
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ,
ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನ ವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಅ. 6: ಶ್ರೀ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದವರಿಗೆ ದಿ. ಸಂಜೀವ ಶೆಟ್ಟಿಯವರ ಹೆಸರು ಚಿರ ಪರಚಿತ ಸಂಜೀವ ಶೆಟ್ಟಿಯವರು ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಈ ಮಂಡಳಿಯನ್ನು ಎತ್ತರಕ್ಕೆ ಏರಿಸಿದವರು. ದಿ. ಸಂಜೀವ ಶೆಟ್ಟಿಯವರ ಹೆಸರಿನಲ್ಲಿ ಇಂದು ಅವರ ಸುಪುತ್ರಿ ಈ ವೇದಿಕೆಯನ್ನು ನೀಡಿದ್ದಾರೆ ತಮ್ಮ ತಂದೆ ಸೇವೆ ಸಲ್ಲಿಸಿದ ಈ ಮಂಡಳಿಯ ಬಗ್ಗೆ ಗೌರವವನ್ನಿಟ್ಟಿದ್ದಾರೆ ಇದು ಬಹಳ ಅಭಿಮಾನದ ವಿಷಯ, ದಿ. ಸಂಜೀವ ಶೆಟ್ಟಿಯವರ ಮಕ್ಕಳು ಮಾತ- ಪಿತರ ಬಗ್ಗೆ ಎಷ್ಟೊಂದು ಪ್ರೀತಿಯನ್ನಿಟ್ಟಿದ್ದಾರೆ ಇದೇ ರೀತಿ ಎಲ್ಲಾ ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನ ವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು ಇಂದು ಖ್ಯಾತ ಗಾಯಕ ಪುತ್ತೂರು ಜಗದೀಶ್ ಅಚಾರ್ಯ ಇವರಿಂದ ಸಂಗೀತಾ ಗಾನ ಸಂಭ್ರಮ ಜರಗಲಿದೆ ಈ ಸಂಭ್ರಮ ಯಶಸ್ವಿಯಾಗಲಿ ಜಗದೀಶ್ ಅಚಾರ್ಯ ಮುಂಬಯಿದಾಂತ್ಯ ಸಂಗೀತಾ ಗಾನ ಸಂಭ್ರಮ ನೀಡುವಂತಾಗಲಿ ಎಂದು ಮಂಡಳಿಯ ಧರ್ಮದರ್ಶಿ ಅಸೋಕ್ ಶೆಟ್ಟಿ ನುಡಿದರು.
ಅವರು ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶುಭಾಕರ್ ಭಟ್ ಮಾತನಾಡುತ್ತಾ 60 ವರ್ಷದ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಂಡಳಿ ವಜ್ರ ಮಹೋತ್ಸವ ಅಚರಿಸುತ್ತಿದೆ ಇಂದು ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಜಗದೀಶ್ ಅಚಾರ್ಯ ಪುತ್ತೂರು ಇವರಿಂದ ನಿರ್ವಿಘ್ನಾವಾಗಿ ಜರಗಲಿ ಶ್ರೀ ದುರ್ಗೆಯ ಕೃಪೆ ಸದಾ ಜಗದೀಶ್ ಅಚಾರ್ಯರ ಮೇಲಿರಲಿ ಅವರ ಸಿರಿ ಕಂಠದಲ್ಲಿ ಸರಸ್ವತಿ ಸದಾ ನೆಲಸಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶುಭ ಸುರೇಶ್ ನಮ್ಮ ತಂದೆ ಮತ್ತು ತಾಯಿ ಈ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು ಅವರ ಸೇವಾ ಭಾವನೆ ಮಾರ್ಗದರ್ಶನದಿಂದ ನಾವು ಸದಾ ಇಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ, ಪಶ್ಚಿಮ ವಿಭಾಗದ ತಾಯಿ ದುರ್ಗೆಯ ಅನುಗ್ರಹದಿಂದ ನಾವು ಜೀವನದಲ್ಲಿ ಯಶಸ್ಸನ್ನು ಕಂಡಿದ್ದೇವೆ ತಾಯಿಯ ಅನುಗ್ರಹ ಸದಾ ನಮ್ಮ ಮೇಲಿರಲಿ ಎಂದರು.
ಇದೇ ಸಂದರ್ಬದಲ್ಲಿ ವೇದಮೂರ್ತಿ ಶುಭಕರ್ ಭಟ್ ಅವರನ್ನು ಮತ್ತು ಇಂದಿನ ಕಾರ್ಯಕ್ರಮದ ಪ್ರಾಯೋಜಕರಾದ ಶುಭ ಸುರೇಶ್ ಹಾಗೂ ಖ್ಯಾತ ಗಾಯಕ ತುಳನಾಡ ಗಾನ ಗಂಧರ್ವ ಬಿರುದಾಂಕಿತ ಜಗದೀಶ್ ಅಚಾರ್ಯ ಪುತ್ತೂರು ಇವರನ್ನು ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನಿಸಿದರು ಹಾಗೂ ಸ್ಥಳೀಯ ಸಂಘ- ಸಂಸ್ಥೆಯನ್ನು ಸತ್ಕರಿಸಲಾಯಿತು.
ಶ್ರೇಯಾ ಅವರ ಪ್ರಾರ್ಥನೆ ಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವೇದಿಕೆಯ ಮೇಲೆ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಗೋಪಾಲ ಶೆಟ್ಟಿ, ಜಗದೀಶ್ ಅಚಾರ್ಯ ಪುತ್ತೂರು, ಕಸ್ತೂರಿ ಶೆಟ್ಟಿ, ಶುಭಾ ಸುರೇಶ್ ದಂಪತಿ, ಸುನೀಲ್ ಶೆಟ್ಟಿ ದಂಪತಿ, ಶುಭಾಕರ್ ಭಟ್, ವಿಲಾಸಿನಿ ಶೆಟ್ಟಿ ಉಪಸ್ಥಿತರಿದ್ದರು
ಕೊನೆಯಲ್ಲಿ ಸುಮಾರು ಮೂರು ಘಂಟೆಗೂ ಅಧಿಕ ಅವದಿಯಲ್ಲಿ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಅಚಾರ್ಯ ಮತ್ತು ಬಳಗ ತಮ್ಮ ಸಿರಿ ಕಂಠದಿಂದ ಡೊಂಬಿವಲಿ ಕಲಾ ಪ್ರೇಕ್ಷಕರನ್ನು ಮಂತ್ರ ಮುಗ್ಧ ಗೊಳಿಸಿದರು.