂದರು.
ಇದೇ ಸಂದರ್ಭದಲ್ಲಿ ಡೊಂಬಿವಲಿ ಪರಿಸರದ ಎಲ್ಲಾ ಸಂಘ- ಸಂಸ್ಥೆಗಳನ್ನು ಹಾಗೂ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ.ಶೆಟ್ಟಿ ಯವರನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿವಿಧ ಸಂಘ- ಸಂಸ್ಥೆಗಳಿಂದ ಭರತನಾಟ್ಯ, ವಿವಿಧ ನೃತ್ಯ ನಡೆಯಿತು
ಕಾರ್ಯಕ್ರಮದ ನಿರೂಪಣೆಯ ಯನ್ನು ವೈಶಾಕ್ ಶೆಟ್ಟಿ ಮತ್ತು ಬುವನ್ ಶೆಟ್ಟಿ ನಿರೂಪಿಸಿದರೆ ಸಂಘ- ಸಂಸ್ಥೆಯ ಯಾದಿ ಮತ್ತು ಧನ್ಯವಾದವನ್ನು ಚಿನ್ಮಯ ಸಾಲ್ಯಾನ್ ನೀಡಿದರು.
ವೇದಿಕೆಯಲ್ಲಿ ಡಾ. ಅರ್.ಕೆ ಶೆಟ್ಟಿ, ಶೈಲೇಶ್ ಶೆಟ್ಟಿ ದಂಪತಿ, ಧರ್ಮದರ್ಶಿ ಅಶೋಕ್ ಶೆಟ್ಟಿ, ಗೋಪಾಲ ಶೆಟ್ಟಿ, ಶುಭಕರ್ ಭಟ್, ವಿಲಾಸಿನಿ ಶೆಟ್ಟಿ ಉಪಸ್ಥಿತರಿದ್ದರು